ಅಪರಾಧ ನಗರಗಳ ಪಟ್ಟಿಯಲ್ಲಿ ಬೆಂಗ್ಳೂರಿಗೆ 2ನೇ ಸ್ಥಾನ ಸಿಕ್ಕಿದ್ದು ಯಾಕೆ: ರಾಮಲಿಂಗಾ ರೆಡ್ಡಿ ನಿಜವಾದ ಕಾರಣ ವಿವರಿಸಿದ್ರು

Public TV
2 Min Read
ramalinga reddy

ಬೆಂಗಳೂರು: ಟ್ರಾಫಿಕ್ ಪೊಲೀಸರು ಜಾಸ್ತಿ ಕಾರ್ಯಚರಣೆ ಮಾಡಿದ್ದ ಹಿನ್ನೆಲೆಯಲ್ಲಿ ದೇಶದಲ್ಲಿ ಅಪರಾಧ ಪ್ರಕರಣಗಳು ದಾಖಲಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ ಎಂದು ಗೃಹಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಬಿಡುಗಡೆಗೊಳಿಸಿದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಬೆಂಗಳೂರು ಅತ್ಯಾಧಿಕ ಅಪರಾಧ ಪ್ರಕರಣ ದಾಖಲಾದ ನಗರ ಎಂಬ ವರದಿಯಾಗಿತ್ತು. ಆದರೆ ನಗರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ಗಮನಿಸಿದ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು ಒಂದು ಸಾವಿರ ಪ್ರಕರಣಗಳು ಕಡಿಮೆಯಾಗಿವೆ ಎಂದು ಸ್ಪಷ್ಟಪಡಿಸಿದರು.

ramalinga reddy 1

ಶುಕ್ರವಾರ ರಾಮಲಿಂಗಾರೆಡ್ಡಿರವರು ಬೆಂಗಳೂರು ನಗರ ಸಿ.ಎ.ಆರ್ ಕೇಂದ್ರ ಘಟಕದಲ್ಲಿ ನಿರ್ಮಿಸುತ್ತಿರುವ 192 ಪೊಲೀಸ್ ವಸತಿಗೃಹಗಳ ಸಮುಚ್ಛಯದ ನಿರ್ಮಾಣಕ್ಕಾಗಿ ಇಂದು ಶಂಕುಸ್ಥಾಪನೆ ನಡೆಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆ ಕೇಳಿದಾಗ, ನೀವು ಈ ಪ್ರಶ್ನೆಯನ್ನು ಕೇಳುತ್ತೀರಿ ಎನ್ನುವ ಕಾರಣಕ್ಕಾಗಿ ನಾನು ತಯಾರಿ ಮಾಡಿಕೊಂಡೆ ಬಂದಿದ್ದೇನೆ ಎಂದು ಹೇಳಿ ತಮ್ಮ ಕೈಯಲ್ಲಿದ್ದ ಡೇಟಾವನ್ನು ನೀಡಲು ಆರಂಭಿಸಿದರು. (ಇದನ್ನೂ ಓದಿ:  ಜನ್ರಿಗೆ ಫೈನ್ ಹಾಕಿ ಸರ್ಕಾರಕ್ಕೆ ಕೋಟಿ ಕೋಟಿ ದುಡಿದು ಕೊಟ್ಟ ಬೆಂಗ್ಳೂರು ಟ್ರಾಫಿಕ್ ಪೊಲೀಸರು!)

ಅಪರಾಧ ಪ್ರಕರಣಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಸರಗಳ್ಳತನ, ಮನೆ ಕಳ್ಳತನ ಸೇರಿದಂತೆ 9 ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ 2015 ರಲ್ಲಿ ಸುಮಾರು 17,435 ಪ್ರಕರಣಗಳು ದಾಖಲಾಗಿದೆ. 2016 ರಲ್ಲಿ 16,797 ಪ್ರಕರಣಗಳು ದಾಖಲಾಗಿದೆ. ಆಂದರೆ ವಾರ್ಷಿಕವಾಗಿ ಸುಮಾರು ಒಂದು ಸಾವಿರ ಪ್ರಕರಣಗಳು ಕಡಿಮೆಯಾಗಿದೆ. ಆದರೆ ರಾಷ್ಟ್ರೀಯ ಅಪರಾಧ ದಾಖಲೆಗಳಲ್ಲಿ ನಗರ ಎರಡನೇ ಸ್ಥಾನ ಪಡೆದುಕೊಳ್ಳಲು ಪ್ರಮುಖ ಕಾರಣ ಟ್ರಾಫಿಕ್ ಸಂಬಂಧಿಸಿದಂತೆ ಐಪಿಸಿ 283ರ ಅಡಿ ದಾಖಲಾದ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. 2015 ರಲ್ಲಿ ಈ ಕುರಿತು ಕೇವಲ 3,502 ಪ್ರಕರಣಗಳು ಮಾತ್ರ ದಾಖಲಾಗಿದ್ದವು. 2016 ರಲ್ಲಿ 13,759 ಪ್ರಕರಣಗಳು ದಾಖಲಾಗಿದೆ. ಸುಮಾರು 10 ಸಾವಿರ ಪ್ರಕರಣಗಳ ಸಂಖ್ಯೆ ಟ್ರಾಫಿಕ್‍ನಲ್ಲಿ ಹೆಚ್ಚಳವಾಗಿದೆ. ನಗರ ಪೊಲೀಸರು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ನಗರದಲ್ಲಿ ಐಟಿ ಉದ್ಯಮಗಳು ಹೆಚ್ಚಾಗಿರುವುದರಿಂದ ಸೈಬರ್ ಪ್ರಕರಣಗಳು ಹೆಚ್ಚಾಗಿದೆ ಎಂದು ವಿವರಿಸಿದರು. ನಮ್ಮ ಪೊಲೀಸರು ಚೆನ್ನಾಗಿ ಕಾರ್ಯನಿರ್ವಹಿಸುತ್ತಾರೆ ಹೀಗಾಗಿ ನಾವು ನಮ್ಮ ಬೆನ್ನನ್ನು ತಟ್ಟಿಕೊಳ್ಳಬೇಕು ಎಂದು ತಿಳಿಸಿದರು.

vlcsnap 2017 10 22 10h59m14s40

ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ 2016ನೇ ವರದಿ ಪ್ರಕಾರ ದೇಶದ 19 ಮೆಟ್ರೊಪೊಲಿಟನ್ ನಗರಗಳಲ್ಲಿ ಅಪರಾಧ, ಹಿಂಸೆ, ಕೊಲೆ, ಲೈಂಗಿಕ ಕಿರುಕುಳ, ಅತ್ಯಾಚಾರ ಇತ್ಯಾದಿ ಘಟನೆಗಳ ಬಗ್ಗೆ ದಾಖಲಾದ ಪ್ರಕರಣದ ಆಧಾರದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ಅಪರಾಧ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಮುಂಬೈ ನಗರ ಪಡೆದುಕೊಂಡಿದೆ.

ಏನಿದುಐಪಿಸಿ ಸೆಕ್ಷನ್ 283?
ಐಪಿಸಿ 283 ಪ್ರಕಾರ, ಸಾರ್ವಜನಿಕ ರಸ್ತೆ ಅತಿಕ್ರಮಣ ತಪ್ಪು. ಫುಟ್‍ಪಾತ್‍ನಲ್ಲಿ ಪಾರ್ಕಿಂಗ್ ಮಾಡೋದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಮನೆ ಮುಂದಿನ ರಸ್ತೆಯಲ್ಲಿ ವಾಹನ ನಿಲ್ಲಿಸುವುದು ಅಪರಾಧ. ಮನೆ ಎದುರಿನ ಫುಟ್‍ಪಾತ್ ಮೇಲೆ ಪಾರ್ಕಿಂಗ್ ಮಾಡೋದೂ ಅಪರಾಧ. ಪೊಲೀಸ್ ನವರು ಕಂಪ್ಲೇಂಟ್ ಹಾಕಿ ಎಫ್‍ಐಆರ್ ಹಾಕುತ್ತಾರೆ. ವಾಹನ ಸೀಝ್ ಮಾಡಿ ಎತ್ತಕೊಂಡು ಹೋಗ್ತಾರೆ. 90 ದಿನಗಳ ಒಳಗೆ ಚಾರ್ಜ್ ಶೀಟ್ ಹಾಕುತ್ತಾರೆ. ಅಪರಾಧ ಸಾಬೀತಾದ್ರೆ 200 ರೂ. ದಂಡ ಕಟ್ಟಬೇಕಾಗುತ್ತದೆ ಮತ್ತು ಆ ದಂಡವನ್ನ ಕೋರ್ಟಿನಲ್ಲೇ ಕಟ್ಟಬೇಕಾಗುತ್ತದೆ.

https://www.youtube.com/watch?v=oh8lPilttTE

vlcsnap 2017 10 22 10h59m04s190

vlcsnap 2017 10 22 10h58m45s5

vlcsnap 2017 10 22 10h58m34s146

vlcsnap 2017 10 22 10h58m24s48

vlcsnap 2017 10 22 10h58m16s226

 

 

bengaluru traffic police fine 2

bengaluru traffic police fine 1

bengaluru traffic police fine 6

bengaluru traffic police fine 5

bengaluru traffic police fine 4

bengaluru traffic police fine 3

 

Share This Article
Leave a Comment

Leave a Reply

Your email address will not be published. Required fields are marked *