ಬೆಂಗಳೂರು: ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ವರುಣ ಟಿಕೆಟ್ ಕೈ ತಪ್ಪಿದ್ದು ಯಾರ ನಿರ್ಣಯ ಎನ್ನುವುದನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಅನೌಪಚಾರಿಕ ಚರ್ಚೆ ವೇಳೆ ಮಾತನಾಡಿದ ಶಾ, ಅದು ನನ್ನ ನಿರ್ಣಯ, ಇದರಲ್ಲಿ ಯಾರ ಪಾತ್ರವೂ ಇಲ್ಲ. ನಾನು ವರುಣಾ ಕ್ಷೇತ್ರಕ್ಕೆ ಹೋಗುತ್ತೇನೆ, ವರುಣಾದಲ್ಲಿ ನಮ್ ಅಭ್ಯರ್ಥಿ ಸ್ಟ್ರಾಂಗ್ ಇದ್ದು ಗೆಲ್ಲುತ್ತಾರೆ ಅವರು ಒಳ್ಳೆಯ ಅಭ್ಯರ್ಥಿ ಎಂದು ತಿಳಿಸಿದರು.
Advertisement
ಟಿಕೆಟ್ ಫೈನಲ್ ಮಾಡಿದ್ದು, ಪ್ರಚಾರಕ್ಕಾಗಿ ಬಳ್ಳಾರಿಗೂ ಹೋಗಲಿದ್ದೇನೆ. ನಾನೇ ಅಲ್ಲಿಯೂ ಹೋಗಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದರು. ಇದನ್ನೂ ಓದಿ: ವಿಶೇಷ ಕಾರಣದಿಂದ ವಿಜಯೇಂದ್ರಗೆ ಟಿಕೆಟ್ ತಪ್ಪಿದೆ: ಬಿಎಸ್‍ವೈ
Advertisement
Advertisement
ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನಾನು ಭೇಟಿಯಾಗಿಲ್ಲ. ನಾನ್ಯಾಕೆ ಕುಮಾರಸ್ವಾಮಿಯನ್ನು ಮೀಟ್ ಆಗಲಿ. ಸಿಎಂ ಸಿದ್ದರಾಮಯ್ಯ ಮೂರ್ಖತನದ ಹೇಳಿಕೆ ನೀಡುತ್ತಿದ್ದಾರೆ ಅಂತಾ ಸ್ಪಷ್ಟನೆ ನೀಡಿದ್ರು. ಇದನ್ನೂ ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್
Advertisement
ಇತ್ತ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಅಮಿತ್ ಶಾ ಜೊತೆಗಿರುವ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಅವರಿಗೆ ಜವಾಬ್ದಾರಿ ಏನಾದ್ರೂ ಇದ್ರೆ ಈ ರೀತಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಅಲ್ಲದೇ ಅಮಿತ್ ಶಾ ಭೇಟಿ ಮಾಡಲು ನನಗೆ ಏನು ಸಂಬಂಧ ಅವರೇನೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾ ಪ್ರವಾಸ ಮಾಡೋಕೆ ಅವರ ಜೊತೆಗೆ ವಿಮಾನದಲ್ಲಿ ಎಲ್ಲಿಗೆ ಹೋಗಲು ಸಾಧ್ಯ ಎಂದು ಪ್ರಶ್ನಿಸಿದ್ರು. ಅಲ್ಲದೇ ಹೀಗೆ ಹೇಳಿದ್ರೆ ಸಿಎಂ ಕುಡಿದು ಮಾತನಾಡುತ್ತಿದ್ದಾರೆ ಅಂತಾ ಜನ ಕಾಮೆಂಟ್ಸ್ ಮಾಡ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು
ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಸ್ಪರ್ಧೆ ಮಾಡಿದ್ದಾರೆ. ಯತೀಂದ್ರ ವಿರುದ್ಧ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಅಂತಾ ಹೇಳಲಾಗಿತ್ತು. ಆದ್ರೆ ನಾಮಪತ್ರ ಸಲ್ಲಿಸುವ ಕೊನೆ ಗಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಬಸವರಾಜು ಎಂಬವರಿಗೆ ಟಿಕೆಟ್ ನೀಡಿದೆ. ಇದನ್ನೂ ಓದಿ: ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ: ವಿಜಯೇಂದ್ರ