ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಗಲಿ ಒಂದು ತಿಂಗಳು ಕಳೆದಿದೆ. ರಾಘು ಕುಟುಂಬಕ್ಕೆ, ಆಪ್ತರಿಗೆ ಸ್ಪಂದನಾ ಅಗಲಿಕೆಯ ಶಾಕ್‌ನಿಂದ ಹೊರಬಂದಿಲ್ಲ. ಈ ವೇಳೆ ‘ಭೂಮಿಗೆ ಬಂದ ಭಗವಂತ’ ಸೀರಿಯಲ್ ನಟ ನವೀನ್ ಕೃಷ್ಣ (Naveen Krishna) ಸ್ಪಂದನಾ ವಿಜಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪಂದನಾ ನಿರ್ಮಾಣದ (Production) ವಿಜಯ ನಟನೆಯ ‘ಕಿಸ್ಮತ್’ (Kismat Film) ಸಿನಿಮಾದಲ್ಲಿ ನವೀನ್ ಕೃಷ್ಣ ಅವರು ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನ ಬರೆದಿದ್ದಾರೆ. ಈ ವೇಳೆ, ಕಿಸ್ಮತ್ ಸಿನಿಮಾದಲ್ಲಿ ಹೀರೋಯಿನ್‌ಗೆ ಸ್ಪಂದನಾ ಹೆಸರಿಟ್ಟಿದ್ದರು. ಪಾತ್ರಕ್ಕೆ ಪತ್ನಿಯ ಹೆಸರಿಟ್ಟಿದ್ದಕ್ಕೆ ಆ ಹೆಸರನ್ನೇ ರಾಘು ಬದಲಾಯಿಸಿದ್ಯಾಕೆ? ಎಂದು ನಟ ನವೀನ್ ಕೃಷ್ಣ ಬಿಚ್ಚಿಟ್ಟಿದ್ದಾರೆ.
Advertisement
Advertisement
ಕಿಸ್ಮತ್ (Kismat) ಚಿತ್ರಕ್ಕೆ ನಾನೇ ಸಂಭಾಷಣೆ ಬರೆದಿದ್ದೆ, ಅವರಿಲ್ಲ ಅಂತಾ ನಾನು ಅನಿಸಿಕೊಳ್ಳೋಕೆ ನಾನು ಇಷ್ಟಪಡಲ್ಲ. ಅವರ ನಿಧನರಾದ ದಿನದಿಂದ ರಾಘು ಹತ್ತಿರ ನಾನು ಮಾತನಾಡಲಿಲ್ಲ. ಆ ಧೈರ್ಯ ನನಗಿಲ್ಲ. ವಿಜಯ, ಮಗ ಶೌರ್ಯ ಅವರು ಸಂತೋಷವಾಗಿರಲಿ ಎಂದು ಆಶಿಸುತ್ತೇನೆ. ಆದರೆ ಅವರ ನೋವು ಏನೀದೆ ಅದು ಮಾಯ ಆಗಲ್ಲ. ಆದರೂ ಜೀವನ ಮುಂದೆವರಿಯಬೇಕು. ಹಾಗಾಗಿ ರಾಘುಗೆ ಟೇಕ್ ಕೇರ್ ಎಂದು ಹೇಳುತ್ತೇನೆ.
Advertisement
Advertisement
ಕಿಸ್ಮತ್ (Kismat) ಚಿತ್ರದಲ್ಲಿ ನಾನು ಡೈಲಾಗ್ ಬರಿಬೇಕಾದ್ರೆ, ಆ್ಯಕ್ಚುಲಿ ಹೀರೋಯಿನ್‌ಗೆ ಸ್ಪಂದನಾ (Spandana) ಎಂದು ಹೆಸರಿಟ್ಟೆ. ಡೈಲಾಗ್ ಕೊಡುವಾಗ ವಿಜಯ ಸಖತ್ ಎಂಜಾಯ್ ಮಾಡಿ ಹೇಳ್ತಿದ್ದರು. ಆ ಹೀರೋಯಿನ್‌ಗೆ ಬೇರೆ ಪಾತ್ರಧಾರಿ ಫ್ಲರ್ಟ್ ಮಾಡೋ ತರಹ ಸೀನ್ ಇತ್ತು. Hai Baby What’s Your Name ಎಂದು ಕೇಳ್ತಾನೆ. ಹೀರೋಯಿನ್ ಸ್ಪಂದನಾ ಎನ್ನುತ್ತಾರೆ. ಆತ ನೋ ಡೌಂಟ್ ಯು ಸೋ ಬ್ಯೂಟಿಫುಲ್, ನಿಮ್ಮ ಹೆಸರಲ್ಲೇ ಸ್ಪಾ ಇದೆ ಎಂದು ಡೈಲಾಗ್ ಹೊಡಿತ್ತಾನೆ.
ಈ ಡೈಲಾಗ್ ವಿಜಯ ಕೇಳಿ, ಹೇ ಬೇಡ ಬೇಡ ನನ್ನ ಹೆಂಡ್ತಿ ಹೆಸರನ್ನ ಹೀರೋಯನ್ ಇಡಬೇಡ ಅಂದಿದ್ರು. ಎಷ್ಟು ಚೆನ್ನಾಗಿದೆ ಈ ಡೈಲಾಗ್ ಹೇಳಿದ್ರೆ ಎನಾಗುತ್ತೆ ಎಂದು ಹೇಳಿದ್ದೆ. ಅದಕ್ಕೆ ರಾಘು ನನ್ನ ಹೆಂಡ್ತಿ ಕೇಳಿ ಬೈತಾರೆ ಬೇಡ ಅಂದಿದ್ದರು. ಅವತ್ತು ಹೀರೋಯನ್ ಹೆಸರನ್ನ ಚೇಂಜ್ ಮಾಡಿದ್ವಿ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ
ಈ ಘಟನೆ ನಡೆದ ಮೇಲೆ ಸ್ಪಂದನಾನೇ ಬಂದು ತುಂಬಾ ಚೆನ್ನಾಗಿ ಸಂಭಾಷಣೆ ಬರೆದಿದ್ದೀರಾ ಎಂದು ಹೇಳಿದ್ದರು. ನನ್ನ ಕೆಲಸಕ್ಕೆ ಸ್ಪಂದನಾ ಬೆಂಬಲಿಸಿದ್ದರು. ತುಂಬಾ ಒಳ್ಳೆಯ ಹೆಣ್ಣು ಮಗಳು, ಒಳ್ಳೆಯ ಗೃಹಿಣಿ, ಎಲ್ಲಾ ರೀತಿಯ ಒಳ್ಳೆಯತನ ಇದ್ದಂತಹ ಹೃದಯ ಸ್ಪಂದನಾ ಅವರದ್ದು. ಆದರೆ ಇವತ್ತು ಅವರು ನಮ್ಮ ಜೊತೆ ಇಲ್ಲ ಎಂದು ನಟ ನವೀನ್ ಕೃಷ್ಣ ಭಾವುಕರಾಗಿದ್ದಾರೆ.
ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ಥೈಲ್ಯಾಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಿತು.
ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್ ಟಿವಿ ಡಿಜಿಟಲ್