ಬೆಂಗಳೂರು: ತೈಲ ಬೆಲೆ ಏರಿಕೆ (Petrol-Diesel Price Hike) ವಿರೋಧಿಸಿ ಬಿಜೆಪಿ (BJP) ನಡೆಸಿದ ಸೈಕಲ್ ಪ್ರತಿಭಟನೆಗೆ ಸಚಿವ ಎಂ.ಬಿ ಪಾಟೀಲ್ (MB Patil) ಲೇವಡಿ ಮಾಡಿದ್ದಾರೆ. ಬಿಜೆಪಿ ಅವರು ಸೈಕಲ್ ತುಳಿಯಲಿ ಆರೋಗ್ಯಕ್ಕೆ ಒಳ್ಳೆಯದು ಎಂದು ಟೀಕಿಸಿದ್ದಾರೆ.
ಬಿಜೆಪಿ ಪ್ರತಿಭಟನೆ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಯುಪಿಎ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಜಾಗತಿಕ ಮಾರ್ಕೆಟ್‌ನಲ್ಲಿ ಕಚ್ಚಾತೈಲ ಬೆಲೆ ಜಾಸ್ತಿ ಇತ್ತು. ಆಗಲೂ ತೈಲ ಬೆಲೆ ಕಡಿಮೆ ಇತ್ತು. ಮೋದಿ (Narendra Modi) ಸರ್ಕಾರ ಬಂದಾಗ ಕಚ್ಚಾತೈಲ ಬೆಲೆ ಕಡಿಮೆ ಆದರೂ ಮೋದಿ ಸರ್ಕಾರ ತೈಲಬೆಲೆ ಏರಿಕೆ ಮಾಡಿತ್ತು. ಆಗ ಯಾಕೆ ಬಿಜೆಪಿ ಅವರು ಪ್ರತಿಭಟನೆ ಮಾಡಿಲ್ಲ. ನಾವು 3 ರೂ. ಮಾತ್ರ ಜಾಸ್ತಿ ಮಾಡಿರೋದು. ಬೇರೆ ರಾಜ್ಯಗಳ ಜೊತೆ ನ್ಯಾಷನಲೈಸ್ ಮಾಡೋಕೆ ನಾವು ಏರಿಕೆ ಮಾಡಿದ್ದೇವೆ. ಬೆಲೆ ಏರಿಕೆ ಮಾಡಿದ್ದರೂ ಬೇರೆ ರಾಜ್ಯಕ್ಕಿಂತ ನಮ್ಮದು ಕಡಿಮೆ ಇದೆ ಎಂದು ಬೆಲೆ ಏರಿಕೆ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಸಾವು – ಮೃತರ ಸಂಖ್ಯೆ 37ಕ್ಕೆ ಏರಿಕೆ!
ಮೋದಿ ಸರ್ಕಾರದಲ್ಲಿ ಬೆಲೆ ಜಾಸ್ತಿ ಮಾಡಿದಾಗ ಮೋದಿ ಮುಂದೆ ಮಾತಾಡೋ ಧೈರ್ಯ ಇವರಿಗೆ ಇರಲಿಲ್ಲ. ಅವತ್ತು ಜಾಸ್ತಿ ಮಾಡಿದಾಗ ಯಾಕೆ ಜಾಸ್ತಿ ಮಾಡಿದ್ರಿ ಅಂತ ಮೋದಿಗೆ ಹೇಳಬೇಕಿತ್ತು. ನಮ್ಮ ರಾಜ್ಯದ ಸಂಸದರು ಮಾತಾಡಿಲ್ಲ. ಈಗ ಯಾಕೆ ಮಾತನಾಡುತ್ತಾರೆ. ಸುಮ್ಮನೆ ಬಿಜೆಪಿ ಅವರು ಸೈಕಲ್ ಪ್ರತಿಭಟನೆ ಮಾಡಿದ್ದಾರೆ. ಮಾಡಲಿ ಅದು ಅವರ ಆರೋಗ್ಯಕ್ಕೆ ಒಳ್ಳೆಯದು.ನಾವು ಕೂಡಾ ಹಣ ಕೂಡಿಸಬೇಕು. ಹೀಗಾಗಿ ಜಾಸ್ತಿ ಮಾಡಿದ್ದೇವೆ. ಅವತ್ತು ಮೋದಿ ಜಾಸ್ತಿ ಮಾಡಿದಾಗ ಅಶೋಕ್, ವಿಜೇಂದ್ರ ಹೋಗಿ ಯಾಕೆ ಕೇಳಲಿಲ್ಲ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ಇದನ್ನೂ ಓದಿ: ತೈಲ ದರ ಏರಿಕೆ ಖಂಡಿಸಿ ಸೈಕಲ್ ಜಾಥಾ – ವಿಜಯೇಂದ್ರ, ಅಶ್ವಥ್ ನಾರಾಯಣ್ ಸೇರಿ ಬಿಜೆಪಿ ನಾಯಕರು ವಶಕ್ಕೆ