ಹಿಂದಿಯ ಕಾಫಿ ವಿತ್ ಕರಣ್ ಶೋ ನಲ್ಲಿ ನಿರೂಪಕ ಕರಣ್ ಜೋಹಾರ್ ಬಹುತೇಕವಾಗಿ ಪರ್ಸನಲ್ ಲೈಫ್ ಕುರಿತಾದ, ಅದರಲ್ಲೂ ಬೆಡ್ ರೂಮ್ ವಿಷಯಗಳೇ ಹೆಚ್ಚಾಗಿ ಇರುತ್ತವೆ ಎನ್ನುವ ಆರೋಪವಿದೆ. ಈವರೆಗೂ ಅವರ ಶೋಗೆ ಬಂದಿರುವ ಬಹುತೇಕ ಸಿಲೆಬ್ರಿಟಿಗಳಿಗೆ ತಮ್ಮ ಮೊದಲ ಸೆಕ್ಸ್ ಅನುಭವ, ಫಸ್ಟ್ ನೈಟ್, ಡೇಟಿಂಗ್, ಸೆಕ್ಸ್ ಲೈಫ್ ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ರೀತಿಯ ಪ್ರಶ್ನೆಗಳನ್ನು ಕೇಳಿ ಮುಜಗರಕ್ಕೂ ನೂಕಿದ್ದಾರೆ.
ಆಲಿಯಾ ಭಟ್, ವಿಜಯ್ ದೇವರಕೊಂಡ, ಅನನ್ಯ ಪಾಂಡೆ, ಸಾರಾ ಅಲಿಖಾನ್ ಸೇರಿದಂತೆ ಹಲವು ತಾರೆಯರು ಇಂತಹ ಪ್ರಶ್ನೆಗಳಿಗೆ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ ಒಂದು ಹೆಜ್ಜೆ ಮುಂದೆ ಹೋಗಿ, ತಾವು ಕಾರಿನಲ್ಲಿ ಸೆಕ್ಸ್ ಮಾಡಿದ್ದಾಗಿ ಹೇಳಿಕೊಂಡು ಅಚ್ಚರಿಗೆ ಕಾರಣರಾಗಿದ್ದರು. ಇಂಥದ್ದೇ ಪ್ರಶ್ನೆಯು ಆಮೀರ್ ಖಾನ್ ಗೆಸ್ಟ್ ಆಗಿ ಹೋದಾಗ ಬಂದಿದೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡಿದ್ದಾರೆ ಆಮೀರ್. ಇದನ್ನೂ ಓದಿ:ವಿವಾದ ಸೃಷ್ಟಿಸಿದ ಪ್ಯಾಡ್ ಮೇಲೆ ಹಿಂದೂ ದೇವರ ಪೋಸ್ಟರ್
ಸೆಕ್ಸ್ ಜೀವನದ ಬಗ್ಗೆ ಆಮೀರ್ ಗೆ ಪ್ರಶ್ನೆಯೊಂದು ಎದುರಾದಾಗ, ‘ಕರಣ್, ನೀವು ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ಯಾಕೆ ಇಷ್ಟೊಂದು ಕುತೂಹಲ ಹೊಂದಿದ್ದೀರಿ. ಈ ರೀತಿ ಪ್ರಶ್ನೆಗಳನ್ನು ಕೇಳುತ್ತೀರಲ್ಲ, ನಿಮ್ಮ ತಾಯಿ ನಿಮಗೆ ಏನೂ ಅನ್ನುವುದಿಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ. ಆಮೀರ್ ಈ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ ಕರಣ್.