ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ವಿಮಾನದ ಬಣ್ಣ ಬಿಳಿಯಾಗಿರುತ್ತದೆ. ಇನ್ನು ಕೆಲವು ವಿಮಾನಗಳು ಮಾತ್ರ ಬೇರೆ ಬಣ್ಣಗಳದ್ದಾಗಿರುತ್ತದೆ. ಆದರೆ ಹೆಚ್ಚಿನ ವಿಮಾನಗಳು ಬಿಳಿ ಬಣ್ಣವನ್ನು ಹೊಂದಿರುತ್ತವೆ. ಯಾಕೆ ಬಿಳಿ ಬಣ್ಣವನ್ನೇ ಹೆಚ್ಚಾಗಿ ಬಳಸುತ್ತಾರೆ? ಇದರ ಹಿಂದೆ ಏನಾದರೂ ಕಾರಣವಿದ್ಯಾ? ಎಂಬ ಪ್ರಶ್ನೆ ಹಲವರಿಗೆ ಮೂಡಿರಬಹುದು. ನಿಜ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದಕ್ಕೆ ಕೆಲವು ಕಾರಣಗಳಿವೆ.
ಬಿಳಿ ಬಣ್ಣ ಬಳಿಯುವುದು ಚಂದಕ್ಕೆ ಮಾತ್ರವಲ್ಲದೆ ವೈಜ್ಞಾನಿಕ, ಸುರಕ್ಷತಾ ದೃಷ್ಟಿಯಿಂದಾಗಿ ಈ ಬಣ್ಣವನ್ನು ಬಳಸಲಾಗುತ್ತದೆ. ವಿಮಾನದ ಸುರಕ್ಷತೆಯನ್ನು ಕಾಪಾಡುವುದು, ಜೊತೆಗೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹಾಗೂ ಇನ್ನಿತರ ಕೆಲವು ಲಾಭಕ್ಕಾಗಿ ಬಿಳಿ ಬಣ್ಣವನ್ನು ಬಳಸುತ್ತಾರೆ.
ಈ ಬಿಳಿ ಬಣ್ಣ ವಿಮಾನವನ್ನು ಸೂರ್ಯನ ಬೆಳಕಿನಿಂದ ರಕ್ಷಣೆ ಮಾಡುವುದಲ್ಲದೆ, ರನ್ ವೇಯಲ್ಲಿ ವಿಮಾನಗಳ ಸುರಕ್ಷಿತ ಸಂಚಾರಕ್ಕಾಗಿ ಸಹಾಯ ಮಾಡುತ್ತದೆ. ಜೊತೆಗೆ ವಿಮಾನದ ಒತ್ತಡವನ್ನು ಕೂಡ ಇದು ಕಡಿಮೆ ಮಾಡುತ್ತದೆ. ವಿಮಾನದ ಮೇಲೆ ಉಂಟಾಗುವ ಬಿರುಕುಗಳು, ತುಕ್ಕು ಹಿಡಿಯುವುದು ಗುರುತಿಸಲು ಸಹಕಾರಿಯಾಗುತ್ತದೆ. ಅಲ್ಲದೆ ತಜ್ಞರು ಹೇಳುವ ಪ್ರಕಾರ ಅಪಘಾತಗಳ ಸಂಖ್ಯೆಯನ್ನು ಕೂಡ ಇದು ಕಡಿಮೆ ಮಾಡುವಲ್ಲಿ ಉಪಯುಕ್ತವಾಗುತ್ತದೆ ಎನ್ನಲಾಗಿದೆ.
ಇನ್ನು ವಿಮಾನಯಾನ ಸಂಸ್ಥೆಗಳು ತಮ್ಮ ಗುರುತನ್ನು ಪ್ರದರ್ಶಿಸಲು ಇದನ್ನು ಬಳಸುತ್ತಾರೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ಬಣ್ಣವು ಹಣವನ್ನ ಉಳಿಸುತ್ತದೆ, ಪ್ರಯಾಣಿಕರನ್ನ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಬಿಳಿ ಬಣ್ಣ ಬಳಿಯುವುದರಿಂದ ವಿಮಾನದ ಸುರಕ್ಷತೆ ಹೇಗೆ?
- ಮೊದಲನೆಯದಾಗಿ ಪ್ರಮುಖವಾಗಿ ವಿಮಾನಕ್ಕೆ ಬಿಳಿ ಬಣ್ಣ ಬಳಿಯಲು ಕಾರಣವೆಂದರೆ ಅವುಗಳ ಗೋಚರತೆ ಸುಲಭವಾಗಿ ಎದ್ದು ಕಾಣಬೇಕು ಎಂಬುದಾಗಿರುತ್ತದೆ.
- ವಿಮಾನದ ಪರಿಶೀಲನೆ ವೇಳೆ ವಿಮಾನದ ಮೇಲಿನ ಬಿರುಕುಗಳು, ತುಕ್ಕು ಹಿಡಿದಿರುವುದು ಹಾಗೂ ತೈಲ ಸೋರಿಕೆಯಾಗುತ್ತಿರುವ ಕುರಿತು ಪತ್ತೆ ಹಚ್ಚಲು ಇದು ಸುಲಭವಾಗುತ್ತದೆ. ಇಂತಹ ಸಮಸ್ಯೆಗಳನ್ನು ವಿಮಾನಯಾನ ಶುರುವಾಗುವ ಮೊದಲೇ ಗುರುತಿಸುವುದರಿಂದ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡದಾಗುವುದನ್ನು ತಡೆಯಬಹುದು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಇದು ಕಾಪಾಡುತ್ತದೆ.
- ಇನ್ನು ಬಿಳಿ ಬಣ್ಣವು ಪೈಲಟ್ ಸೇರಿದಂತೆ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಗೂ ಇದು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ.
- ಮೂಲಗಳ ಪ್ರಕಾರ ಬಿಳಿ ಬಣ್ಣ ವಿಮಾನದ ಸುರಕ್ಷತೆಗೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.
ಬಿಳಿ ಬಣ್ಣ ಬಳಿಯುವುದರಿಂದ ವೆಚ್ಚ ಕಡಿಮೆಯಾಗುತ್ತದೆ ಹೇಗೆ?
- ವಿಮಾನಕ್ಕೆ ಬಣ್ಣ ಬಳಿಯುವುದೆಂದರೆ ಸುಲಭವಾದ ಕೆಲಸವಲ್ಲ. ಜೊತೆಗೆ ವಿಮಾನಯಾನ ಸಂಸ್ಥೆಗೂ ಇದು ಕಡಿಮೆ ವೆಚ್ಚದ್ದೇನು ಅಲ್ಲ. ಆದರೆ ಒಂದು ವಿಮಾನಕ್ಕೆ ಬಣ್ಣ ಬಳಿಯಬೇಕೆಂದರೆ ಒಂದು ನಿರ್ದಿಷ್ಟವಾದ ವೆಚ್ಚ ಉಂಟಾಗುತ್ತದೆ. ಹೀಗಿರುವಾಗ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದು ಸಾಮಗ್ರಿ ಹಾಗೂ ಶ್ರಮ ಎರಡರಲ್ಲೂ ಅಗ್ಗವಾಗಿರುತ್ತದೆ.
- ಬಿಳಿ ಬಣ್ಣದ ಹೊರತಾಗಿ ಬೇರೆ ಬಣ್ಣವನ್ನ ಬಳಸುವುದಕ್ಕಿಂತ ಅಥವಾ ಬಳಿಯುವುದಕ್ಕಿಂತ ಇದು ತುಂಬಾ ಕಡಿಮೆ ವೆಚ್ಚವನ್ನ ಹೊಂದಿರುತ್ತದೆ.
- ಒಂದು ವೇಳೆ ಬೇರೆ ಬೇರೆ ಬಣ್ಣ ಹಚ್ಚುವುದಾದರೆ ಮೊದಲಿಗೆ ಬಿಳಿ ಬಣ್ಣ ಬಳಿದು ತದನಂತರ ಬೇರೆ ಬಣ್ಣದ ಕನಿಷ್ಠ ಎರಡು ಮೂರು ಪದರಗಳನ್ನ ಬಳಿಯಬೇಕಾಗುತ್ತದೆ. ಆದರೆ ಬಿಳಿ ಬಣ್ಣದ ವಿಷಯ ಬಂದಾಗ ಹೆಚ್ಚಿನ ಪದರಗಳ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಇದು ತುಂಬಾ ಅಗತ್ಯವಾಗಿರುತ್ತದೆ. ಅಲ್ಲದೆ ಬಿಳಿ ಬಣ್ಣ ಸಮಯಕ್ಕೆ ತಕ್ಕಂತೆ ಮಸುಕಾಗುತ್ತದೆ. ಆದರೆ ಪದೇ ಪದೇ ಬಣ್ಣ ಬಳಿಯುವ ಅವಶ್ಯಕತೆ ಇರುವುದಿಲ್ಲ.
- ಇನ್ನು ವಿಮಾನವನ್ನು ರನ್ ವೇಯ ಮೇಲೆ ಬಿಳಿ ಬಣ್ಣ ತಂಪಾಗಿರುತ್ತದೆ. ಏಕೆಂದರೆ ತೀವ್ರ ಬಿಸಿಲಿನಿಂದಾಗಿ ಕಾದ ರನ್ ವೇನಲ್ಲಿ ವಿಮಾನ ಚಲಿಸಿದಾಗ ಅದರ ಶಾಖ ಇದಕ್ಕೆ ಪೂರ್ಣ ಪ್ರಮಾಣದಲ್ಲಿ ತಗುಲುವುದಿಲ್ಲ. ಅಲ್ಲದೆ ಬಿಳಿ ಬಣ್ಣದಿಂದಾಗಿ ವಿಮಾನಯಾನ ಸಂಸ್ಥೆಗಳು ಒಳ್ಳೆಯ ಉಳಿತಾಯವನ್ನು ಮಾಡುತ್ತವೆ.
ಬಿಳಿ ಬಣ್ಣದಿಂದಾಗಿ ಪ್ರಯಾಣಿಕರ ಸುರಕ್ಷತೆ ಹೇಗೆ?
- ಬಿಳಿ ಬಣ್ಣ ವಿಮಾನಕ್ಕೆ ಮಾತ್ರ ಪ್ರಯೋಜನವಾಗದೆ ಪ್ರಯಾಣಿಕರಿಗೂ ಇದು ಸಹಾಯ ಮಾಡುತ್ತದೆ. ವಿಮಾನಯಾನದ ಸಮಯದಲ್ಲಿ ಸೂರ್ಯನ ಬೆಳಕು ವಿಮಾನದ ಮೇಲೆ ಬೀಳುತ್ತದೆ. ಇದನ್ನ ಕಡಿಮೆ ಮಾಡಲು ಬಿಳಿ ಬಣ್ಣ ಸಹಾಯ ಮಾಡುತ್ತದೆ. ಹೌದು, ಬಿಳಿ ಬಣ್ಣ ಬಿಸಿಲಿನ ಸಮಯದಲ್ಲಿ ಹೆಚ್ಚಿನ ಬಿಸಿಲನ್ನು ಹೀರಿಕೊಳ್ಳುವುದಿಲ್ಲ. ಈ ಮೂಲಕ ವಿಮಾನದಲ್ಲಿರುವ ಪ್ರಯಾಣಿಕರಿಗೆ ಇದು ಸಹಾಯವಾಗುತ್ತದೆ ಹಾಗೂ ವಿಮಾನಯಾನವನ್ನು ಆರಾಮದಾಯಕವಾಗಿರಿಸುತ್ತದೆ.
- ಇನ್ನು ವಿಮಾನದ ಹೊರ ಭಾಗದಲ್ಲಿರುವ ಆನ್ ಬೋರ್ಡ್ ವ್ಯವಸ್ಥೆಗಳು ಶಾಖದಿಂದ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇವುಗಳನ್ನು ಕೂಡ ಬಿಳಿ ಬಣ್ಣ ರಕ್ಷಿಸುತ್ತದೆ.
ಬಿಳಿ ಬಣ್ಣ ಬಳಿಯುವುದರಿಂದ ಹಕ್ಕಿ ಡಿಕ್ಕಿ ಕಡಿಮೆಯಾಗುವ ಸಾಧ್ಯತೆ ಹೇಗೆ?
- ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದಕ್ಕೂ ಹಾಗೂ ಹಕ್ಕಿ ಡಿಕ್ಕಿಗೂ ಏನು ಸಂಬಂಧ? ಎನ್ನಿಸಬಹುದು. ಆದರೆ ಸಂಬಂಧವಿದೆ. ತಜ್ಞರು ಹೇಳುವ ಪ್ರಕಾರ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದರಿಂದ ಪಕ್ಷಿ ಡಿಕ್ಕಿ ಆಗುವುದು ಕಡಿಮೆಯಾಗುತ್ತದೆ. ಬಣ್ಣವೂ ಕೂಡ ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಹೌದು ಬಿಳಿ ಬಣ್ಣ ಅಥವಾ ತಿಳಿಯಾದ ಬಣ್ಣವನ್ನ ಪಕ್ಷಿಗಳು ನೋಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹೀಗಾಗಿ ಪಕ್ಷಿ ಡಿಕ್ಕಿ ಆಗುವುದು ಕಡಿಮೆಯಾಗುತ್ತದೆ ಎನ್ನಲಾಗಿದೆ.
- ಅದಲ್ಲದೆ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದರಿಂದ ವನ್ಯಜೀವಿಗಳು ಹಾಗೂ ಮಾನವರು ತಕ್ಷಣವೇ ಗುರುತಿಸುತ್ತಾರೆ.
ಇನ್ನು ಹೆಚ್ಚಿನ ವಿಮಾನಯಾನ ಸಂಸ್ಥೆಗಳು ತಮ್ಮ ಲೋಗೋಗಳ ಹಿನ್ನೆಲೆಯಾಗಿ ಬಿಳಿ ಬಣ್ಣವನ್ನು ಬಳಸುತ್ತವೆ. ಬಿಸಿಲಿನ ಪ್ರತಿಫಲನ, ಹಣದ ಉಳಿತಾಯ ಸೇರಿದಂತೆ ವಿಮಾನದ ಕಾರ್ಯ ಕ್ಷಮತೆ ಎಲ್ಲವನ್ನ ಉತ್ತಮವಾಗಿರಿಸಲು ಇದು ಸಹಾಯ ಮಾಡುತ್ತದೆ. ಇದು ಈಗಿನಿಂದಲ್ಲ. ಮೊದಲಿನಿಂದಲೂ ಇದನ್ನು ವಿಮಾನಯಾನ ಸಂಸ್ಥೆಗಳು ಅಳವಡಿಸಿಕೊಂಡು ಬಂದಿವೆ. ಅದಲ್ಲದೆ ಬಿಳಿ ಬಣ್ಣವು ಸರಳ ವಿನ್ಯಾಸವೆಂದು ನಂಬಲಾಗಿದೆ.