ಶಿವಮೊಗ್ಗ: ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿ ಮುಚ್ಚಿಟ್ಟಿದೆ. ಜಾತ್ಯಾತೀತವಾಗಿರುವ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೇ? ಈ ಜಾತಿ ಗಣತಿ ಯಾಕೇ ಬೇಕು? ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Tirtha Shri) ಪ್ರಶ್ನಿಸಿದ್ದಾರೆ.
ಶಿವಮೊಗ್ಗದ (Shivamogga) ಮಲ್ಲೇಶ್ವರ ನಗರದಲ್ಲಿರುವ ಮಾಜಿ ಡಿಸಿಎಂ ಈಶ್ವರಪ್ಪ (K.S Eshwarappa) ಅವರ ಮನೆಗೆ ಶ್ರೀಗಳು ಭೇಟಿ ನೀಡಿದ್ದರು. ಈ ವೇಳೆ ಅವರು ಮಾತನಾಡಿದ ಅವರು, ಒಂದು ಕಡೆ ಜಾತಿ ಆಧಾರದಲ್ಲಿ ರಾಜೀಕಿಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿಗಣತಿ ಎನ್ನುತ್ತೀರಿ. ಈ ಜಾತಿ ಗಣತಿ ಯಾಕೇ ಎನ್ನುವುದು ತಿಳಿಯುತ್ತಿಲ್ಲ ಎಂದಿದ್ದಾರೆ.
Advertisement
Advertisement
ನಾನು ಅಯೋಧ್ಯೆಗೆ ಹೋಗಿ ಬಂದಿದ್ದು, ಅನೇಕ ಜನ ಭಕ್ತರು ರಾಮತಾರಕ ಹೋಮ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರದ ಉಳಿದ ಕಾರ್ಯ ಭರದಿಂದ ನಡೆಯುತ್ತಿದೆ. ಇನ್ನೂ ಒಂದು ವರ್ಷದಲ್ಲಿ ಶ್ರೀರಾಮ ಮಂದಿರ ಪೂರ್ಣವಾಗಲಿದೆ. ರಾಮರಾಜ್ಯದ ಸ್ಥಾಪನೆಗಾಗಿ ನಮಗೆ ರಾಮ ಮಂದಿರ ಬೇಕು. ಇವತ್ತು ಪ್ರಜಾರಾಜ್ಯ ಇದೆ ಆದರೂ ರಾಮರಾಜ್ಯ ಹೇಗೆ ಎಂದರೆ ರಾಮನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಲ್ಲಿ ಇರುವ ದುಃಖಿತರಿಗೆ ಸೇವೆ ಮಾಡುವುದೇ ರಾಮನ ಸೇವೆ ಆಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
Advertisement
Advertisement
ಈಶ್ವರಪ್ಪ ದಂಪತಿ ಪೇಜಾವರ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಈಶ್ವರಪ್ಪ, ಎವಿಬಿ ಉಡುಪಿ ಶ್ರೀ ಕೃಷ್ಣ ಮಠಕ್ಕೂ ನಮಗೂ ಕೃಷ್ಣ ಮತ್ತು ಕನಕದಾಸರ ಸಂಬಂಧ ಇದೆ. ಹೊಸಪೇಟೆಗೆ ಶ್ರೀಗಳು ಹೋಗುತ್ತಿದ್ದರಂತೆ, ಹಾಗಾಗಿ ಸೌಹಾರ್ದಯುತವಾಗಿ ನಮ್ಮ ಮನೆಗೆ ಬಂದಿದ್ದರು ಎಂದು ತಿಳಿಸಿದ್ದಾರೆ.