Connect with us

Bengaluru City

ದಿಢೀರ್ ಆಗಿ ಕೈ ಮುಖಂಡ ಬೆಂಗಳೂರಿನಲ್ಲಿ ಸಿಎಂ ಕಾರನ್ನು ತಡೆಯಲು ಮುಂದಾಗಿದ್ದು ಯಾಕೆ?

Published

on

ಬೆಂಗಳೂರು: ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸಿಎಂ ಕಾರು ತಡೆದ ಪರಿಣಾಮ ಮಂಡ್ಯ ಎಸ್ ಪಿಗೆ ಸಿಎಂ ಕ್ಲಾಸ್ ತಗೊಂಡ ಬೆನ್ನಲ್ಲೇ ಇಂದು ನಗರದಲ್ಲಿ ಸಿಎಂ ಕಾರಿಗೆ ಅಡ್ಡ ಬಂದು ವ್ಯಕ್ತಿಯೊಬ್ಬರು ಮನವಿ ಸಲ್ಲಿಸಲು ಮುಂದಾದ ಘಟನೆ ನಡೆದಿದೆ.

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಈ ಘಟನೆ ನಡೆದಿದ್ದು, ಕಾರು ಗೃಹ ಕಚೇರಿಗೆ ಬರುತ್ತಿದ್ದಂತೆಯೇ ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮದ ನಿರ್ದೇಶಕ ಡಿ.ಶಿವಾನಂದ್ ಸಿಎಂ ಕಾರನ್ನು ಅಡ್ಡಗಟ್ಟಿ ಮನವಿ ಸಲ್ಲಿಸಲು ಮುಂದಾದ್ರು. ಈ ವೇಳೆ ಪೊಲೀಸರು ಕೂಡಲೇ ಅವರನ್ನು ಪಕ್ಕಕ್ಕೆ ಎಳೆದಿದ್ದಾರೆ. ಪೊಲೀಸರ ಈ ವರ್ತನೆಗೆ ಶಿವಾನಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಾನಂದ್, ಮರಬ್ಬಿಹಾಳ್ ಏತ ನೀರಾವರಿಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಬಾರಿ ಮನವಿ ಮಾಡಿಕೊಂಡಿದ್ವಿ. ಆದ್ರೆ 25 ವರ್ಷಗಳಿಂದ ಈ ಕೆಲಸ ಆಗಿಲ್ಲ. ಅದಕ್ಕೆ ಮಾಡಿಕೊಡ್ತೀನಿ ಅಂತಾ ಸಾಹೇಬ್ರು ಹೇಳಿದ್ರು. ಇಲ್ಲಿ ಸಣ್ಣ ನೀರಾವರಿ(ಮೈನರ್ ಇರಿಗೇಷನ್) ಗೆ ಹೋದ್ರೆ ಏನೂ ಮಾಡಿಲ್ಲ. ಸಿಎಂ ಕೈಯಿಂದ ಲೆಟರ್ ಬರೆದುಕೊಂಡು ಬನ್ನಿ. ಇಲ್ಲಂದ್ರೆ ಫೋನ್ ಮಾಡಿಸ್ರಿ. ನೀವು ಹೇಳ್ದಂಗೆ ಕೊಡೋಕೆ ಏನೈತ್ರಿ ಇಲ್ಲಿ. 6 ಸಾವಿರ ಕೋಟಿ ರೂ. ಬೇಕು ಅಂತಾ ಅವರು ಹೇಳ್ತಾರೆ. ಅದಕ್ಕೆ ಸರ್ ನಮ್ದು ನಿಮ್ದು ಮರ್ಯಾದೆ ಹೋಗತ್ತೆ. ಹಳ್ಳಿ ಜನ ಬೈತಾರೆ ನಮ್ನ. ಆಮೇಲೆ ವಲಸೆ ಹೋಗೋ ಪರಿಸ್ಥಿತಿ ಬರತ್ತೆ. ಹೀಗಾಗಿ ದಯಮಾಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಲು ಮುಂದಾದೆ ಅಂತಾ ಹೇಳಿದ್ರು.

ಇದನ್ನೂ ಓದಿ: ನಿನಗ್ಯಾರು ಐಪಿಎಸ್ ಕೊಟ್ಟಿದ್ದು?- ಮಂಡ್ಯ ಎಸ್‍ಪಿಗೆ ಸಿಎಂ ಸಾರ್ವಜನಿಕ ಬೈಗುಳ

https://www.youtube.com/watch?v=AHEukT7duXA

Click to comment

Leave a Reply

Your email address will not be published. Required fields are marked *