ನಕಲಿ ಗಾಂಧಿಗಳ ಮೇಲಿನ ಅನುಕಂಪ ದಲಿತ ನಾಯಕ ಖರ್ಗೆ ವಿಚಾರಣೆ ವೇಳೆ ಇರಲಿಲ್ಲವೇಕೆ? ಬಿಜೆಪಿ ಟಾಂಗ್‌

Public TV
1 Min Read
BJP Flag Final 6

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಗೆ ಇ.ಡಿ ವಿಚಾರಣೆ ವೇಳೆ ಪ್ರತಿಭಟನೆ ಮಾಡದ ವಿಚಾರವಾಗಿ ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ನಾಯಕ ಕಾಲೆಳೆದಿದೆ ಬಿಜೆಪಿ.

ಮಾನ್ಯ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರೇ, ನಕಲಿ ಗಾಂಧಿ ಕುಟುಂಬಸ್ಥರನ್ನು ಇ.ಡಿ ವಿಚಾರಣೆ ಮಾಡುತ್ತಿರುವಾಗ ಇದ್ದ ಅನುಕಂಪ, ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಚಾರಣೆ ಮಾಡುವಾಗ ಏಕಿರಲಿಲ್ಲ? ದಲಿತ ನಾಯಕ ಎಂಬ ಕಾರಣಕ್ಕಾಗಿ ಬೀದಿಗಿಳಿಯಲಿಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ. ಇದನ್ನೂ ಓದಿ: ದೊಡ್ಡವರಾದವರು ತನಿಖಾ ಸಂಸ್ಥೆಗಳಿಗೆ ಹೋಗಬಾರದು ಅಂತ ಇದೆಯಾ?: ಕಾಂಗ್ರೆಸ್ ವಿರುದ್ಧ ಸುಧಾಕರ್ ವಾಗ್ದಾಳಿ

ಟ್ವೀಟ್‌ನಲ್ಲೇನಿದೆ?
ನಕಲಿ ಗಾಂಧಿಗಳ ಮೇಲಿನ ಅಕ್ಕರೆ, ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪರವಾಗಿಲ್ಲವೇಕೆ? ರಾಜ್ಯ ಕಾಂಗ್ರೆಸ್ ನಾಯಕರು ಖರ್ಗೆ ಪರವಾಗಿ ಧ್ವನಿ ಎತ್ತಲಿಲ್ಲ. ಇದು ದಲಿತ ವಿರೋಧಿ ಧೋರಣೆಯಲ್ಲದೆ ಮತ್ತೇನು?

ಮಾನ್ಯ ಪ್ರಿಯಾಂಕ್‌ಖರ್ಗೆ, #IndiaWithRahulGandhi ಎಂದೆನ್ನುವ ಮುನ್ನ ನಿಮ್ಮ ತಂದೆಯನ್ನು ಇ.ಡಿ ತನಿಖೆ ಮಾಡುವಾಗ ಕಾಂಗ್ರೆಸ್ ನಿಮ್ಮ ಕುಟುಂಬದ ಪರವಾಗಿ ನಿಲ್ಲಲಿಲ್ಲವೇಕೆ ಎಂದು ಎಂದಾದರೂ ಯೋಚಿಸಿದ್ದೀರಾ? ನೀವ್ಯಾಕೆ ಅಂದು ತಂದೆಯ ಪರವಾಗಿ ಧ್ವನಿ ಎತ್ತಿಲ್ಲ? ಜನ್ಮದಾತನಿಗಿಂತ ನಕಲಿ ಗಾಂಧಿಗಳು ಹೆಚ್ಚಾದರೇ? ಇದನ್ನೂ ಓದಿ: ಇದು ಇಟಲಿ ಅಲ್ಲ, ದೇಶದ ಕಾನೂನಿಗೆ ಬೆಲೆ ಕೊಡಬೇಕು: ಆರ್. ಅಶೋಕ್

ಖರ್ಗೆಯವರನ್ನು ಇ.ಡಿ ತನಿಖೆ ಮಾಡುವಾಗ ಸಿದ್ದರಾಮಯ್ಯ ಹಾಗೂ ಡಿಕೆಶಿ ಜಾಣ ಮೌನವಹಿಸಿದ್ದರು. ಸಿಎಂ ಪದವಿಯ ಪ್ರಬಲ ಆಕಾಂಕ್ಷಿಯನ್ನು ತೆರೆಮರೆಗೆ ಸರಿಸುವ ಹುನ್ನಾರವಿತ್ತೇ?

ನಕಲಿ ಗಾಂಧಿ ಕುಟುಂಬ ಎದುರಿಸುತ್ತಿರುವ ನ್ಯಾಷನಲ್ ಹೆರಾಲ್ಡ್‌ ಪ್ರಕರಣದ ವಾಸ್ತವಾಂಶವಿದು. ಇಷ್ಟೆಲ್ಲಾ ಅಕ್ರಮ ಮಾಡಿರುವ ನಕಲಿ ಗಾಂಧಿಗಳನ್ನು ನ್ಯಾಯಾಲಯದ ಆದೇಶದಂತೆ ವಿಚಾರಿಸುವುದರಲ್ಲಿ ತಪ್ಪೇನಿದೆ? ಇದನ್ನೂ ಓದಿ: ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಭೇದಿ ಮಾಡಿಕೊಳ್ಳೋದೇ ಆಯ್ತು: ಪ್ರತಾಪ್‌ಸಿಂಹ ತಿರುಗೇಟು

ನಕಲಿ ಗಾಂಧಿಗಳ ಕಾನೂನಾತ್ಮಕ ವಿಚಾರಣೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ದೇಶದ ಕಾನೂನು ವ್ಯವಸ್ಥೆಯನ್ನು ಅಣಕಿಸುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಆಶಯಗಳಿಗೂ ಕಾಂಗ್ರೆಸ್‌ ಪಕ್ಷ ಕಳಂಕ ತರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *