ರಾಯಚೂರು: ರಾಜ್ಯದಲ್ಲಿ ಹಿಂದೂ, ಮುಸ್ಲಿಂ ಧಾರ್ಮಿಕ ವಿವಾದದ ಸಂಘರ್ಷ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಉಡುಪಿಯ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಪಾದಂಗಳವರು, ಭಾರತೀಯತೆಗೆ ಯಾರೆಲ್ಲಾ ವಿರೋಧ ಮಾಡುತ್ತಾರೋ ಅವರು ಇಲ್ಲಿ ಇರಬಾರದು. ಅವರು ಯಾರೇ ಆಗಿರಲಿ ದೇಶದಲ್ಲಿ ಇರಬಾರದು ಎಂದು ಆಕ್ರೋಶ ಹೊರಹಾಕಿದರು.
Advertisement
ರಾಯಚೂರಿನಲ್ಲಿ ಹನುಮಾನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಧಾರ್ಮಿಕ ಸಂಘರ್ಷ ಸಮಾಜಕ್ಕೆ ಮಾರಕ ಬೆಳವಣಿಗೆ. ನಾವು ಯಾರ ಮೇಲೆಯೂ ದೂರಿ ಪ್ರಯೋಜನವಿಲ್ಲ. ಪ್ರತಿಯೊಬ್ಬರಿಗೂ ಇದು ನನ್ನ ದೇಶ ಅನ್ನೋದು ತಲೆಗೆ ಬರಬೇಕು. ಹಿಂದೂಗಳು ಹಾಗೂ ಯಾರೆಲ್ಲಾ ದೇಶದಲ್ಲಿ ವಾಸವಾಗಿದ್ದಾರೆ ಅವರಿಗೆಲ್ಲಾ ಇದು ನನ್ನ ದೇಶ ಅನ್ನೋದು ಬರಬೇಕು ಎಂದು ಆಶಿಸಿದರು. ಇದನ್ನೂ ಓದಿ: ತುಟಿಗೂ ಸೈಜ್ ಇರುತ್ತಾ? ನೆಟ್ಟಿಗನ ಭೂತ ಬಿಡಿಸಿದ ಸ್ಟಾರ್ ನಟಿ ಶ್ರುತಿ ಹಾಸನ್
Advertisement
Advertisement
ಗಲಾಟೆ ಮಾಡುವವರಿಗೆ ಹಿಂದೂಗಳು ಅರ್ಥವಾಗುವ ಹಾಗೇ ಹೇಳಬೇಕಿದೆ. ಇಲ್ಲಿನ ನೀರು, ಗಾಳಿ, ಆಹಾರ ಸೇವಿಸುವವರೆಲ್ಲಾ ಭಾರತೀಯರು. ನೀನು ಬದುಕಬೇಕು ನಾವು ಬದುಕಬೇಕು. ಒಬ್ಬರು ಸತ್ತು ಇನ್ನೊಬ್ಬರು ಬದುಕುವುದಕ್ಕೆ ಮಾನವೀಯತೆ ಎನ್ನುವುದಿಲ್ಲ. ಎಲ್ಲರೂ ಒಟ್ಟಾಗಿ ಬದುಕಬೇಕು ಅನ್ನೋ ಮನಸ್ಥಿತಿ ಎಲ್ಲರಲ್ಲೂ ಬರಬೇಕು ಎಂದು ಕರೆಕೊಟ್ಟರು.