ಸಾಮಾನ್ಯವಾಗಿ ಧೂಮಪಾನ ಮಾಡಿದವರಿಗೆ ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಧೂಮಪಾನ ಮಾಡದ ಮಹಿಳೆಯರಲ್ಲಿಯೂ ಕೂಡ ಶ್ವಾಸಕೋಶದ ಕ್ಯಾನ್ಸರ್ ಕಂಡುಬರುತ್ತದೆ.
ಮಹಿಳೆಯರಲ್ಲಿ ನಿರ್ದಿಷ್ಟ ಜೀನ್‌ಗಳಲ್ಲಿ ವ್ಯತ್ಯಾಸ ಕಂಡುಬರುವುದರಿಂದ ಧೂಮಪಾನ ಮಾಡದಿದ್ದರೂ ಶ್ವಾಸಕೋಶದ ಕ್ಯಾನ್ಸರ್‌ಗೆ ಒಳಗಾಗುತ್ತಾರೆ. ಮಹಿಳೆಯರ ಹಾರ್ಮೋನುಗಳಲ್ಲಿನ ಏರಿಳಿತ, ವಿಶೇಷವಾಗಿ ಋತುಚಕ್ರದ ಸಮಯದಲ್ಲಿ ಕ್ಯಾನ್ಸರ್‌ಗೆ ಒಳಗಾಗುವಂತೆ ಮಾಡುತ್ತದೆ. 2022ರಲ್ಲಿ ಜಾಗತಿಕವಾಗಿ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಪೈಕಿ 45.6% (717,211) ಮತ್ತು ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳಲ್ಲಿ 59.7% (541,971) ಅಡಿನೊಕಾರ್ಸಿನೋಮದಿಂದ ಉಂಟಾಗಿದೆ.
Advertisement
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್‌ಗೆ ವಾಯು ಮಾಲಿನ್ಯವು ಒಂದು ಪ್ರಮುಖ ಅಂಶವಾಗಿದೆ ಎಂದು ತಿಳಿಸಿದೆ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಸಂಸ್ಥೆಯ ಮಾಹಿತಿ ಪ್ರಕಾರ, ಅಡಿನೊಕಾರ್ಸಿನೋಮ ಎಂಬುವುದು ಪುರುಷರು ಮತ್ತು ಮಹಿಳೆಯರಲ್ಲಿ ರೋಗದ ಪ್ರಬಲ ಕಾರಣವಾಗಿ ಕಾಣಿಸಿಕೊಳ್ಳುತ್ತದೆ. ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಶೇ.70 ರಷ್ಟು ಅಡಿನೊಕಾರ್ಸಿನೋಮದಿಂದ ಉಂಟಾಗುತ್ತದೆ ಎಂದು ತಿಳಿಸಿದೆ.
Advertisement
ಅಡಿನೊಕಾರ್ಸಿನೋಮ ಎಂದರೇನು?
ಅಡಿನೊಕಾರ್ಸಿನೋಮವು ಒಂದು ರೀತಿಯ ಕ್ಯಾನ್ಸರ್ ಆಗಿದ್ದು, ಇದು ಸ್ತನಗಳು, ಹೊಟ್ಟೆ, ಅನ್ನನಾಳ, ಶ್ವಾಸಕೋಶಗಳು, ಮೇದೋಜ್ಜೀರಕ ಗ್ರಂಥಿಗಳಲ್ಲಿ ಲೋಳೆ ಉತ್ಪಾದಿಸುವ ಗ್ರಂಥಿಗಳನ್ನು ಪ್ರಾರಂಭಿಸುತ್ತದೆ. ಕೆಲವು ರೀತಿಯ ಕ್ಯಾನ್ಸರ್‌ಗಳಿಗೆ ಅಡಿನೊಕಾರ್ಸಿನೋಮ ತುಂಬಾ ಸಾಮಾನ್ಯ ಕಾರಣವಾಗುತ್ತದೆ.
Advertisement
ಧೂಮಪಾನ ಮಾಡದ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವೇನು?
ಕಾರ್ಖಾನೆಗಳಿಂದ ಬಿಡುಗಡೆಯಾಗುವ ಮಾಲಿನ್ಯವು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುವ ಪ್ರಮುಖ ಅಂಶವಾಗಿದೆ. ಅಲ್ಲದೆ, ಕೆಲವು ಜೆನೆಟಿಕ್ ರೂಪಾಂತರಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಮಹಿಳೆಯರು ಧೂಮಪಾನ ಮಾಡದಿದ್ದರೂ ಸಹ, ಈ ರೋಗವು ಆನುವಂಶಿಕ ರೂಪಾಂತರಗಳಿಂದ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಭಯಾನಕ ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ, ಮಹಿಳೆಯರು ಒಲೆಗಳ ಮೇಲೆ ಅಡುಗೆ ಮಾಡುವಾಗ ಹೊರಸೂಸುವ ಹೊಗೆ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ವೈದ್ಯರು ಕಂಡುಹಿಡಿದಿದ್ದಾರೆ.
Advertisement
ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು:
ಶ್ವಾಸಕೋಶದಲ್ಲಿ ಅಡಿನೊಕಾರ್ಸಿನೋಮ ಲೋಳೆ ಉತ್ಪಾದಿಸುವ ಗ್ರಂಥಿಗಳನ್ನು ಪ್ರಾರಂಭಿಸಿದ ಬಳಿಕ ಅದರ ಲಕ್ಷಣಗಳು: ಸ್ವಲ್ಪ ದಿನಗಳಿಂದಿರುವ ಕೆಮ್ಮು, ಆಗಾಗ್ಗೆ ಉಸಿರಾಟದ ತೊಂದರೆ, ಲೋಳೆಯಲ್ಲಿ ರಕ್ತ ಬರುವುದು, ಅತಿಯಾದ ಅಥವಾ ಶ್ರಮದಾಯಕ ವ್ಯಾಯಾಮದ ನಂತರ ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್ ಮತ್ತಷ್ಟು ಹರಡಿದರೆ, ತಲೆನೋವು ಕೂಡ ಬರಬಹುದು. ಮೂಳೆ ನೋವು, ಹಸಿವಿನ ಕೊರತೆ ಮತ್ತು ತೂಕ ನಷ್ಟದಂತಹ ಲಕ್ಷಣಗಳು ಸಹ ಸಂಭವಿಸಬಹುದು.
ಶ್ವಾಸಕೋಶದ ಕ್ಯಾನ್ಸರ್ ಗುಣಪಡಿಸಬಹುದೇ? :
ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅನ್ನು ಅದರ ಆರಂಭಿಕ ಹಂತಗಳಲ್ಲಿ ಔಷಧಿಗಳಿಂದ ಗುಣಪಡಿಸಬಹುದು. ಚಿಕಿತ್ಸೆ ಮತ್ತು ಇಮ್ಯುನೊಥೆರಪಿ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗವು ಧೂಮಪಾನ ಮಾಡದ ಪುರುಷರಲ್ಲಿ ಕಂಡುಬಂದರೂ, ಬೇಗನೆ ಚಿಕಿತ್ಸೆ ಪಡೆಯುವುದು ಉತ್ತಮ. ಧೂಮಪಾನಿಗಳ ಡಿಎನ್‌ಎ ಹಾನಿಗೊಳಗಾಗಿ ಕ್ಯಾನ್ಸರ್ ಬೆಳೆದರೆ, ಚಿಕಿತ್ಸೆಯು ಹೆಚ್ಚು ತೀವ್ರವಾಗಿರುತ್ತದೆ. ಅಪಾಯವೂ ಹೆಚ್ಚಾಗಿರುತ್ತದೆ. ಅಂತಹವರು, ತಡಮಾಡದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ.