ಚಿಕ್ಕಮಗಳೂರು: ತಾಲೂಕಿನ ಬಯಲು ಸೀಮೆಯ ದೇವರಗೊಂಡನಹಳ್ಳಿ ಗ್ರಾಮದ ಜನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. 1500 ಕ್ಕೂ ಹೆಚ್ಚು ಮಂದಿಯಿರುವ ಗ್ರಾಮದಲ್ಲಿ 800 ಕ್ಕೂ ಅಧಿಕ ಜನರು ಒಂದೇ ಕಾಯಿಲೆಯಿಂದ ನರಳುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಒಂದೇ ಒಂದು ಡೆಂಗ್ಯೂ (Dengue) ಅಥವಾ ಇತರೆ ಮಾರಕ ಕಾಯಿಲೆ ದೃಢಪಟ್ಟಿಲ್ಲದಿರುವುದು ಅಚ್ಚರಿ ಮೂಡಿಸಿದೆ.
ಎರಡು ತಿಂಗಳ ಹಿಂದೆ ಗ್ರಾಮದ ಕೆಲವರಲ್ಲಿ ಕಾಣಿಸಿಕೊಂಡ ಜ್ವರ, ಮೈ-ಕೈ ನೋವು, ಮಂಡಿನೋವು, ಮೈತುರಿಕೆ ಇಡೀ ಗ್ರಾಮಕ್ಕೆ ಆವರಿಸಿದೆ. ಒಂದೊಂದು ಮನೆಯಲ್ಲಿ ಇಬ್ಬರು ರೋಗಿಗಳು ನರಳುತ್ತಿದ್ದಾರೆ. ಮನೆಗೊಬ್ಬರಂತೆ ದಿನಕ್ಕೊಬ್ಬರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬರ್ಗರ್ ಕಿಂಗ್ ರೆಸ್ಟೋರೆಂಟ್ ಶೂಟೌಟ್ ಕೇಸ್ – ಮೂವರು ಗ್ಯಾಂಗ್‍ಸ್ಟರ್‌ಗಳ ಎನ್‍ಕೌಂಟರ್
Advertisement
Advertisement
ನಿಗೂಢ ಜ್ವರಕ್ಕೆ ಒಬ್ಬೊಬ್ಬರು 15 ಸಾವಿರ ಹಣ ಖರ್ಚು ಮಾಡಿದ್ದಾರೆ. ಆದರೆ ಕಾಯಿಲೆ ಯಾವುದು ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಅಲ್ಲದೇ ಯಾರಲ್ಲಿಯೂ ಡೆಂಗ್ಯೂ ಆಗಲಿ, ಚಿಕನ್‌ಗುನ್ಯಾ ಆಗಲಿ ಕಾಣಿಸಿಕೊಂಡಿಲ್ಲ. ಇದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈಗಾಗಲೇ ಖಾಸಗಿ ಹಾಗೂ ಸರ್ಕಾರಿ ಅಸ್ಪತ್ರೆಗೆ ಅಲೆದು ಅಲೆದು ಗ್ರಾಮದ ಜನ ಸುಸ್ತಾಗಿದ್ದಾರೆ. ಮೊದಲು ಜ್ವರ ಬಳಿಕ ಮೈ-ಕೈ ನೋವು, ತುರಿಕೆ-ಉರಿ ಬಾಧಿಸುತ್ತಿದೆ. ಆದರೆ ಮೆಡಿಸನ್ ತೆಗೆದುಕೊಂಡರೂ ಸಾಂಕ್ರಾಮಿಕ ರೋಗದಿಂದ ಮುಕ್ತಿ ಸಿಕ್ಕಿಲ್ಲ.
Advertisement
ಪ್ರಕರಣ ತಿಳಿದ ಕೂಡಲೇ ಆರೋಗ್ಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಊರಿನ ಮನೆಯಲ್ಲಿ ಇದ್ದ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಅದರಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಬರುವಂತಹ ಸೊಳ್ಳೆಗಳ ಮಾದರಿ ಕೂಡ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಲಾರ್ವ ಕೊಂಡೊಯ್ದಿದ್ದಾರೆ. ಅದರ ವರದಿ ಏನು ಬರುತ್ತೋ ಎಂದು ಹಳ್ಳಿಗರು ಅತಂತ್ರಕ್ಕೀಡಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಪರಿಷತ್ ಸದಸ್ಯ ಸಿ.ಟಿ.ರವಿ ಜಿಲ್ಲಾಡಳಿತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ
Advertisement
ದೇವಗೊಂಡನಹಳ್ಳಿಯ ಜನರ ಜ್ವರ, ಮೈ-ಕೈ ನೋವು, ಮಂಡಿನೋವಿಗೆ ಕಾರಣವೇನು ಎಂಬುದೇ ಗೊತ್ತಾಗುತ್ತಿಲ್ಲ. ಊರಿಗೆ ಊರೇ ಮಲಗಿದರೂ ಯಾರಿಗೂ ಡೆಂಗ್ಯೂ, ಚಿಕನ್‌ಗುನ್ಯಾ ಪಾಸಿಟಿವ್ ಬಂದಿಲ್ಲ. ಇದು ಜನರ ಆತಂಕಕ್ಕೆ ಕಾರಣವಾಗಿದೆ.