ವಿಶ್ವದ ಅತಿದೊಡ್ಡ ಯುರೇನಿಯಂ ಗಣಿಗಾರಿಕೆಯನ್ನು ಆಸ್ಟ್ರೇಲಿಯಾ ನಿಷೇಧಿಸಿದ್ದೇಕೆ? 

Public TV
3 Min Read
why australia has banned mining in one of the worlds largest uranium deposits

ಸ್ಟ್ರೇಲಿಯಾದ ಕಾಕಡು ರಾಷ್ಟ್ರೀಯ ಉದ್ಯಾನವನದೊಳಗೆ ಇರುವ ವಿಶ್ವದ ಅತಿದೊಡ್ಡ ಉನ್ನತ ದರ್ಜೆಯ ಯುರೇನಿಯಂನ ನಿಕ್ಷೇಪಗಳಲ್ಲಿ ಒಂದಾದ ಜಬಿಲುಕಾ ಸ್ಥಳದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲು ಅಲ್ಲಿನ ಸರ್ಕಾರ ನಿರ್ಣಾಯಕ ಕ್ರಮವನ್ನು ತೆಗೆದುಕೊಂಡಿದೆ. ಈ ಮೂಲಕ ಸ್ಥಳೀಯ ಜನರ ಆಶಯಕ್ಕೆ ಆಸ್ಟ್ರೇಲಿಯಾ ಸರ್ಕಾರ ಮನ್ನಣೆ ನೀಡಿದೆ. ಸರ್ಕಾರದ ಈ ನಿರ್ಧಾರ ಸ್ಥಳೀಯ ಮಿರಾರ್ ಜನರ ಸಂಭ್ರಮಕ್ಕೆ ಕಾರಣವಾಗಿದೆ. 

ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದೆನು?

ಉದ್ಯಾನವನದ ಯೋಜಿತ ವಿಸ್ತರಣೆ ಮಿರಾರ್‌ನ ಆಶಯಕ್ಕೆ ಅನುಗುಣವಾಗಿದೆ. ಅವರು ತಮ್ಮ ಭೂಮಿಯಲ್ಲಿ ಯುರೇನಿಯಂ ಗಣಿಗಾರಿಕೆ ನಿಲ್ಲಿಸಬೆಕು ಎಂದು ಬಯಸುತ್ತಿದ್ದರು. ಇದೀಗ ಜಬಿಲುಕಾದಲ್ಲಿ ಎಂದಿಗೂ ಗಣಿಗಾರಿಕೆ ಇರುವುದಿಲ್ಲ ಎಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಭರವಸೆ ನೀಡಿದ್ದಾರೆ. 

ಜಬಿಲುಕಾ ಪ್ರದೇಶದ ಏಕೆ ಪ್ರಸಿದ್ಧ?

ಸ್ಥಳೀಯ ಮಿರಾರ್ ಜನರ ಆಶಯದಂತೆ ಈ ನಿರ್ಧಾರವನ್ನು ಆಸ್ಟ್ರೇಲಿಯಾ ತೆಗೆದುಕೊಂಡಿದೆ. ಈ ಮೂಲಕ ಜಬಿಲುಕಾದಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವ ಕ್ರಮವು ಪಾರಂಪರಿಕ-ಪಟ್ಟಿ ಮಾಡಿದ ಉದ್ಯಾನವನವನ್ನು ವಿಸ್ತರಿಸುತ್ತದೆ. ಈ ಉಷ್ಣವಲಯದ ಪ್ರದೇಶವು ಅದರ ಕಮರಿಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿದೆ.

why australia has banned mining in one of the worlds largest uranium deposits 1

2017 ರಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಬಂಡೆಗಳ ಮೇಲೆ ಲಿಪಿಗಳು ಮತ್ತು ಸಮಾಧಿಯನ್ನು ಪತ್ತೆಹಚ್ಚಿದಾಗ ಈ ಪ್ರದೇಶ ಭಾರೀ ಗಮನ ಸೆಳೆದಿತ್ತು. ಅವುಗಳು ಹತ್ತಾರು ಸಾವಿರ ವರ್ಷಗಳ ಹಿಂದಿನದ್ದಾಗಿದ್ದು, ಈ ಆವಿಷ್ಕಾರವು ಟೊರೆಸ್ ಸ್ಟ್ರೈಟ್ ದ್ವೀಪವಾಸಿಗಳು ಮತ್ತು ಮೂಲನಿವಾಸಿಗಳು ಭೂಮಿಯೊಂದಿಗೆ ಹೊಂದಿರುವ ನಿರಂತರ ಸಂಪರ್ಕದ ಪುರಾವೆ ಎಂದು ವ್ಯಾಖ್ಯಾನಿಸಲಾಗಿತ್ತು..

ಜಬಿಲುಕಾಗಾಗಿ ದೀರ್ಘಕಾಲದ ಸಮರ

1970ರ ದಶಕದ ಆರಂಭದಲ್ಲಿ ಯುರೇನಿಯಂ ನಿಕ್ಷೇಪವನ್ನು ಪತ್ತೆ ಮಾಡಿದ ನಂತರ ಜಬಿಲುಕಾ ಸೈಟ್‌ನ ಮಿರಾರ್ ಜನರು ಮತ್ತು ಗಣಿಗಾರಿಕೆ ಕಂಪನಿಗಳ ನಡುವಿನ ತೀವ್ರವಾದ ಕಾನೂನು ಸಮರದ ಕೇಂದ್ರವಾಯಿತು. 1990ರ ದಶಕದ ಉತ್ತರಾರ್ಧದಲ್ಲಿ ಭಾರೀ ಪ್ರತಿಭಟನೆಯಲ್ಲಿ, ಮಿರಾರ್ ಜನರು ಗಣಿ ಪ್ರದೇಶವನ್ನು ನಿರ್ಬಂಧಿಸಿದ್ದರು.

2020 ರಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬರಾ ಪ್ರದೇಶದಲ್ಲಿ 46,000 ವರ್ಷಗಳಷ್ಟು ಹಳೆಯದಾದ ಜುಕನ್ ಗಾರ್ಜ್ ರಾಕ್ ಶೆಲ್ಟರ್‌ಗಳನ್ನು ಗಣಿಗಾರಿಕೆ ಕಂಪನಿ ರಿಯೊ ಟಿಂಟೊ ಸ್ಫೋಟಿಸಿತು. ಈ ಸ್ಫೋಟ ಕಾನೂನು ಬದ್ಧವಾಗಿದ್ದರೂ ವಿಶ್ವದಾದ್ಯಂತ ಖಂಡನೆಗೆ ಗುರಿಯಾಯಿತು. ಇದಾದ ಬಳಿಕ ಜಬಿಲುಕಾವನ್ನು ರಕ್ಷಿಸಲು ಆಸ್ಟ್ರೇಲಿಯಾ ಸರ್ಕಾರ ಮುಂದಾಯಿತು. 

why australia has banned mining in one of the worlds largest uranium deposits 2

ಗಣಿಗಾರಿಕೆ ಗುತ್ತಿಗೆಯನ್ನು ಕಂಪನಿಗೆ 1991 ರಲ್ಲಿ ನೀಡಲಾಯಿತು, ಇದು 1998 ರಲ್ಲಿ ಸ್ಥಳೀಯ ಮಿರಾರ್ ಜನರು ಗಣಿ ಸೈಟ್‌ಗೆ ದಿಗ್ಬಂಧನ ಸೇರಿದಂತೆ ಭಾರಿ ವಿವಾದ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಇದೀಗ ಗಣಿಗಾರಿಕೆ ನಿಷೇಧದ ನಿರ್ಧಾರ ಮಿರಾರ್‌ನ ಜನ ಹಾಗೂ ಸಾಮಾಜಿಕ ಕಾರ್ಯಕರ್ತರು ಸ್ವಾಗತಿಸಿದ್ದಾರೆ. 

ಕಾಕಡು ರಾಷ್ಟ್ರೀಯ ಉದ್ಯಾನವನ ವಿಶೇಷತೆ ಏನು?

ಇದು ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದ ಜೀವಂತ ಸಾಂಸ್ಕೃತಿಕ ಭೂದೃಶ್ಯವಾಗಿದೆ. ಕಾಕಡು 50,000 ವರ್ಷಗಳಿಗಿಂತಲೂ ಹೆಚ್ಚು ಕಾಲ ಮೂಲನಿವಾಸಿಗಳಿಗೆ ನೆಲೆಯಾಗಿದೆ. ಮತ್ತು ಉದ್ಯಾನವನದ ವ್ಯಾಪಕವಾದ ರಾಕ್ ಆರ್ಟ್ ಸೈಟ್‌ಗಳಾದ ನೂರ್‌ಲಾಂಗಿ ಮತ್ತು ಉಬಿರ್, ಪ್ರಪಂಚದ ಕೆಲವು ಹಳೆಯ ಮತ್ತು ಅತ್ಯಂತ ವ್ಯಾಪಕವಾದ ಕಲೆಗಳನ್ನು ಒಳಗೊಂಡಿದ್ದು, ಇದು ಎರಡು ವಿಶ್ವ ಪರಂಪರೆಯ ತಾಣವಾಗಿದೆ.

ಈ ಪ್ರದೇಶ ಅಸಾಧಾರಣ ನೈಸರ್ಗಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಹೆಸರು ವಾಸಿಯಾಗಿದೆ. ಸಾವಿರಾರು ವರ್ಷಗಳ ವಿವರವಾದ ವರ್ಣಚಿತ್ರಗಳು ಇಲ್ಲಿನ ಸಾಮಾಜಿಕ ರಚನೆ ಮತ್ತು ಧಾರ್ಮಿಕ ಆಚರಣೆಗಳ ಒಳನೋಟಗಳನ್ನು ಬಹಿರಂಗಪಡಿಸುತ್ತವೆ. ಇದು ಆಸ್ಟ್ರೇಲಿಯಾದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ ಮತ್ತು ವಿಶ್ವದ ಉಷ್ಣವಲಯದಲ್ಲಿ ಅತಿ ದೊಡ್ಡ ಪ್ರದೇಶವಾಗಿದೆ. 

why australia has banned mining in one of the worlds largest uranium deposits 3

ಕಾಕಡು ರಾಷ್ಟ್ರೀಯ ಉದ್ಯಾನವನ 1986ರ ಜನಪ್ರಿಯ ಆಸ್ಟ್ರೇಲಿಯನ್ ಹಾಸ್ಯ ಚಲನಚಿತ್ರ `ಕ್ರೊಕೊಡೈಲ್ ಡುಂಡಿ’ ನಲ್ಲಿ ಸೆರೆಯಾಗಿದೆ.

ಯುರೇನಿಯಂ ಯಾಕೆ ಬಳಕೆಯಾಗುತ್ತದೆ?

ಯುರೇನಿಯಂ ಮುಖ್ಯ ಬಳಕೆಯೆಂದರೆ ಅಣು ಸ್ಥಾವರಗಳಲ್ಲಿ ಇಂಧನವಾಗಿ. ವಾಣಿಜ್ಯ ಅಣು ಸ್ಥಾವರಗಳು ಸಾಮಾನ್ಯವಾಗಿ ಸುಮಾರು 3% ಯುರೇನಿಯಂ-235ನ್ನು ಇಂಧನವಾಗಿ ಬಳಸುತ್ತವೆ.

ಭಾರತಕ್ಕೆ 2500 ಟನ್ ಯುರೇನಿಯಂ ರಫ್ತು?

2019 ರಲ್ಲಿ ಆಸ್ಟ್ರೇಲಿಯಾವು 6,613 ಟನ್ ಯುರೇನಿಯಂನ್ನು ರಫ್ತು ಮಾಡಿದೆ. ಇದು ವಿಶ್ವದ ಉತ್ಪಾದನೆಯ 12% ಆಗಿದೆ. ಇದು ಪರಮಾಣು ವಿದ್ಯುತ್ ಉತ್ಪಾದನೆಯ ಬಳಕೆಗಾಗಿ ರಫ್ತಾಗಿದೆ. ಆಸ್ಟ್ರೇಲಿಯನ್ ಯುರೇನಿಯಂ ಅಸೋಸಿಯೇಷನ್ ​​2030ರ ವೇಳೆಗೆ ಭಾರತಕ್ಕೆ ವಾರ್ಷಿಕವಾಗಿ ಸುಮಾರು 2500 ಟನ್ ಯುರೇನಿಯಂನ್ನು ಮಾರಾಟ ಮಾಡುವ ನಿರೀಕ್ಷೆಯಿದೆ

Share This Article