ಉಡುಪಿ: ರಾಜ್ಯದ 15 ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ಅವಾಂತರಗಳು ಆಗಿದೆ. ಈ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಎರಡು ದಿನಗಳಲ್ಲಿ ಈಗಾಗಲೇ ನಾಲ್ಕು ಜಿಲ್ಲೆಗಳ ಪ್ರವಾಸ ಮಾಡಿದರು. ಉಡುಪಿ ಜಿಲ್ಲೆಯಲ್ಲಂತೂ ಉಪವಾಸವಿದ್ದು, ನೆರೆ ಕಡಲ್ಕೊರೆತ ಸ್ಥಳಗಳಿಗೆ ಭೇಟಿ ಕೊಟ್ಟರು.
ಮೈಸೂರು ಜಿಲ್ಲೆಯ ಮೂಲಕ ನೆರೆ ಪ್ರವಾಸ ಆರಂಭಿಸಿದ ಸಿಎಂ, ಕೊಡಗು ಜಿಲ್ಲೆಯಲ್ಲಿ ಭೂಕಂಪ ಮತ್ತು ಭೂ ಕುಸಿತವಾದ ಸ್ಥಳಗಳಲ್ಲಿ ಓಡಾಟ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶ ಮತ್ತು ಕಡಲ್ಕೊರೆತ ಸ್ಥಳಗಳ ವೀಕ್ಷಣೆ ಮಾಡಿದರು. ಐದು ತಾಲೂಕಿನಲ್ಲಿ ಓಡಾಟ ಮಾಡುತ್ತ ಉಡುಪಿಯ ಭತ್ತದ ಬೇಸಾಯ ಹಾನಿಯ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು. ಇದನ್ನೂ ಓದಿ: ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ
Advertisement
Advertisement
ಬೆಳಗ್ಗೆ 10 ಗಂಟೆಗೆ ಸಭೆಗೆ ಹಾಜರಾದ ಸಿಎಂ, ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದರು. ಅಲ್ಲಿಂದ ಆರ್‌ಎಸ್‍ಎಸ್ ಕಚೇರಿಗೆ ತೆರಳಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾದರು. ನಿಗದಿಯಾದ ಕಾರ್ಯಕ್ರಮದಂತೆ ಸಿಎಂ ಮಣಿಪಾಲದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ನಂತರ ಬೈಂದೂರು ತಾಲೂಕಿಗೆ ತೆರಳಬೇಕಿತ್ತು. ಅಲ್ಲಿಂದ ಬ್ರಹ್ಮಾವರ, ಕುಂದಾಪುರ ಮತ್ತು ಕಾಪು ತಾಲೂಕಿಗೆ ಬಂದು ನೆರೆ ಹಾನಿ ವೀಕ್ಷಣೆ ಮಾಡಬೇಕಾಗಿತ್ತು. ಈ ಹಿನ್ನೆಲೆ ಬೊಮ್ಮಾಯಿ ಅವರು ಊಟ ಬಿಟ್ಟು ನೇರವಾಗಿ ಬೈಂದೂರಿಗೆ ತೆರಳಿದರು.
Advertisement
Advertisement
ಒಂದು ಗಂಟೆಗೆ ಮಧ್ಯಾಹ್ನದ ಊಟ ಮಾಡಬೇಕಾದ ಸಿಎಂ ಸಂಜೆ 4 ಗಂಟೆಗೆ ಮಣಿಪಾಲದ ಕಂಟ್ರಿ ಇನ್ ಹೋಟೆಲ್‍ನಲ್ಲಿ ಊಟ ಮಾಡಿದ್ದಾರೆ. ಸಿಎಂ ತುಂಬಾ ಕಮೀಟೆಡ್. ಜನರನ್ನು ಕಾಯಿಸುವುದಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರಶಂಸಿಸಿದರು. ಇದನ್ನೂ ಓದಿ: ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು RSS, SDPIನಿಂದ ಸಾಧ್ಯವಿಲ್ಲ: ಪಿಣರಾಯಿ ವಿಜಯನ್
ಧಾರಾಕಾರ ಮಳೆ ಶುರುವಾದ ಕಾರಣ ಕಾಪು ತಾಲೂಕಿನ ಮುಳ್ಳೂರು ವೀಕ್ಷಣೆಯನ್ನು ಸಿಎಂ ರದ್ದು ಮಾಡಿ ನೇರವಾಗಿ ಮಂಗಳೂರಿಗೆ ತೆರಳಿದರು.