ಬರ್ಫಿ ಭಾರತೀಯ ಸಿಹಿಯಾಗಿದ್ದು ಹೆಚ್ಚಾಗಿ ಹಾಲನ್ನು ಬಳಸಿ ಮಾಡಲಾಗುತ್ತದೆ. ಇತರ ಹಲವು ಪದಾರ್ಥಗಳನ್ನು ಬಳಸಿ ವಿಧವಿಧವಾಗಿಯೂ ಮಾಡಲಾಗುತ್ತದೆ. ಡ್ರೈಫ್ರೂಟ್ಸ್ ಬರ್ಫಿ ಮಾಡೋದು ಹೇಗೆಂದು ನಾವು ಕೆಲ ದಿನಗಳ ಹಿಂದೆ ನೋಡಿದ್ದೇವೆ. ನಾವಿಂದು ಅಂಜೂರ ಹಾಗೂ ಖರ್ಜೂರ ಬಳಸಿ ಸಿಹಿಯಾದ ಬರ್ಫಿ ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವು ಕೂಡಾ ಇದನ್ನು ಮನೆಯಲ್ಲಿ ಮಾಡಿ ಆನಂದಿಸಿ.
Advertisement
ಬೇಕಾಗುವ ಪದಾರ್ಥಗಳು:
ಅಂಜೂರ – 1 ಕಪ್
ಖರ್ಜೂರ – 1 ಕಪ್
ನೀರು – 1 ಟೀಸ್ಪೂನ್
ಸೂರ್ಯಕಾಂತಿ ಎಣ್ಣೆ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಬಾದಾಮಿ – 3 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಗೋಡಂಬಿ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಪಿಸ್ತಾ – 2 ಟೀಸ್ಪೂನ್
ಏಲಕ್ಕಿ – 3 ಇದನ್ನೂ ಓದಿ: ನಾಗರ ಪಂಚಮಿ ಸ್ಪೆಷಲ್: ಸುಲಭವಾಗಿ ಅಕ್ಕಿ ಉಂಡೆ ಈ ರೀತಿ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಅಂಜೂರ ಹಾಗೂ ಖರ್ಜೂರವನ್ನು ಪ್ರತ್ಯೇಕವಾಗಿ ಬೆಚ್ಚಗಿನ ನೀರಿನಲ್ಲಿ 15-20 ನಿಮಿಷಗಳ ಕಾಲ ನೆನೆಸಿಡಿ.
* ಬಳಿಕ ನೀರನ್ನು ಹರಿಸಿ, ಅವೆರಡನ್ನೂ ಮಿಕ್ಸರ್ ಜಾರ್‌ಗೆ ಹಾಕಿ ಮೃದುವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ರುಬ್ಬುವ ವೇಳೆ 1-2 ಟೀಸ್ಪೂನ್ ನೀರು ಸೇರಿಸಿಕೊಳ್ಳಬಹುದು.
* ಸೂರ್ಯಕಾಂತಿ ಎಣ್ಣೆ ಮತ್ತು ತುಪ್ಪವನ್ನು ಒಂದು ಸಣ್ಣ ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಿ. ಬಳಿಕ ಅದನ್ನು ತಳವಿರುವ ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ.
* ಅದಕ್ಕೆ ಅಂಜೂರ ಹಾಗೂ ಖರ್ಜೂರದ ಪೇಸ್ಟ್ ಅನ್ನು ಸೇರಿಸಿ ಆಗಾಗ ಮಿಶ್ರಣ ಮಾಡುತ್ತಾ ಸುಮಾರು 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ನಂತರ ಅದಕ್ಕೆ ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ಏಲಕ್ಕಿ ಬೀಜಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಮಧ್ಯಮ ಉರಿಯಲ್ಲಿ ಬೇಯಿಸುವುದನ್ನು ಮುಂದುವರಿಸಿ, ಆಗಾಗ ಕೈಯಾಡಿಸುತ್ತಾ ಇನ್ನೊಂದು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ಈಗ ಉರಿಯನ್ನು ಆಫ್ ಮಾಡಿ, ಗ್ರೀಸ್ ಮಾಡಿದ ತಟ್ಟೆಗೆ ಈ ಮಿಶ್ರಣವನ್ನು ವರ್ಗಾಯಿಸಿ, ಸಮಾನವಾಗಿ ಹರಡಿ.
* ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಚೌಕಾಕಾರ ಇಲ್ಲವೇ ವಜ್ರಾಕಾರವಾಗಿ ಕತ್ತರಿಸಿಕೊಳ್ಳಿ.
* ಇದೀಗ ಅಂಜೂರ ಹಾಗೂ ಖರ್ಜೂರ ಬರ್ಫಿ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಹೀಗೆ ಮಾಡಿ ಸಿಂಪಲ್ ಪೀನಟ್ ಬಟರ್‌ನ ಮಿಠಾಯಿ
Advertisement
Web Stories