ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಬೀಗಬೇಡ ಎನ್ನುವ ಟ್ರೆಂಡ್ ಕ್ರಿಯೆಟ್ ಆಗಿದ್ದು, ಜನ `ಬೀಗಬೇಡ’ ಹ್ಯಾಶ್ ಟ್ಯಾಗ್ ಬಳಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಯಾರದ್ದೋ ಮೇಲಿನ ಸಿಟ್ಟು, ಯಾರಿಗೋ ಟಾಂಗ್ ಕೊಡಲು ಜನ ಈಗ ಬೀಗಬೇಡ ಹ್ಯಾಶ್ ಟ್ಯಾಂಗ್ ಬಳಸಿ ಪಂಚಿಂಗ್ ಡೈಲಾಗ್ ಬರೆಯುತ್ತಿದ್ದಾರೆ.
Advertisement
ಈ ಬೀಗಬೇಡ ಟ್ರೆಂಡ್ ಸೃಷ್ಟಿಯಾಗಲು ಕಾರಣವಾಗಿದ್ದು ಹಾಸ್ಯ ಸಾಹಿತಿ ಪ್ರಾಣೇಶ್ ಅವರ ಒಂದು ಡೈಲಾಗ್. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಾಣೇಶ್ “ಎತ್ತರದಲ್ಲಿದ್ದೇನೆಂದು ಬೀಗಬೇಡ. ನಕ್ಷತ್ರಗಳು ಕೆಳಗೆ ಉರುಳಿದ್ದನ್ನು ನೋಡಿದ್ದೇನೆ” ಎಂದು ಹೇಳಿದ್ದರು. ಒಂದು ವರ್ಷದ ಹಿಂದೆ ಈ ಕಾರ್ಯಕ್ರಮ ನಡೆದಿದ್ದು ಆಗ ಅಷ್ಟೇನು ಟ್ರೆಂಡ್ ಕ್ರಿಯೆಟ್ ಆಗಿರಲಿಲ್ಲ. ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕ ಫೇಸ್ ಬುಕ್ ಪೇಜ್ ನಲ್ಲಿ ಪ್ರಾಣೇಶ್ ಅವರ ಬೀಗಬೇಡ ಪದಕ್ಕೆ ಪೂರಕವಾಗಿ ಜೀವನಕ್ಕೆ ಅನ್ವಯವಾಗುವ ಸಾಲುಗಳನ್ನು ಬರೆಯಲಾಗಿತ್ತು. ಈ ಸಾಲುಗಳನ್ನು ಜನ ಶೇರ್ ಮಾಡಿದ್ದರ ಪರಿಣಾಮ ಪದ ಪ್ರಚಲಿತಕ್ಕೆ ಬಂತು.
Advertisement
ಬೀಗಬೇಡ ಪದ ನಿಧಾನಕ್ಕೆ ಫೇಮಸ್ ಆಗುತ್ತಿದ್ದಂತೆ ಹಲವು ಕನ್ನಡ ಪೇಜ್‍ಗಳು ಟ್ರೋಲ್ ಮಾಡಲು ಆರಂಭಿಸಿತ್ತು. ಬಳಿಕ ಜನರು ತಮ್ಮ ಫೇಸ್‍ಬುಕ್, ವಾಟ್ಸಪ್, ಟ್ವಿಟ್ಟರ್ ನಲ್ಲಿ ತಮ್ಮದೇ ಸಾಲುಗಳನ್ನು ಬರೆಯುವುದರ ಮೂಲಕ ಈಗ ಬೀಗಬೇಡ ಪದ ಟ್ರೆಂಡಿಂಗ್ ಟಾಪಿಕ್ ಆಗಿದೆ.
Advertisement
ಚೆನ್ನಾಗಿದೆ ಓದಿ
ಹೊಸಾ ಕಾರ್ ತಗೊಂಡೆ ಅಂತ ಮೆರೀಬೇಡ…
ಫೆರಾರಿಯಲ್ಲಿ ಓಡಾಡ್ತಿದ್ದ ವಿಜಯ್ ಮಲ್ಯ ಪರಾರಿಯಾಗಿದ್ದನ್ನ ಕಂಡಿದ್ದೇನೆ…
_——————-
ಫೇಸ್ಬುಕ್ ಫೋಟೋ ತೋರಿಸಿ ಬೀಗಬೇಡ…
ನಿನ್ನ ವೋಟರ್ ಐಡಿಯಲ್ಲಿನ ಫೋಟೋವನ್ನೂ… https://t.co/7G4PlGaC9r
— manjuphotoshop.com (@manjuphotoshop) August 10, 2018
Advertisement
ಬೀಗಬೇಡ ಸಾಲುಗಳು:
ಇವತ್ತು ಹೆಂಡ್ತಿ ಕಾಲು ಹಿಡಿತಾಳೆ ಅಂತ ಬೀಗಬೇಡ.ದಿನಾ ಹೆಂಡ್ತಿ ಕಾಲು ಒತ್ತಿದ್ದು ಕಂಡಿದ್ದೀನಿ
ಮೊಬೈಲ್ ಚಾರ್ಜ್ 100% ಇದೆ ಎಂದು ಬೀಗಬೇಡ..ಚಾರ್ಜ್ ಗೆ ಹಾಕಿ ಸ್ವಿಚ್ ಆನ್ ಮಾಡದೇ ಇದ್ದವರನ್ನಾ ನೋಡಿದ್ದೀನಿ
ಹೊಸ ಕಾರು ತಗೊಂಡೆ ಅಂತ ಮೆರೀಬೇಡ..ಫೆರಾರಿಯಲ್ಲಿ ಓಡಾಡ್ತಿದ್ದ ವಿಜಯ್ ಮಲ್ಯ ಪರಾರಿಯಾಗಿದ್ದನ್ನ ಕಂಡಿದ್ದೇನೆ…
ಕೊನೆಯ ಉಸಿರಿರು ಇರೋವರೆಗೂ ಜೊತೆಗಿರ್ತಾಳೆ ಅಂತ ಬೀಗಬೇಡ. ಸಣ್ಣ ಜಗಳಕ್ಕೆ ಮುನಿಸಿಕೊಂಡು ಜೀವನವನ್ನೆ ನರಕ ಮಾಡಿ ಹೋದವರನ್ನು ನಾವು ಕಂಡಿದ್ದೇವೆ
ಕೋಟಿ ಸಂಪಾದಿಸಿನೆಂದು ಬೀಗಬೇಡ , ಸಂಪತ್ತು ಇದ್ದರೂ 6×3 ಅಡಿಗಾಗಿ ಕೋರ್ಟ್ ನಲ್ಲಿ ಬೇಡಿದವರನ್ನು ನೋಡಿದ್ದೇವೆ!
ಭಾರೀ ಬೆಲೆಯ ಬಟ್ಟೆ ಹಾಕಿದ್ದೇನೆಂದು ಬೀಗಬೇಡ,
ಹುಟ್ಟಿದಾಗ ಬೆತ್ತಲೆಯಾಗಿರುತ್ತೇವೆ ಎನ್ನುವದನ್ನು ಮರೆಯಬೇಡ !!
— Shivu Patil (@Shivu_reddyar) August 7, 2018
ಆ ಪಕ್ಷ ಈ ಪಕ್ಷ ಎಂದು ಬೀಗಬೇಡ. ಪಿತೃಪಕ್ಷದಲ್ಲೇ ಹೊಗೆ ಹಾಕಿಸಿಕೊಂಡವರನ್ನು ಕಂಡಿದ್ದೇವೆ.
ನಾನು ದೊಡ್ಡ ಧೈರ್ಯವಂತೆ ಎಂದು ಬೀಗಬೇಡ. ಜಿರಳೆ ಬಂದಾಗ ಓಡಿದವರನ್ನು ನೋಡಿದ್ದೇನೆ.
ನಾನೇ ಟ್ವೀಟಿಸಿದ್ದು ಚನ್ನಾಗಿದೆಅಂತ ಖುಶಿಯಿಂದ ಬೀಗಬೇಡ. ಅದನ್ನ ಬೇರೆಯವರು copy paste ಮಾಡಿ ನಿನಗಿಂತ ಜಾಸ್ತಿ Likes ತಗೊಂಡಿದ್ದನ್ನ ನಾನು ನೋಡಿದ್ದೇನೆ.
ಸಿಲ್ಕ್ ಬೋರ್ಡ್ ಸಿಗ್ನಲ್ ಈಜಿದ್ದೇನೆಂದು ಬೀಗಬೇಡ,
ನಾಯಂಡಳ್ಳಿ ಕೆರೆಯಲ್ಲಿ ತೇಲಿ ಹೋದವರನ್ನು ನಾನು ನೋಡಿದ್ದೇನೆ.#ಸಮೂಹಸನ್ನಿ
— sachit araballi (@SachitAraballi) August 7, 2018
ಬೀಗಬೇಡ ಸ್ಟೇಟ್ ಹಾಕ್ಕೊಂಡು, ಜಾಸ್ತಿ ಬೀಗಬೇಡ. ಆ ಸ್ಟೇಟಸ್ ಗಳಿಗೆ ಒಂದೂ ಲೈಕ್ ಬರದೆ ಇರೋದನ್ನ ನಾನು ನೋಡಿದ್ದೀನಿ ????
— Supreeth K N (@findsupreeth) August 7, 2018
ಇದನ್ನು ಓದಿದ ಬಳಿಕ ನಿಮ್ಮಲ್ಲೂ ಬೀಗಬೇಡಿ ಟಾಪಿಕ್ ಗೆ ಸಂಬಂಧಿಸಿದಂತೆ ಹೊಸ ಸಾಲುಗಳು ಹುಟ್ಟಿದರೆ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ