– ಕೌಂಟರ್ ಕೊಡಲು ಬಿಜೆಪಿ ರೆಡಿ
ಬೆಂಗಳೂರು: ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿದ ರಾಜ್ಯಸರ್ಕಾರ ಸೋಮವಾರಕ್ಕೆ ವಿಶ್ವಾಸ ಮತಯಾಚನೆಯನ್ನು ಮುಂದೂಡಿದಿದೆ. ಹಾಗಿದ್ರೆ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಗೆ ವಿಳಂಬ ಮಾಡ್ತಿರೋದು ಯಾಕೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
Advertisement
ವಿಳಂಬ ಯಾಕೆ?
ಸೋಮವಾರದವರೆಗೆ ಸಿಕ್ಕ ಕಾಲಾವಕಾಶ ಬಳಸಿ ಅತೃಪ್ತರ ಮನವೊಲಿಕೆಗೆ ಕೊನೆಯ ಪ್ರಯತ್ನ ಮಾಡುತ್ತಿರಬಹುದು. ವಿಪ್, ರಾಜ್ಯಪಾಲರ ಕುರಿತ ಅರ್ಜಿಗಳು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬರುವ ನಿರೀಕ್ಷೆ ಇದೆ. ದೋಸ್ತಿ ಪಕ್ಷದ ಹೆಚ್ಚು ಸದಸ್ಯರು ಭಾಷಣದ ಮೂಲಕ ಬಿಜೆಪಿಗೆ ಮುಜುಗರ ತರುವುದು ಮಾಡುವ ಹಿನ್ನೆಲೆಯಲ್ಲಿ ವಿಳಂಬ ಮಾಡುತ್ತಿರಬಹುದು.
Advertisement
Advertisement
ಒಂದು ವೇಳೆ ರಾಜ್ಯಪಾಲರು ಸರ್ಕಾರ ವಜಾ ಮಾಡಿದರೆ ರಾಜಕೀಯ ಹೋರಾಟ, ರಾಜ್ಯಪಾಲರ ಈಗಿನ ನಡೆ ಖಂಡಿಸಿ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ನಡೆಸುವ ಪ್ಲಾನ್ ರೂಪಿಸಿರಬಹುದು. ಇಬ್ಬರು ಅತೃಪ್ತರನ್ನು ಅನರ್ಹಗೊಳಿಸಿ ಉಳಿದವರು ವಾಪಾಸ್ ಬರುವಂತೆ ಭಯ ಹುಟ್ಟಿಸುವುದು. ಸೋಮವಾರವೇ ವಿಶ್ವಾಸಮತ ಸಾಬೀತಿಗೆ ಯತ್ನಿಸಿ, ಸೋತು, ಸಿಂಪತಿಗೆ ಯತ್ನಿಸುವ ಸಾಧ್ಯತೆಗಳಿವೆ.
Advertisement
ದೋಸ್ತಿಗಳು ಹೀಗೆಲ್ಲ ಪ್ಲಾನ್ ಮಾಡಿಕೊಳ್ಳುತ್ತಿದ್ದರೆ ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದಿರೋ ಬಿಜೆಪಿಯವರು ಸುಮ್ನೆ ಇರುತ್ತಾರಾ ಅನ್ನೋ ಪ್ರಶ್ನೆ ಕಾಡುವುದು ಸಹಜ. ಹೀಗಾಗಿ ಬಿಜೆಪಿಯವರು ಕೂಡ ಕೌಂಟರ್ ಆಗಿ ಹಲವು ಪ್ಲಾನ್ಗಳನ್ನು ಹಾಕ್ಕೊಂಡಿದ್ದಾರೆ.
ಬಿಜೆಪಿ ಪ್ಲಾನ್ ಏನು?
ಸೋಮವಾರದ ಕಲಾಪ ಮುಗಿಯುವವರೆಗೆ ತಾಳ್ಮೆಯಿಂದ ಕಾಯಬಹುದು. ಬಹುಮತ ಸಾಬೀತಿಗೆ ನೀಡಿದ್ದ 2 ಆದೇಶ ಲೆಕ್ಕಿಸದ ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಬಹುದು. ರಾಜ್ಯಪಾಲರ ಆದೇಶ ಪಾಲನೆ ಮಾಡುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಬಹುದು.
ಸ್ಪೀಕರ್ ವಿರುದ್ಧವೇ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಬಹುದು. ಮತ್ತಷ್ಟು ವಿಳಂಬವಾದರೆ ನೇರವಾಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ದೂರು ನೀಡುವ ಸಾಧ್ಯತೆಗಳಿವೆ.