Connect with us

Bollywood

30 ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಳಗಾದ ಮೊದಲ ಬಾಲಿವುಡ್ ಹಾಡು

Published

on

Share this

ಮುಂಬೈ: ಆದಿತ್ಯ ಚೋಪ್ರಾ ನಿರ್ದೇಶನದ `ಬೇಫಿಕ್ರೆ’ ಸಿನಿಮಾದ `ನಶೆ ಸೇ ಚಡ್ ಗಯ್’ ಹಾಡು 30 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗುವ ಮೂಲಕ ಬಾಲಿವುಡ್ ನಲ್ಲಿ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದೆ.

2016ರ ಅಕ್ಟೋಬರ್ 18ರಂದು ಯೂಟ್ಯೂಬ್‍ನಲ್ಲಿ ಈ ಹಾಡು ಅಪ್ಲೋಡ್ ಆಗಿದ್ದು, 6 ಲಕ್ಷ 67 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಹಾಗೂ 34,360 ಮಂದಿ ಈ ಹಾಡಿನ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ಈ ಹಾಡಿಗೆ ವಿಶಾಲ್ ಮತ್ತು ಶೇಖರ್ ಸಂಗೀತ ಸಂಯೋಜನೆ ಮಾಡಿದ್ದು, ಅರಿಜಿತ್ ಸಿಂಗ್ ಅವರ ಸುಮಧರ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಸಿನಿಮಾದಲ್ಲಿ ರಣ್‍ವೀರ್ ಸಿಂಗ್ ಮತ್ತು ವಾಣಿ ಕಪೂರ್ ಜೊತೆಯಾಗಿ ನಟಿಸಿದ್ದು, ಇಬ್ಬರ ಕೆಮಿಸ್ಟ್ರಿ ಹಾಗೂ ಡ್ಯಾನ್ಸ್ ಕ್ಲಿಕ್ ಆಗಿತ್ತು.

ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿ ಈ ಹಾಡು ಬರೋಬ್ಬರಿ 300,445,508 ವ್ಯೂವ್ ಗಳನ್ನು ಪಡೆದಿದೆ. ಬೇಫಿಕ್ರೆ ಸಿನಿಮಾ ಕಳೆದ ವರ್ಷ ಡಿಸೆಂಬರ್ 9ರಂದು ಪ್ರಪಂಚದಾದ್ಯಂತ ತೆರೆಕಂಡಿತ್ತು. ಚಿತ್ರವು ಇಂದಿನ ಯುವ ಪ್ರೇಮಿಗಳ ಕಥಾ ಹಂದರವನ್ನು ಹೊಂದಿದ್ದು, ತೆರೆಯ ಮೇಲೆ ರೊಮ್ಯಾಂಟಿಕ್ ಆಗಿ ಮೂಡಿಬಂದಿತ್ತು. ಇದೇ ಚಿತ್ರದ ಟೈಟಲ್ ಸಾಂಗ್ ಬನ್ನಿ ದಯಾಳ್ ಕಂಠದಿಂದ ಬಂದ `ಉಡೇ ದಿಲ್ ಬೇಫಿಕ್ರೆ’ ಹಾಡು ಇದೂವರೆಗೂ 2 ಕೋಟಿಗೂ ಅಧಿಕ ವ್ಯೂವ್‍ಗಳನ್ನು ಪಡೆದಿದೆ.

Click to comment

Leave a Reply

Your email address will not be published. Required fields are marked *

Advertisement