ಹುಬ್ಬಳ್ಳಿ: `ಸರಳ ವಾಸ್ತು’ ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರನ್ನು ಇಂದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾಲಿಗೆ ಅಡ್ಡಬಿದ್ದು ನಮಸ್ಕಾರ ಮಾಡುವ ನೆಪದಲ್ಲಿ ಬಂದ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
Advertisement
ಗುರೂಜಿ ಹುಬ್ಬಳ್ಳಿಗೆ ತೆಳಿದ್ದು ಯಾಕೆ?
ಕಳೆದ ಎರಡು ದಿನಗಳ ಹಿಂದೆಯಷ್ಟೇ ಚಂದ್ರಶೇಖರ್ ಗುರೂಜಿ ಅವರ ಅಣ್ಣನ ಮಗು ಸಾವನ್ನಪ್ಪಿತ್ತು. ಮೊಮ್ಮಗುವಿನ ಸಾವಿನಿಂದಲೇ ಇಡೀ ಕುಟುಂಬ ದುಃಖತಪ್ತವಾಗಿತ್ತು. ಮೊಮ್ಮಗುವನ್ನು ನೋಡುವುದಕ್ಕಾಗಿಯೇ ಗುರೂಜಿ ಶುಕ್ರವಾರ ಹುಬ್ಬಳ್ಳಿಗೆ ತೆರಳಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ತಮ್ಮ 2ನೇ ಪತ್ನಿಯೂ ಅದೇ ಹೋಟೆಲ್ ರೂಂನಲ್ಲಿದ್ದರು. ಇದನ್ನೂ ಓದಿ: ಗುರೂಜಿ ಹತ್ಯೆ ಹಿಂದೆ ಬೇನಾಮಿ ಅಪಾರ್ಟ್‌ಮೆಂಟ್ ಆಸ್ತಿ ಗಲಾಟೆ? – ಆಪ್ತನ ಪತ್ನಿ ಬಂಧನ
Advertisement
Advertisement
ಮೊದಲ ಪತ್ನಿಯ ಸಾವಿನ ಬಳಿಕ ಗುರೂಜಿ 2ನೇ ಮದುವೆಯಾಗಿದ್ದರು. ಮೊದಲ ಪತ್ನಿಯ ಮಗಳು ಮುಂಬೈನಲ್ಲಿ ವಾಸವಾಗಿದ್ದಾರೆ. ಗುರೂಜಿ ಒಟ್ಟು 4 ದಿನಗಳಿಗೆ ರೂಂ ಪಡೆದಿದ್ದರು. ರೂಂ ನಂಬರ್ 220ರಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ತಮ್ಮ ಮೊಮ್ಮಗುವಿನ ಕಾರ್ಯ ಮುಗಿಸಿ ಹೋಟೆಲ್‌ನಲ್ಲೇ ತಂಗಿದ್ದರು. ಇಂದು ಅಥವಾ ನಾಳೆ ರೂಂ ಖಾಲಿ ಮಾಡಿ ತಮ್ಮ ಮಗಳನ್ನು ನೋಡಲು ಮುಂಬೈಗೆ ತೆರಳಲು ಮುಂದಾಗಿದ್ದರು. ಇದನ್ನೂ ಓದಿ: ದೆಹಲಿ ಪೊಲೀಸರಿಂದ ಸಂಸದ ತೇಜಸ್ವಿ ಸೂರ್ಯ ವಿಚಾರಣೆ