ಬಿಯರ್ ವಿಶ್ವದ ಅತ್ಯಂತ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ಪ್ರಪಂಚದ ಅತ್ಯಂತ ಹಳೆಯ ಪಾನೀಯಗಳಲ್ಲಿ ನೀರು, ಚಹಾದ ನಂತರ ಬಿಯರ್ ಮೂರನೇ ಸ್ಥಾನದಲ್ಲಿದೆ. ಅಂಕಿ ಅಂಶದ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ 43,52,65,50,00,000 ಬಿಯರ್ ಕ್ಯಾನ್‍ಗಳು ಖಾಲಿಯಾಗುತ್ತೆ. ಇಂದಿನ ಯುಗದಲ್ಲಿ ಪಬ್‍ನಲ್ಲಿ ಪಾರ್ಟಿ ಮೂಡ್ ಇರಲಿ ಅಥವಾ ಸ್ನೇಹಿತರ ಜೊತೆ ಸಂಭ್ರಮದ ವಾತಾವರಣವಿರಲಿ ಎಲ್ಲೆಲ್ಲೂ ಬಿಯರ್ ಇರುತ್ತೆ.
ಗಮನಿಸಿದ್ದೀರಾ?
ಬಿಯರ್ ಬಾಟ್ಲಿ ನೋಡಿದವರು ಹಸಿರು ಅಥವಾ ಕಂದು ಬಣ್ಣದಲ್ಲಿ ಬಾಟ್ಲಿ ಇರುವುದನ್ನು ಗಮನಿಸಿರಬೇಕು. ಈ ಎರಡು ಬಣ್ಣಗಳನ್ನು ಹೊರತುಪಡಿಸಿ ಬಿಯರ್ ಬಾಟ್ಲಿಯನ್ನು ಬೇರೆ ಬಣ್ಣದಲ್ಲಿ ನೋಡಿದ್ದೀರಾ? ಸಾಧ್ಯವಿಲ್ಲ. ಇದೇ ಬಣ್ಣದಲ್ಲಿ ಬಾಟ್ಲಿ ಮಾಡಲು ಕಾರಣವೇನು ಎಂಬುದು ಎಲ್ಲರಿಗೂ ತಿಳಿದಿಲ್ಲ.ಆದರೆ ಇದಕ್ಕೆ ಕಾರಣವಿದೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!
ಹಿನ್ನೆಲೆ:
ಪ್ರಾಚೀನ ಮೆಸೊಪಟ್ಯಾಮಿಯಾದ ಸುಮೇರಿಯನ್ ನಾಗರಿಕತೆಯ ಕಾಲದಿಂದಲೂ ಮಾನವರು ಬಿಯರ್ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಮೊದಲ ಬಿಯರ್ ಕಂಪನಿಯು ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ಈಜಿಪ್ಟ್‍ನಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ನಂತರ ಬಿಯರ್ ಪ್ಯಾಕಿಂಗ್ ಪಾರದರ್ಶಕ ಬಾಟ್ಲಿಗಳಲ್ಲಿ ಮಾಡಲಾಯಿತು. ಆಗ ಬಿಳಿ ಬಾಟ್ಲಿಯಲ್ಲಿ ಪ್ಯಾಕ್ ಮಾಡುವುದರಿಂದ ಬಿಯರ್ ನ ಆಮ್ಲವು ಸೂರ್ಯನ ಕಿರಣಗಳಿಂದ ಹೊರಬರುವ ಅತಿನೇರಳೆ ಕಿರಣಗಳನ್ನು(ಅಲ್ಟ್ರಾವೈಲೆಟ್ ಕಿರಣಗಳು) ಹಾಳು ಮಾಡುತ್ತಿರುವುದು ಕಂಡುಬಂತು. ಇದರಿಂದ ಬಿಯರ್ ದುರ್ವಾಸನೆ ಬೀರುತ್ತಿದ್ದು, ಜನ ಕುಡಿಯುತ್ತಿರಲಿಲ್ಲ.
ಕಂಪನಿಯ ಸೂತ್ರವೇನು?
ಬಿಯರ್ ತಯಾರಕರು ಈ ಸಮಸ್ಯೆಯನ್ನು ಪರಿಹರಿಸಲು ಹಲವು ಯೋಜನೆಯನ್ನು ರೂಪಿಸಿದರು. ಇದರ ಅಡಿಯಲ್ಲಿ, ಕಂದು ಲೇಪಿತ ಬಾಟಲಿಗಳನ್ನು ಬಿಯರ್ ಬಾಟಲಿ ಬಣ್ಣವನ್ನ ಆಯ್ಕೆ ಮಾಡಲಾಯಿತು. ಈ ಟ್ರಿಕ್ ಕೆಲಸ ಮಾಡಿದೆ. ಈ ಬಣ್ಣದ ಬಾಟ್ಲಿಗಳಲ್ಲಿ ಇರಿಸಲಾದ ಬಿಯರ್ ಹಾಳಾಗಲಿಲ್ಲ, ಏಕೆಂದರೆ ಸೂರ್ಯನ ಕಿರಣಗಳು ಕಂದು ಬಾಟಲಿಗಳ ಮೇಲೆ ಪರಿಣಾಮ ಬೀರಲಿಲ್ಲ. ಇದನ್ನೂ ಓದಿ: ಕೆಐಡಿಬಿಯಿಂದ 1700 ಎಕರೆ ಭೂ ಸ್ವಾಧೀನಕ್ಕೆ ರೈತರ ವಿರೋಧ – ಬೃಹತ್ ಟ್ರಾಕ್ಟರ್ ರ‍್ಯಾಲಿ
ಹಸಿರು ಬಾಟ್ಲಿ ಆಯ್ಕೆ ಮಾಡಿದ್ದು ಏಕೆ..?
ವಾಸ್ತವವಾಗಿ, ಎರಡನೆಯ ಮಹಾಯುದ್ಧದ ಸಮಯದಲ್ಲಿ, ಕಂದು ಬಾಟ್ಲಿಗಳು ಲಭ್ಯವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯನ ಕಿರಣಗಳಿಂದ ಬಿಯರ್ ರಕ್ಷಿಸಲು ಏನು ಮಾಡುವುದು ಎಂದು ಎಲ್ಲರೂ ಯೋಚನೆಯಲ್ಲಿ ಮುಳುಗಿದ್ದರು. ಆಗ ಹಸಿರು ಬಣ್ಣವನ್ನು ಆರಿಸಲಾಯಿತು. ಅಂದಿನಿಂದ ಬಿಯರ್ ಹಸಿರು ಬಾಟ್ಲಿಗಳಲ್ಲಿ ಬರಲು ಪ್ರಾರಂಭವಾಯಿತು.