ಇಸ್ರೇಲ್ ಮತ್ತು ಹಮಾಸ್ (Israel-Hamas War) ಬಂಡುಕೋರರ ನಡುವಿನ ಯುದ್ಧ ದಿನೇ ದಿನೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಯುದ್ಧದಿಂದಾಗಿ ಇಸ್ರೇಲ್ (Israel) ನಾಗರಿಕರು ತತ್ತರಿಸಿ ಹೋಗಿದ್ದಾರೆ. ಹಿಂದಿನಿಂದಲೂ ಇದು ಇಸ್ರೇಲಿಯನ್ನರು-ಪ್ಯಾಲೆಸ್ತೀನಿಯನ್ನರ ನಡುವಿನ ಸಂಘರ್ಷವಾಗಿಯೇ ಮುಂದುವರಿದುಕೊಂಡು ಬಂದಿದೆ. ಪ್ರತ್ಯೇಕ ರಾಷ್ಟ್ರದ ವಿಚಾರವಾಗಿ ಅನೇಕ ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಯುದ್ಧ, ದಾಳಿಗಳನ್ನು ಅನೇಕ ರಾಷ್ಟ್ರಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳ ದೃಷ್ಟಿಕೋನದ ಮೂಲಕವೇ ನೋಡುತ್ತಿವೆ.
ಕೆಲ ದಿನಗಳ ಹಿಂದೆಯಷ್ಟೇ ಇಸ್ರೇಲ್ ಮೇಲೆ ಹಮಾಸ್ (Hamas) ಬಂಡುಕೋರರು ದಾಳಿ ನಡೆಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಯುದ್ಧವನ್ನು ಘೋಷಿಸಿತು. ಇಂತಹ ಸಂದರ್ಭದಲ್ಲಿ ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ ಅನೇಕ ರಾಷ್ಟ್ರಗಳು ಇಸ್ರೇಲ್ ಬೆಂಬಲಕ್ಕೆ ನಿಂತವು. ಜಪಾನ್, ಕೆನಡಾ ದೇಶಗಳು ತಟಸ್ಥ ಧೋರಣೆ ಅನುಸರಿಸಿವೆ. ರಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳು ಇಸ್ರೇಲ್ ನಾಗರಿಕರ ಮೇಲೆ ಹಮಾಸ್ ಬಂಡುಕೋರರ ದಾಳಿಯನ್ನು ಖಂಡಿಸಿವೆ. ಆದರೆ ಪ್ಯಾಲಿಸ್ತೀನಿಯನ್ನರ ಪರ ವಾದಿಸಿವೆ. ಈ ಸಾಲಿಗೆ ಭಾರತದ ಕಾಂಗ್ರೆಸ್ ಪಕ್ಷವೂ ಸೇರಿಕೊಂಡಿದೆ. ಇದನ್ನೂ ಓದಿ: ಅರಬ್ ನಾಯಕರ ಜೊತೆಗಿನ ಬೈಡೆನ್ ಮೀಟಿಂಗ್ ಕ್ಯಾನ್ಸಲ್
Advertisement
Advertisement
ಪ್ಯಾಲೆಸ್ತೀನ್ (Palestine) ಜನರಿಗೆ ನೆಲೆ, ಸ್ವಯಂ ಆಡಳಿತದ ಹಕ್ಕು ಹಾಗೂ ಘನತೆಯ ಬದುಕನ್ನು ಕಲ್ಪಿಸಬೇಕು. ಇಸ್ರೇಲ್-ಹಮಾಸ್ ನಡುವಿನ ಕದನಕ್ಕೆ ತಕ್ಷಣ ವಿರಾಮ ಘೋಷಿಸಬೇಕು. ಎಲ್ಲ ವಿಷಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಬಹುಕಾಲದ ತನ್ನ ನಿಲುವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪುನರುಚ್ಛರಿಸಿದೆ. ಅಷ್ಟಕ್ಕೂ ಪ್ಯಾಲೆಸ್ತೀನ್ ಪರ ಕಾಂಗ್ರೆಸ್ ಮಾತನಾಡಲು ಕಾರಣವೇನು? ಈ ವಿಚಾರದಲ್ಲಿ ಮಹಾತ್ಮ ಗಾಂಧಿ ಅವರ ನಿಲುವನ್ನು ಕಾಂಗ್ರೆಸ್ (Congress) ಅನುಸರಿಸುತ್ತಿದೆಯೇ? ಗಾಂಧೀಜಿ ಅವರು ಪ್ಯಾಲೆಸ್ತೀನ್ ವಿಚಾರವಾಗಿ ಯಾವ ಧೋರಣೆ ಹೊಂದಿದ್ದರು? ಯಹೂದಿಗಳ ಬಗ್ಗೆ ಗಾಂಧಿ ಏನು ಹೇಳಿದ್ದರು? ಈ ಎಲ್ಲಾ ವಿಚಾರಗಳನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ.
Advertisement
ಯಹೂದಿಗಳ ಬಗ್ಗೆ ಗಾಂಧಿ ಹೇಳಿದ್ದೇನು?
ಅರಬ್-ಯಹೂದಿ ಸಮಸ್ಯೆ ಕುರಿತು ಮಹಾತ್ಮ ಗಾಂಧಿ (Mahatma Gandhi) ಅವರು 1938ರ ನ.26 ರಂದು ‘ಹರಿಜನ’ ದಿನಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟಿಸಿದ್ದರು. ಅದರಲ್ಲಿ, ‘ನನಗೆ ಯಹೂದಿಗಳ ಬಗ್ಗೆ ಸಹಾನುಭೂತಿಯಿದೆ. ಆದರೆ ನನಗೆ ಯಹೂದಿಗಳ ಬಗ್ಗೆ ಸಹಾನುಭೂತಿಯಿದೆ ಎಂದಾಕ್ಷಣ ಅವರ ಎಲ್ಲ ಬೇಡಿಕೆಗಳಿಗೆ ಸಮ್ಮತಿಯಿದೆ ಎಂದರ್ಥವಲ್ಲ. ತಮಗೆ ಪ್ರತ್ಯೇಕ ರಾಷ್ಟ್ರ ಬೇಕೆನ್ನುವ ಅವರ ಬೇಡಿಕೆ ನನಗೆ ಎಂದೂ ಸರಿಯೆನಿಸುವುದಿಲ್ಲ. ಬೈಬಲ್ ಇತ್ಯಾದಿಯನ್ನು ಉದ್ಧರಿಸಿ ತಾವು ಪ್ಯಾಲೆಸ್ತೀನ್‌ಗೆ ಹಿಂದಿರುಗಬೇಕು ಎನ್ನುವ ಅವರ ವಾದ ಅರ್ಥವಿಲ್ಲದ್ದು, ಅದರ ಬದಲು ಉಳಿದವರಂತೆ ಯಹೂದಿಗಳು ಕೂಡ ತಾವು ಹುಟ್ಟಿ ಬೆಳೆದ ದೇಶವನ್ನೇ ತಮ್ಮದೆಂದು ಪರಿಗಣಿಸುವುದು ಅಗತ್ಯ’ ಎಂದು ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿಗೆ 500 ಬಲಿ – ದಾಳಿ ಮಾಡಿದವರು ಯಾರು?
Advertisement
1947ರ ಸಂದರ್ಭದಲ್ಲಿ ಈಗಿನ ಇಸ್ರೇಲ್ ಆಕ್ರಮಿತ ಭೂಪ್ರದೇಶ ಆಗಿನ ಪ್ಯಾಲೆಸ್ತೀನ್ ಭೂಪ್ರದೇಶವಾಗಿತ್ತು. ನಂತರ ಜಿಯೋನಿಸ್ಟ್ ಯಹೂದಿಗಳು ಪ್ಯಾಲೆಸ್ತೀನ್ ಭೂಪ್ರದೇಶವನ್ನು ಹಂತ ಹಂತವಾಗಿ ಆಕ್ರಮಿಸಿಕೊಳ್ಳುತ್ತಾ ಬಂದಿತು. ಪ್ರತ್ಯೇಕ ರಾಷ್ಟ್ರದ ಧೋರಣೆಯಿಂದ ಇಸ್ರೇಲ್ ಅನುಸರಿಸಿದ ಕ್ರಮ ಸರಿಯಲ್ಲ ಎಂಬುದು ಅನೇಕರ ವಾದ. ಆ ಸಾಲಿನಲ್ಲಿ ಗಾಂಧೀಜಿ ಅವರು ಸಹ ನಿಲ್ಲುತ್ತಾರೆ. ಯೂರೋಪ್‌ನಲ್ಲಿ ಯಹೂದಿ ಜನರ ದುಸ್ಥಿತಿಗೆ ಗಾಂಧೀಜಿ ಆಳವಾದ ಸಹಾನುಭೂತಿ ಹೊಂದಿದ್ದರು. ಆದರೆ ಈಗಾಗಲೇ ಪ್ಯಾಲೆಸ್ತೀನ್ ಅರಬ್ಬರು ವಾಸಿಸುತ್ತಿದ್ದ ಪ್ಯಾಲೆಸ್ತೀನ್‌ನಲ್ಲಿ ಬಲವಂತವಾಗಿ ತಮ್ಮದೇ ಆದ ರಾಷ್ಟ್ರ ರಚಿಸುವ ಪ್ರಯತ್ನಕ್ಕೆ ವಿರುದ್ಧವಾಗಿದ್ದರು. ಈ ಹಿನ್ನೆಲೆಯಲ್ಲಿ ಗಾಂಧಿ ಮತ್ತೊಂದು ಮಾತನ್ನು ಹೇಳುತ್ತಾರೆ.
‘ಪ್ಯಾಲೆಸ್ತೀನ್ ಅರಬ್ಬರಿಗೆ ಸೇರಿದ್ದು. ಇಂಗ್ಲಿಷ್ ಜನಕ್ಕೆ ಇಂಗ್ಲೆಂಡ್‌ಗೆ ಸೇರಿರುವ ಹಾಗೆ. ಫ್ರೆಂಚರಿಗೆ ಫ್ರಾನ್ಸ್ ಇದ್ದ ಹಾಗೆ. ಯಹೂದಿಗಳನ್ನು ಅರಬ್ಬರ ಮೇಲೆ ಹೇರುವುದು ತಪ್ಪು ಮತ್ತು ಅಮಾನವೀಯ ಕೂಡ. ಪ್ಯಾಲೆಸ್ತೀನ್‌ನಲ್ಲಿ ಇವತ್ತು ಏನಾಗುತ್ತಿದೆಯೋ ಅದಕ್ಕೆ ಯಾವ ನೈತಿಕ ಬೆಂಬಲವೂ ಇಲ್ಲ. ಯಹೂದಿಗಳ ಒತ್ತಾಯದಂತೆ ಅವರಿಗೆ ಒಂದು ಪ್ರತ್ಯೇಕ ರಾಷ್ಟ್ರ ನಿರ್ಮಾಣವಾದರೆ ಎರಡು ರಾಷ್ಟ್ರಗಳನ್ನು ಹೊಂದಿದ ಸೌಲಭ್ಯ ಅವರದಾಗುತ್ತದೆ. ತಾವು ಹುಟ್ಟಿ ಬೆಳೆದ ನಾಡು ಮತ್ತು ಹೊಸ ರಾಷ್ಟ್ರ. ಎರಡೂ ಕಡೆ ಸವಲತ್ತು ಪಡೆಯುವ ಅವಕಾಶ ಅವರಿಗೆ ದಕ್ಕುತ್ತದೆ. ಇದು ಸರಿಯಾದ ಮಾರ್ಗ ಅಲ್ಲ. ಇದರಿಂದ ಅರಬ್-ಯಹೂದಿ ಸಮಸ್ಯೆ ಬಗೆಹರಿಯುವುದಿಲ್ಲ’ ಎಂಬುದು ಮಹಾತ್ಮ ಗಾಂಧಿ ಅವರ ನಿಲುವಾಗಿತ್ತು.
ಗಾಂಧಿ ನಿಲುವನ್ನು ಕಾಂಗ್ರೆಸ್ ಅನುಸರಿಸುತ್ತಿದೆಯೇ?
ಪ್ಯಾಲೆಸ್ತೀನ್ ಪ್ರದೇಶ ಪ್ಯಾಲೆಸ್ತೀನಿಯನ್ನರಿಗೆ ಸೇರಬೇಕು ಎಂದು ಗಾಂಧೀಜಿ ಆಗ್ರಹಿಸಿದ್ದರು. ಗಾಂಧೀಜಿ ಅವರ ಅಭಿಪ್ರಾಯಗಳು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮೇಲೆ ಆಳವಾದ ಪ್ರಭಾವ ಬೀರಿತು. ಗಾಂಧಿ ನಿಲುವನ್ನು ಭಾರತ ಸ್ವಾತಂತ್ರ್ಯ ಪಡೆದ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಅನುಸರಿಸಿಕೊಂಡು ಬಂದವು. ಆದರೆ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಬದಲಾಯಿತು ಎಂದು ವಿಶ್ಲೇಷಿಸಲಾಗಿದೆ. ಪ್ಯಾಲೆಸ್ತೀನ್ ಜನತೆಗೆ ಬೆಂಬಲ ಎನ್ನುವುದರ ಬದಲಾಗಿ ಇಸ್ರೇಲ್‌ನೊಂದಿಗೆ ತಾಂತ್ರಿಕವಾಗಿ ಬಲವಾದ ಬಾಂಧವ್ಯವನ್ನು ಬೆಳೆಸುವುದು ದೇಶಕ್ಕೆ ಅಗತ್ಯ ಎನ್ನುವ ಹೊಸ ನೀತಿ ಅಳವಡಿಸಿಕೊಳ್ಳಲಾಯಿತು. ನಂತರ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಕೂಡ ವಾಜಪೇಯಿ ಅವರ ವಿದೇಶಿ ನೀತಿಯನ್ನೇ ಮುಂದುವರಿಸಿತು ಎಂದು ವಿಶ್ಲೇಷಿಸಲಾಗಿದೆ. ಆದರೆ ಈಗಿನ ಕಾಂಗ್ರೆಸ್ ನಾಯಕರು ಪ್ಯಾಲೆಸ್ತೀನಿಯನ್ನರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಈ ನಿಲುವು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿಚಾರವಾಗಿ ಗಾಂಧೀಜಿಯವರು ಹೊಂದಿದ್ದ ದೃಷ್ಟಿಕೋನಕ್ಕೆ ಪೂರಕವಾದಂತಿದೆ. ಇದನ್ನೂ ಓದಿ: ಹಮಾಸ್ ಬಂಡುಕೋರರಿಂದ ಹತ್ಯೆಗೀಡಾದ ಮಗಳ ಪತ್ತೆಗೆ ಆ್ಯಪಲ್ ವಾಚ್, ಫೋನ್ ಬಳಸಿದ ತಂದೆ
ಏನಿದು ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ?
ಕೆಲ ದಿನಗಳ ಹಿಂದಷ್ಟೇ ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ದಾಳಿ ನಡೆಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಹಮಾಸ್ ಬಂಡುಕೋರರ ವಿರುದ್ಧ ಇಸ್ರೇಲ್ ಸಮರ ಸಾರಿತು. ಈ ಹೋರಾಟವು ಇಸ್ರೇಲಿಗಳು ಮತ್ತು ಪ್ಯಾಲಿಸ್ತೀನಿಯನ್ನರ ನಡುವಿನ 7 ದಶಕಗಳ ಸಂಘರ್ಷದ ಮತ್ತೊಂದು ಬೆಳವಣಿಗೆ ಎಂದು ಹೇಳಬಹುದು. ಈ ಸಂಘರ್ಷದ ಹಿನ್ನೆಲೆಯನ್ನು ನೋಡೋಣ.
ಮೊದಲನೆಯ ಮಹಾಯುದ್ಧದಲ್ಲಿ ಆಟೋಮನ್ ಸಾಮ್ರಾಜ್ಯವನ್ನು ಸೋಲಿಸಿದ ನಂತರ, ಯಹೂದಿ ಅಲ್ಪಸಂಖ್ಯಾತರು ಮತ್ತು ಅರಬ್ ಬಹುಸಂಖ್ಯಾತರು ವಾಸಿಸುತ್ತಿದ್ದ ಪ್ಯಾಲೆಸ್ತೀನ್ ಮೇಲೆ ಬ್ರಿಟನ್ ನಿಯಂತ್ರಣ ಸಾಧಿಸಿತು. ಈ ಸಂದರ್ಭದಲ್ಲಿ ಪ್ಯಾಲೆಸ್ತೀನ್‌ನಲ್ಲಿ ಯಹೂದಿ ನಾಡನ್ನು ರಚಿಸುವ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಸಮುದಾಯವು ಬ್ರಿಟನ್‌ಗೆ ವಹಿಸಿತು. ಇದು ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಹೆಚ್ಚಿಸಿತು.
1920 ಮತ್ತು 1940 ರ ದಶಕಗಳಲ್ಲಿ ಪ್ಯಾಲೆಸ್ತೀನ್ ಕಡೆಗೆ ಯಹೂದಿ ವಲಸಿಗರ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಾಯಿತು. ಏಕೆಂದರೆ ಯುರೋಪ್‌ನಲ್ಲಿ ಯಹೂದಿಗಳಿಗೆ ಕಿರುಕುಳ ನೀಡಲಾಗುತ್ತಿತ್ತು. ಅದನ್ನು ಸಹಿಸಲಾಗದೇ ಯಹೂದಿಗಳು ವಲಸೆ ಹೋದರು. ಹತ್ಯಾಕಾಂಡದ ಹಿನ್ನೆಲೆಯಲ್ಲಿ ತಮಗಾಗಿ ಒಂದು ನೆಲೆಯನ್ನು ಯಹೂದಿಗಳು ಹುಡುಕಲು ಪ್ರಾರಂಭಿಸಿದರು. ಪ್ಯಾಲೆಸ್ತೀನ್ ಕಡೆಗೆ ತಮ್ಮ ವಲಸೆ ಹೆಚ್ಚಿಸಿದರು. ಇದರಿಂದ ಯಹೂದಿಗಳು ಮತ್ತು ಅರಬ್ಬರ ನಡುವಿನ ಘರ್ಷಣೆ ಹೆಚ್ಚಾಯಿತು. ಅಲ್ಲದೇ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧವು ತೀವ್ರಗೊಂಡಿತು. 1947 ರಲ್ಲಿ ಯುನೈಟೆಡ್ ನೇಷನ್ಸ್, ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ಯಹೂದಿ ಮತ್ತು ಅರಬ್ ರಾಷ್ಟ್ರಗಳನ್ನಾಗಿ ವಿಭಜಿಸಲು ಮುಂದಾಯಿತು. ಯಹೂದಿ ನಾಯಕತ್ವವು ಈ ಯೋಜನೆಗೆ ಒಪ್ಪಿಗೆ ಸೂಚಿಸಿತು. ಆದರೆ ಅರಬ್ ಕಡೆಯವರು ಅದನ್ನು ತಿರಸ್ಕರಿಸಿದರು. ಇದನ್ನೂ ಓದಿ: ಯುದ್ಧಭೂಮಿ ಇಸ್ರೇಲ್‍ಗೆ ಬುಧವಾರ ಅಮೆರಿಕ ಅಧ್ಯಕ್ಷ ಭೇಟಿ
1948 ರಲ್ಲಿ ಈ ಕಲಹವನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ಬ್ರಿಟಿಷ್ ಅಧಿಕಾರಿಗಳು ತಮ್ಮ ಯೋಜನೆಯನ್ನು ಹಿಂತೆಗೆದುಕೊಂಡರು. ಯಹೂದಿ ನಾಯಕರು ಇಸ್ರೇಲ್ ಸ್ಥಾಪನೆಯನ್ನು ಘೋಷಿಸಿದರು. ಆದರೆ ಇದಕ್ಕೆ ಪ್ಯಾಲೆಸ್ತೀನಿಯರು ವಿರೋಧ ವ್ಯಕ್ತಪಡಿಸಿದರು. ಇಬ್ಬರ ನಡುವೆ ಯುದ್ಧ ನಡೆಯಿತು. ನೆರೆಯ ಅರಬ್ ದೇಶಗಳು ಮಿಲಿಟರಿ ಬಲದೊಂದಿಗೆ ಮಧ್ಯಪ್ರವೇಶಿಸಿದವು. ಲಕ್ಷಾಂತರ ಪ್ಯಾಲೆಸ್ತೀನಿಯನ್ನರು ಓಡಿಹೋದರು. ಎಷ್ಟೋ ಮಂದಿಯನ್ನು ಬಲವಂತವಾಗಿ ಮನೆಯಿಂದ ಓಡಿಸಲಾಯಿತು.
ಯುದ್ಧ ಮತ್ತು ಶಾಂತಿ
ನಂತರದ ವರ್ಷಗಳಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಸಂಘರ್ಷಗಳು ನಡೆಯುತ್ತಿವೆ. ಎರಡೂ ಕಡೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ಸಂಘರ್ಷಗಳಲ್ಲಿ ಪ್ಯಾಲೆಸ್ತೀನಿಯನ್ನರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. 1987 ರಲ್ಲಿ ಹರಕತ್ ಅಲ್-ಮುಕ್ವಾಮಾ ಅಲ್-ಇಸ್ಲಾಮಿಯಾನ ಸಂಕ್ಷಿಪ್ತ ರೂಪವಾದ ಹಮಾಸ್ ಸ್ಥಾಪನೆಯಾಯಿತು. ಇದನ್ನು ಪ್ಯಾಲೆಸ್ತೀನಿಯನ್ ಧರ್ಮಗುರು ಶೇಖ್ ಅಹ್ಮದ್ ಯಾಸಿನ್ ಎಂಬಾತ ಬಹುರಾಷ್ಟ್ರೀಯ ಸುನ್ನಿ ಇಸ್ಲಾಮಿ ಸಂಘಟನೆಯಾದ ಮುಸ್ಲಿಂ ಬ್ರದರ್‌ಹುಡ್‌ನ ರಾಜಕೀಯ ಅಂಗವಾಗಿ ಪ್ರಾರಂಭಿಸಿದ. ಎರಡು ಪ್ಯಾಲೆಸ್ತೀನಿಯನ್ ದಂಗೆಗಳು ಇಸ್ರೇಲಿ-ಪ್ಯಾಲೆಸ್ತೀನಿಯನ್ ಸಂಬಂಧಗಳ ಮೇಲೆ ಗಾಢವಾಗಿ ಪ್ರಭಾವ ಬೀರಿತು. ಇದು 1990 ರ ಶಾಂತಿ ಪ್ರಕ್ರಿಯೆಯನ್ನು ಕೊನೆಗೊಳಿಸಿತು. ಈ ಬೆಳವಣಿಗೆ ಸಂಘರ್ಷದ ಹೊಸ ಯುಗಕ್ಕೆ ನಾಂದಿ ಹಾಡಿತು. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?
ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್, 2000ರ ಜುಲೈ 11 ರಂದು ಕ್ಯಾಂಪ್ ಡೇವಿಡ್ ಶೃಂಗಸಭೆ ಕರೆದರು. ಇಸ್ರೇಲಿ ಪ್ರಧಾನ ಮಂತ್ರಿ ಎಹುದ್ ಬರಾಕ್ ಮತ್ತು ಪ್ಯಾಲೆಸ್ತೀನಿಯನ್ ಪ್ರಾಧಿಕಾರದ ಅಧ್ಯಕ್ಷ ಯಾಸರ್ ಅರಾಫತ್ ಮಾತುಕತೆಯಲ್ಲಿ ಭಾಗವಹಿಸಿದ್ದರು. ಆದರೆ ಶೃಂಗಸಭೆಯಲ್ಲಿನ ಮಾತುಕತೆ ಫಲಪ್ರದವಾಗಲಿಲ್ಲ. ಎರಡು ರಾಷ್ಟ್ರಗಳ ನಡುವಿನ ಸಂಬಂಧವು ಮತ್ತಷ್ಟು ಹದಗೆಟ್ಟಿತು. ಹೀಗಾಗಿ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯನ್ ಸಂಘರ್ಷ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ.
Web Stories