ಪತಿಯಿಂದ ದೂರವಾದ ನಂತರ ಡಿವೋರ್ಸ್ (Divorce) ಫೋಟೋಶೂಟ್ ಮಾಡಿಸಿ ಸಾಕಷ್ಟು ಸುದ್ದಿಯಾಗಿದ್ದರು ನಟಿ ಶಾಲಿನಿ (Shalini). ಯಾಕೆ ಈ ರೀತಿಯಲ್ಲಿ ಅವರು ಫೋಟೋಶೂಟ್ ಮಾಡಿಸಿದರು ಎನ್ನುವ ಕುರಿತು ಈವರೆಗೂ ಅವರು ಹೇಳಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಫೋಟೋಶೂಟ್ ಕುರಿತು ಶಾಲಿನಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮನದಾಳದ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
‘ಡಿವೋರ್ಸ್ ನಂತರ ಸಾಕಷ್ಟು ಜನರು ಡಿಪ್ರೆಷನ್ ಗೆ ಒಳಗಾಗುತ್ತಾರೆ. ಮನೆಯಿಂದ ಆಚೆ ಬರುವುದೇ ಇಲ್ಲ. ಅನೇಕರು ಪ್ರಾಣ ಕಳೆದುಕೊಂಡಿರುವುದನ್ನೂ ಕಂಡಿದ್ದೇನೆ. ಅಂತಹ ಹೆಣ್ಣು ಮಕ್ಕಳಿಗೆ ಧೈರ್ಯ ಕೊಡುವ ಉದ್ದೇಶದಿಂದ ಫೋಟೋಶೂಟ್ (Photo Shoot) ಮಾಡಿಸಿಕೊಳ್ಳಬೇಕಾಯಿತು. ಧೈರ್ಯದಿಂದ ಪರಿಸ್ಥಿತಿ ಎದುರಿಸಿ ಖುಷಿಯಾಗಿರಿ ಎನ್ನುವ ಸಂದೇಶವನ್ನು ಆ ಮೂಲಕ ಸಾರಿದ್ದೇನೆ’ ಎನ್ನುವುದು ಶಾಲಿನಿ ಮಾತು. ಇದನ್ನೂ ಓದಿ:ಮಗಳ ಸಿನಿಮಾದಲ್ಲಿ ಮೊಹಿದ್ದೀನ್ ಭಾಯ್ ಆಗಿ ಬಂದ ತಲೈವಾ- ’ಲಾಲ್ ಸಲಾಂ’ ಪೋಸ್ಟರ್ ಔಟ್
Advertisement
Advertisement
ಶಾಲಿನಿ ತಮಿಳಿನ (Tamil) ಪ್ರಸಿದ್ಧ ಕಿರುತೆರೆ ನಟಿ. ಮುಳ್ಳುಂ ಮಲರುಂ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಮಗಳೊಂದಿಗೆ ತಾನು ಒಂಟಿಯಾಗಿ ಇದ್ದೇನೆ ಎಂದು ಹಲವಾರು ಸಲ ಹೇಳಿಕೊಂಡಿದ್ದರು. ಡಿವೋರ್ಸ್ ವಿಚಾರವನ್ನು ಫೋಟೋಗಳ ಮೂಲಕ ಹಂಚಿಕೊಂಡು ಸುದ್ದಿಯಾದರು.
Advertisement
ಜೀವನದಲ್ಲಿ 99 ತೊಂದರೆಗಳಿವೆ. ಅವುಗಳಲ್ಲಿ ಗಂಡ ಕೂಡ ಒಬ್ಬ ಎನ್ನುವಂತಹ ಬರಹವನ್ನೂ ಫೋಟೋಗಳೊಂದಿಗೆ ಪೋಸ್ಟ್ ಮಾಡಿದ್ದರು. ಪತಿಯೊಂದಿಗೆ ಇರುವ ಫೋಟೋಗಳನ್ನು ಹರಿದು ಹಾಕುವ ಹಾಗೂ ಗಂಡ ಫೋಟೋವನ್ನು ಕಾಲಿನಿಂದ ತುಳಿಯುವಂತೆ ಫೋಟೋಶೂಟ್ ಮಾಡಿಸಿಕೊಂಡಿದ್ದರು.
ಡಿವೋರ್ಸ್ ನಂತರ ಮಗಳ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತಗೆದುಕೊಂಡಿದ್ದೇನೆ ಎಂದು ಹೇಳಿರುವ ನಟಿ, ಮಗಳೊಂದಿಗೆ ಒಂಟಿಯಾಗಿ ಬದುಕುತ್ತಿರುವುದನ್ನೂ ಹೇಳಿಕೊಂಡಿದ್ದಾರೆ. ಅಲ್ಲದೇ, ಮಗಳನ್ನು ಹೇಗೆ ಬೆಳೆಸಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ನಾನು ಧೈರ್ಯದಲ್ಲಿದ್ದೇನೆ ಎಂದಿದ್ದಾರೆ.
ಫೋಟೋಗಾಗಿ ನಾನಾ ಬಗೆಯಲ್ಲಿ ಪೋಸ್ ಕೊಟ್ಟಿರುವ ಶಾಲಿನಿ, ರೆಡ್ ಸ್ಲಿಟ್ ಡ್ರೆಸ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ಎಂಬ ಬೋರ್ಡ್ ಕೂಡ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಜೀವಕ್ಕೆ ಅಂತ್ಯ ಹಾಡುವ ಬದಲು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದು ಒಳ್ಳೆದು ಎಂಬ ಸಲಹೆಯನ್ನೂ ನೀಡಿದ್ದಾರೆ. ನಮ್ಮ ಜೀವನದಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ನಾವೇ ನಿರ್ಧಾರ ಮಾಡಬೇಕು. ಸಹ್ಯವಲ್ಲದ ದಾಂಪತ್ಯ ಮುರಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಜೀವನದಲ್ಲಿ ಎಲ್ಲರೂ ಖುಷಿಯಾಗಿ ಇರಬೇಕು ಎಂದು ಹೇಳಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ನಟಿಯೊಬ್ಬರು ಈ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ವಿಚ್ಚೇದನವನ್ನು ಸೆಲೆಬ್ರೇಟ್ ಮಾಡಿರುವುದಕ್ಕೆ ನಾನಾ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ ಅಭಿಮಾನಿಗಳು. ಒಂದಷ್ಟು ಜನ ಶಾಲಿನಿ ಪರವಾಗಿ ಮಾತನಾಡಿದ್ದರೆ, ಮತ್ತಷ್ಟು ಜನ ಶಾಲಿನ ಈ ನಡೆಯನ್ನು ಪ್ರಶ್ನಿಸಿದ್ದಾರೆ.