ಬೆಂಗಳೂರು: ಬಿಜೆಪಿ (BJP) ಸರ್ಕಾರ ಇದ್ದಾಗ ಯಾಕೆ ಅರ್ಕಾವತಿ ರೀಡೂ ಪ್ರಕರಣದ (Arkavati Redo) ವರದಿಯನ್ನ ಅಧಿವೇಶನದಲ್ಲಿ ಮಂಡನೆ ಮಾಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ.
ಅರ್ಕಾವತಿ ರೀಡೂ ವಿಚಾರವಾಗಿ ರಾಜ್ಯಪಾಲರು ವರದಿ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರು ಬರೆದಿರುವ ಪತ್ರದ ಬಗ್ಗೆ ನೋಡ್ತೀನಿ. ಆದರೆ ಬಿಜೆಪಿ ಅವರೇ 4 ವರ್ಷ ಅಧಿಕಾರದಲ್ಲಿ ಇದ್ದರು. ಆಗ ಯಾಕೆ ಪತ್ರ ಬರೆಯಲಿಲ್ಲ? ಬಿಜೆಪಿಯವರು ಅಧಿಕಾರದಲ್ಲಿ ಇದ್ದರು ಆಗ ಯಾಕೆ ಅಧಿವೇಶನದಲ್ಲಿ ವರದಿ ಮಂಡನೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಪಘಾತಕ್ಕೀಡಾದವರ ರಕ್ಷಣೆಗೆ “ಆಪತ್ಕಾಲಯಾನ”: 65 ನೂತನ ಅಂಬುಲೆನ್ಸ್ ಚಾಲನೆ ನೀಡಿದ ಸಿಎಂ
ಬಿಜೆಪಿ ಅವರೇ 4 ವರ್ಷ ಇದ್ದರು, ಈಗ ಸಿ.ಟಿ ರವಿ ಪತ್ರ ಬರೆದಿದ್ದಾರೆ. ಸಿ.ಟಿ ರವಿ (C.T Ravi) ಅವರೇ ಅವತ್ತು ಮಂತ್ರಿ ಆಗಿದ್ದರು ಆಗ ಯಾಕೆ ವರದಿ ಬಿಡುಗಡೆ ಮಾಡಲಿಲ್ಲ? ಈಗ ಕೇಶವನಾರಾಯಣ ಅನ್ನೋರ ಸಮಿತಿ ಇದೆ. ಅವೆಲ್ಲ ನೋಡಬೇಕು. ಅವೆಲ್ಲ ನೋಡಿ ಮುಂದೆ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೂ ರಾಜ್ಯಪಾಲರು ರಿಪೋರ್ಟ್ ಕೇಳೋದು ಸರಿಯಲ್ಲ: ಸಿದ್ದರಾಮಯ್ಯ