ಬೆಂಗಳೂರು: ಬಿಜೆಪಿ (BJP) ಟಿಕೆಟ್ ಕೊಡಿಸುತ್ತೇನೆ ಎಂದು ಉದ್ಯಮಿಗೆ ಉಂಡೆ ನಾಮ ತಿಕ್ಕಿದ ಚೈತ್ರಾ ಕುಂದಾಪುರ (Chaithra Kundapura) ಗ್ಯಾಂಗ್ ಪೀಕಿಸಿದ 5.50 ಕೋಟಿ ರೂ. ಅನ್ನು ಏನು ಮಾಡಿದೆ? ಯಾರೆಲ್ಲಾ ಎಷ್ಟು ಹಂಚಿಕೊಂಡಿದ್ದಾರೆ ಎಂದು ಸಿಸಿಬಿ (CCB) ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement
ಬೈಂದೂರಿನ (Baindur) ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಚೈತ್ರಾ ಮತ್ತು ಏಳು ಜನರ ಗ್ಯಾಂಗ್ ಬರೋಬ್ಬರಿ 5.50 ಕೋಟಿ ರೂ. ಪೀಕಿಸಿದೆ. ಟಿಕೆಟ್ ಸಿಗದೆ ಕಾಸು ಕಳೆದುಕೊಂಡ ಗೋವಿಂದ ಪೂಜಾರಿ (Govinda Babu Poojari) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚೈತ್ರಾ ಮತ್ತು ತಂಡ ಆ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ಯರ‍್ಯಾರಿಗೆ ಎಷ್ಟೆಷ್ಟು ಹಂಚಿದ್ದಾರೆ ಎಂದು ಇನ್ನಷ್ಟೇ ವಿಚಾರಗಳು ಬಹಿರಂಗ ಆಗಬೇಕಾಗಿದೆ. ಇದನ್ನೂ ಓದಿ: ನಾನು ಓದಿದ್ದು 7ನೇ ಕ್ಲಾಸ್ – ಮೋಸಹೋದ ಕಥೆಯನ್ನು ವಿನಯ್ ಗುರೂಜಿಗೆ ಪತ್ರದಲ್ಲಿ ವಿವರಿಸಿದ್ದ ಗೋವಿಂದ ಪೂಜಾರಿ
Advertisement
Advertisement
ಈ ನಡುವೆ ಚೈತ್ರಾಳ ಗೆಳೆಯ ಶ್ರೀಕಾಂತ್ ನಾಯಕ್ (Shrikanth Nayak) ಗುಡ್ಡೆಯಂಗಡಿಯಲ್ಲಿ (Guddeyangadi) ಜಮೀನು ಖರೀದಿಸಿ ಅದರಲ್ಲಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ. ಜಮೀನು ಮತ್ತು ಮನೆಗೆ ಒಟ್ಟು ಒಂದು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಶ್ರೀಕಾಂತ್ ನಾಯಕ್ ಈ ಮನೆಯನ್ನು ಕಟ್ಟಿಸುತ್ತಿದ್ದಾರೋ ಅಥವಾ ಚೈತ್ರಾ ಕುಂದಾಪುರ ಹೂಡಿಕೆ ಮಾಡಿದ್ದಾರೋ ಎಂಬ ವಿಚಾರಗಳು ಇನ್ನಷ್ಟೇ ತನಿಖೆಯಿಂದ ಹೊರ ಬರಬೇಕಾಗಿದೆ. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು
Advertisement
Web Stories