Bengaluru City
ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

ಬೆಂಗಳೂರು: ನಿಮ್ಮ ಸರ್ಕಾರ ಇದ್ದಾಗ ನಾನು ಪಿಎಫ್‍ಐ ನಿಷೇಧಿಸಬೇಕೆಂದು ಖುದ್ದು ಮನವಿ ಕೊಟ್ಟು ಕೇಂದ್ರ ಗೃಹ ಇಲಾಖೆಗೆ ಶಿಫಾರಸ್ಸು ಮಾಡಿ ಅಂತಾ ಹೇಳಿದ್ದೆ. ಆದರೆ ಆಗ ಸುಮ್ಮನಿದ್ದವರು ಈಗೇನು ಮಾತಾನಾಡುವುದು ಎಂದು ಪ್ರಶ್ನಿಸಿ ಬಿಜೆಪಿ ನಾಯಕರನ್ನು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೀಪಕ್ ಹತ್ಯೆ ಪ್ರಕರಣದಲ್ಲಿ ರಾಜಕೀಯ ಬೇಕಾಗಿಲ್ಲ. ಪೊಲೀಸರಿಗೆ ಸಂಪೂರ್ಣ ಸ್ವತಂತ್ರ್ಯ ನೀಡಬೇಕು. ಬಿಜೆಪಿ ಮನಸ್ಸು ಮಾಡಿದ್ದರೆ ಈ ಕೃತ್ಯ ಎಸಗುವ ಸಂಘಟನೆಯನ್ನು ಯಾವಗಲೋ ಬ್ಯಾನ್ ಮಾಡಬಹುದಿತ್ತು. ಆದರೆ ಅದು ಬಿಜೆಪಿಗೆ ಆಗ ಬೇಕಾಗಿರಲಿಲ್ಲ. ಕರಾವಳಿ ಶಾಂತವಾಗಬೇಕಾದರೇ ಮೊದಲು ರಾಜಕೀಯ ಪಕ್ಷಗಳನ್ನು ಹೊರಗೆ ಹಾಕಬೇಕು ಎಂದರು. ಇದನ್ನು ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ
ಹಿಂದೂ ಸಂಘಟನೆ ಗಳಿಗೆ ಹೋರಾಟ ಮಾಡೋದು ಗೊತ್ತಿದೆ. ಈ ರೀತಿ ಮೇಲಿಂದ ಮೇಲೆ ನಡೆಯುತ್ತಿರುವುದನ್ನು ನೋಡಿದರೆ ವ್ಯವಸ್ಥಿತವಾದ ಕುಂತಂತ್ರ ನಡೆಯುತ್ತಿದೆ. ಇದನ್ನು ಸರ್ಕಾರ ನಿಲ್ಲಿಸದಿದ್ದರೆ ಹಿಂದೂ ಸಂಘಟನೆಗಳಲ್ಲ ಬದಲಾಗಿ ಹಿಂದೂಗಳೇ ಸಿಡಿದು ಏಳಲಿದ್ದಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜಕೀಯವನ್ನು ಹೊರಗಡೆ ಇಟ್ಟು, ಪೇಜಾವರ ಶ್ರೀ, ವೀರೇಂದ್ರ ಹೆಗಡೆ, ಮುಸ್ಲಿಂ ಮೌಲ್ವಿ, ಮುಖಂಡರು ಸೇರಿ ಶಾಂತಿ ಸಮನ್ವಯ ಸಭೆ ನಡೆಸಬೇಕು. ಈ ಎಲ್ಲಾ ಮುಖಂಡರ ಜೊತೆ ಶಾಂತಿ ಸಭೆ ನಡೆಸುವಂತೆ ಪತ್ರ ಬರೆಯುತ್ತೇನೆ ಎಂದು ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಯುಟಿ ಖಾದರ್ ಮತ್ತು ರಮಾನಾಥ್ ರೈ ಅವರ ಕ್ಷೇತ್ರದಲ್ಲೇ ಈ ರೀತಿಯ ಪ್ರವೃತ್ತಿ ಆದರೆ ಮುಂದಿನ ಚುನಾವಣೆಯಲ್ಲಿ ನೀವು ಉತ್ತರಿಸಬೇಕಾಗುತ್ತದೆ. ಕೃತ್ಯ ನಡೆದ ಮೂರು ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಕ್ಕೆ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಕೊಲೆ ಸಂಖ್ಯೆ 21. ಇನ್ನು ಎಷ್ಟು ಕೊಲೆಯಾಗಬೇಕು: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ