ನವದೆಹಲಿ: WHO ಡೇಟಾ ಮತ್ತು ಕಾಂಗ್ರೆಸ್ ಬೇಟಾ ಎರಡು ತಪ್ಪು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧ ಬಿಜೆಪಿ ವ್ಯಂಗ್ಯವಾಗಿ ಮಾತನಾಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ WHO ಡೇಟಾ ತೋರಿಸಿ ಕೋವಿಡ್-19ನಿಂದ ತುಂಬಾ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಬಿಜೆಪಿ ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದೆ ಎಂದು ದಾಖಲೆ ತೋರಿಸಿ ಟೀಕಿಸಿದ್ದರು. ಈ ಹಿನ್ನೆಲೆ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದು, WHO ದ ಡೇಟಾ ಮತ್ತು ಕಾಂಗ್ರೆಸ್‍ನ ಬೇಟಾ(ಮಗ) ತಪ್ಪಾಗಿದೆ ಎಂದು ಆರೋಪಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ COVID-19 ಸಾವುಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಶುಕ್ರವಾರ ಆರೋಪಿಸಿದೆ. ಇದನ್ನೂ ಓದಿ: ಮೋದಿ ಏನೇ ಮಾಡಿದರೂ, ವಿಜ್ಞಾನ ಸುಳ್ಳು ಹೇಳುವುದಿಲ್ಲ: ರಾಹುಲ್ ಗಾಂಧಿ
ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ವೈರಸ್‍ನಿಂದ ಭಾರತದಲ್ಲಿ ಅಂದಾಜು ಸಾವುಗಳನ್ನು ಲೆಕ್ಕಾಚಾರ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್‍ಒ) ವಿಧಾನವು ‘ದೋಷಪೂರಿತ’ ಮತ್ತು ಕಾಲ್ಪನಿಕವಾಗಿದೆ. 2014 ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಇಮೇಜ್ ಅನ್ನು ಕಡಿಮೆ ಮಾಡಲು ರಾಹುಲ್ ಪದೇ ಪದೇ ಪ್ರಯತ್ನಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭಾರತದ ಇಮೇಜ್ ಕಡಿಮೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಭಾರತದ ರಿಜಿಸ್ಟ್ರಾರ್ ಜನರಲ್ ಅಡಿಯಲ್ಲಿ ಜನನ ಮತ್ತು ಮರಣ ನೋಂದಣಿಗಾಗಿ ಭಾರತವು ದೃಢವಾದ ಕಾರ್ಯವಿಧಾನವನ್ನು ಹೊಂದಿದೆ. ‘WHO ಡೇಟಾ ಮತ್ತು ಕಾಂಗ್ರೆಸ್‍ನ ಬೇಟಾ ತಪ್ಪಾಗಿದೆ’ ಎಂದು ಆರೋಪಿಸಿದರು. ರಾಹುಲ್ ಅವರು ಭಾರತವನ್ನು ‘ಧೈರ್ಯಹೀನಗೊಳಿಸಬಾರದು’ ಎಂದು ಸಲಹೆ ಕೊಟ್ಟರು.
ಭಾರತದಲ್ಲಿ 4.7 ಮಿಲಿಯನ್ ಕೋವಿಡ್ ಸಾವುಗಳು ಸಂಭವಿಸಿವೆ ಎಂದು ಹೇಳಿರುವ WHO ವರದಿಯ ಮೇಲೆ ರಾಹುಲ್ ಅವರು ಈ ಹಿಂದೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿಜ್ಞಾನವು ಸುಳ್ಳು ಹೇಳುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ ಎಂದು ವಾಗ್ದಾನ ಮಾಡಿದ್ದರು. ಈ ಹೇಳಿಕೆಗೆ ಬಿಜೆಪಿ ಮುಖಂಡರು ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ: ದೈಹಿಕ ಆರೋಗ್ಯದಷ್ಟೇ ಮಹತ್ವ ಮಾನಸಿಕ ಆರೋಗ್ಯಕ್ಕೂ ನೀಡಬೇಕು: ಕೆ.ಸುಧಾಕರ್