ನೀವೆಲ್ಲರೂ ಶಶಾಂಕ್ ನಿರ್ದೇಶಿಸಿರುವ `ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಸಿನಿಮಾ ಮಾಡೋದಕ್ಕೆ ಕಾತುರರಾಗಿರುತ್ತೀರಿ. ಆದಿ ಮತ್ತು ನಿಧಿ ಮತ್ತೆ ಒಂದಾಗಿರುವುದರಿಂದ ಬಿಗ್‍ಸ್ಕ್ರೀನ್‍ನ ಮೇಲೆ ಈ ಕ್ಯೂಟ್ ಕಪಲ್ಸ್ ನ ಕಣ್ತುಂಬಿಕೊಳ್ಳುವುದಕ್ಕೆ ಕುತೂಹಲಭರಿತರಾಗಿರುತ್ತೀರಿ. ಅಚ್ಚರಿ ಏನಪ್ಪ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಆದಿ ಮತ್ತು ನಿಧಿ ಹತ್ತಲ್ಲ, ಇಪ್ಪತ್ತಲ್ಲ, ಭರ್ತಿ 50 ಪ್ರಾಜೆಕ್ಟ್‍ಗಳನ್ನ ರಿಜೆಕ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ನಿಧಿಮಾ ನಮ್ಮೊಟ್ಟಿಗೆ ಮಾತನಾಡಿದ್ದಾರೆ. ಒಂದಿಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
Advertisement
ಆದಿ ಮತ್ತು ನಿಧಿ ಬೆಳ್ಳಿತೆರೆಯ ಬೊಂಬಾಟ್ ಜೋಡಿ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಕಿಕ್ಕೇರಿಸಿದ ಈ ಕ್ಯೂಟ್ ಕಪಲ್ಸ್ ಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ನೆಕ್ಸ್ಟ್ ಲೆವೆಲ್ ಫ್ಯಾನ್ ಬೇಸ್ ಜೊತೆಗೆ ಹೊಸದೊಂದು ಕ್ರೇಜ್ ಸೃಷ್ಟಿಸಿ, ಸೆನ್ಸೇಷನ್ ಸೃಷ್ಟಿಸಿರೋ ಈ ತಾರಾ ಜೋಡಿ ಹಿಂದೆ ಅಭಿಮಾನಿಗಳು ಮಾತ್ರವಲ್ಲ ನಿರ್ದೇಶಕರು ಮತ್ತು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಬಿಗ್‍ಸ್ಕ್ರೀನ್‍ಗೆ ಕಿಚ್ಚು ಹಚ್ಚಿ, ಬಾಕ್ಸ್ ಆಫೀಸ್‍ನಲ್ಲಿ ಬಂಗಾರದ ಬೆಳೆ ತೆಗೆಯೋ ಈ ಸ್ಟಾರ್ ಜೋಡಿನಾ ಹಾಕ್ಕೊಂಡು ಪಿಕ್ಚರ್ ಮಾಡಬೇಕು ಅಂತ ಹಪಹಪಿಸುತ್ತಿದ್ದಾರೆ. ಅಚ್ಚರಿ ಅಂದರೆ ಲವ್ ಮಾಕ್ಟೇಲ್ 1 ಹಾಗೂ 2 ಚಿತ್ರಗಳು ತೆರೆಗೆ ಬಂದ್ಮೇಲೆ ಸುಮಾರು 50 ಕಥೆಗಳು ಆದಿ-ನಿಧಿನಾ ಅರಸಿಕೊಂಡು ಬಂದಿವೆಯಂತೆ. ಆದರೆ, ಪುನಃ ಪುನಃ ತೆರೆಮೇಲೆ ಒಂದಾಗಲು ಬಯಸದ ಲವ್ ಬರ್ಡ್ಸ್, ಮೊಗ್ಗಿನ ಮನಸ್ಸು ಡೈರೆಕ್ಟರ್ ಕೆತ್ತಿದ ಕಥೆಗೆ ಮನಸೋತಿದ್ದಾರೆ. `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
Advertisement
Advertisement
ಅಂದ್ಹಾಗೇ, ಜನ ಆದಿ ಮತ್ತು ನಿಧಿನಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗಂತ, ಪದೇ ಪದೇ ಪೇರ್ ಆಗಿ ನಟಿಸೋದು ಸರಿಯಲ್ಲ ಎನ್ನುವ ಕಾರಣಕ್ಕೆ ಅರಸಿಕೊಂಡು ಬಂದಂತಹ ಸಿನಿಮಾಗಳನ್ನೆಲ್ಲಾ ತಿರಸ್ಕರಿಸಿದ್ದಂತೂ ನಿಜ. ಆದರೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನ ರಿಜೆಕ್ಟ್ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ನಿರ್ದೇಶಕ ಶಶಾಂಕ್ ಅವರು ಅದ್ಭುತವಾದ ಕಥೆನಾ ರಚಿಸಿದ್ದರಿಂದ ಮೊದಲು ಕೃಷ್ಣ ಅವರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟರು. ಡಾರ್ಲಿಂಗ್‍ಗೆ ಪ್ರೇಮಂ ಪೂಜ್ಯಂ ಬ್ಯೂಟಿ ಬೃಂದಾ (Brinda Acharya) ಜೊತೆಯಾದ್ರೂ ಕೂಡ ಆ ರೋಲ್ ಪ್ಲೇ ಮಾಡುವುದಕ್ಕೆ ನಾನು ಒಪ್ಪಿಗೆ ಸೂಚಿಸಿದೆ. ಇದೊಂದು ಸೆನ್ಸಿಬಲ್ ಪಾತ್ರ ಆಗಿದ್ದರಿಂದ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಆರಂಭದಲ್ಲಿ ನಂಗೆ ಭಯ ಇತ್ತು. ಆದರೆ, ಶಶಾಂಕ್‍ರಂತಹ (Shashank) ದೊಡ್ಡ ನಿರ್ದೇಶಕರ ಸಿನಿಮಾ ಕೈಬಿಡುವುದಕ್ಕೆ ನಾನು ಸಿದ್ದಳಿರಲಿಲ್ಲ. ಹೀಗಾಗಿ, ಆ ಕ್ಯಾರೆಕ್ಟರ್ ನ ಚಾಲೆಂಜ್ ಆಗಿ ತೆಗೆದುಕೊಂಡು ನಟಿಸಿದ್ದೇನೆ ಅಂತಾರೇ ನಟಿ ಮಿಲನ ನಾಗರಾಜ್.
Advertisement
ಅಷ್ಟಕ್ಕೂ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಮಿಲನ ಪಾತ್ರ ಏನು? ಈ ಕುತೂಹಲದ ಪ್ರಶ್ನೆಗೆ ನಿರ್ದೇಶಕರಾಗಲಿ, ಮಿಲನ ಆಗಲಿ ಉತ್ತರ ಕೊಡುತ್ತಿಲ್ಲ. ಕಾರಣ, ಮಿಲನ ಬಹುಮುಖ್ಯವಾದ ಪಾತ್ರ ನಿಭಾಯಿಸಿದ್ದಾರಂತೆ. ಇಲ್ಲಿವರೆಗೂ ಸಿಲ್ವರ್ ಸ್ಕ್ರೀನ್ ಮೇಲೆ ನಾವ್ಯಾರು ನೋಡಿರದ ಲುಕ್ ನಲ್ಲಿ ನಿರ್ದೇಶಕರು ನಿಧಿನಾ ತೋರಿಸಿದ್ದಾರಂತೆ. ಇಂಟ್ರೆಸ್ಟಿಂಗ್ ಮ್ಯಾಟರ್ ಏನಪ್ಪ ಅಂದರೆ ನಿಧಿ ಇಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಎಷ್ಟು ಬೋಲ್ಡ್ ಎಂಬುದಕ್ಕೆ ರಿಲೀಸ್ ಆಗಿರುವ ’90 ಹಾಕು ಕಿಟ್ಟಪ್ಪ’ ಹಾಡು ನೋಡಿದರೆ ಗೊತ್ತಾಗುತ್ತೆ. ಇದು ಜಸ್ಟ್ ಟೀಸರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ ಅಂತ ಅಂದುಕೊಳ್ಳಬಹುದು. ಇನ್ನೊಂದು ವಿಶೇಷ ಅಂದರೆ ಆದಿ-ನಿಧಿ ಫ್ಯಾನ್ಸ್ ಗೆ ನಿರಾಸೆಯಾಗಲ್ಲ. ಯಾಕಂದ್ರೆ, ಕೃಷ್ಣ ಹಾಗೂ ಮಿಲನ ಕಾಂಬಿನೇಷನ್ ದೃಶ್ಯಗಳು ಈ ಚಿತ್ರದಲ್ಲಿವೆ. ಸಿನಿಮಾಪ್ರೇಮಿಗಳಿಗೆ ಕಿಕ್ ಕೊಡುವಂತಹ, ಅಭಿಮಾನಿಗಳು ಹುಚ್ಚೇಳುವಂತಹ ಸನ್ನಿವೇಶಗಳನ್ನ ಡೈರೆಕ್ಟರ್ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಅದೆಲ್ಲವನ್ನೂ ತೆರೆಮೇಲೆ ನೋಡುವುದಕ್ಕೆ ಕೆಲವೇ ಕೆಲವು ದಿನಗಳು ಬಾಕಿಯಿವೆ.
ಶಶಾಂಕ್ ನಿರ್ದೇಶನದ ಎಲ್ಲಾ ಸಿನಿಮಾಗಳಂತೆ ಇಲ್ಲಿಯೂ ಒಂದು ಕ್ಯೂಟ್ ಲವ್‍ಸ್ಟೋರಿನಾ ಕಾಣಬಹುದು. ಜೊತೆಗೆ ಫ್ಯಾಮಿಲಿ ವ್ಯಾಲ್ಯೂಸ್, ತಾಯಿ-ಮಗನ ಸೆಂಟಿಮೆಂಟ್ ಈ ಪಿಕ್ಚರ್‍ನಲ್ಲಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಇದೆಲ್ಲವನ್ನೂ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೂಲಕ ಶಶಾಂಕ್ ಸೊಸೈಟಿಗೆ ತಿಳಿಸುವುದಕ್ಕೆ ಹೊರಟಿದ್ದಾರೆ. ಡಾಲಿಂಗ್ ಕೃಷ್ಣ (Darling Krishna), ಮಿಲನ ನಾಗರಾಜ್ (Milana Nagaraj), ಬೃಂದಾ ಆಚಾರ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ನಾಗಭೂಷಣ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಕೃಷ್ಣ-ಮಿಲನ ಜೋಡಿಯ ಆರನೇ ಕಾಂಬಿನೇಷನ್ ಚಿತ್ರ ಇದಾಗಿದ್ದು, ಲವ್ ಬರ್ಡ್ಸ್ ಚಿತ್ರದ ನಂತರ ಈ ಕ್ಯೂಟ್ ಪೇರ್ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಇದೇ ಜುಲೈ 28ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎನಲ್ಲೂ ಬಿಡುಗಡೆಯಾಗ್ತಿದೆ. ಆರ್ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿರುವುದು ವಿಶೇಷ.
Web Stories