– ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪೂರೈಸಲು ಕ್ರಮ
– ಹೆಚ್‍ಡಿಕೆ ಆರೋಪ ತಳ್ಳಿ ಹಾಕಿದ ಸಚಿವ ಜಾರ್ಜ್
ನವದೆಹಲಿ: ನಾನೊಬ್ಬ ಕ್ರಿಶ್ಚಿಯನ್ ಧರ್ಮಸ್ಥಳದಲ್ಲಿ (Dharmasthala) ಆಣೆ ಮಾಡಿದರೆ ಯಾರು ನಂಬುತ್ತಾರೆ?. ಆತ್ಮಸಾಕ್ಷಿಯೇ ನನ್ನ ದೇವರು ಅದರ ಆಣೆಗೂ ನಾನು ಯಾವುದೇ ಹಣ ಪಡೆದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ (K J George) ಸ್ಪಷ್ಟಪಡಿಸಿದರು.
Advertisement
ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಆರೋಪಗಳಿಗೆ ತಿರುಗೇಟು ನೀಡಿದರು. ಹೆಚ್.ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಅದಕ್ಕಾಗಿ ಹಣಪಡೆದ ಆಣೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಾರ್ಜ್, ನಾನು 1989 ರಲ್ಲಿ ಮೊದಲ ಬಾರಿ ಮಂತ್ರಿಯಾದವನು, ಕುಮಾರಸ್ವಾಮಿ ಸಂಪುಟದಲ್ಲೂ ಮಂತ್ರಿಯಾಗಿದ್ದೇನೆ. ನನ್ನ ಅವಧಿಯಲ್ಲಿ ನಾನು ವರ್ಗಾವಣೆ, ಪ್ರಮೋಷನ್ ಗೆ ಹಣ ಪಡೆದಿಲ್ಲ. ನನ್ನ ಗಮನಕ್ಕೆ ಬಾರದೆ ಆಗುವ ಘಟನೆಗಳಿದ್ದರೆ ನಾನು ಕ್ರಮ ಕೈಗೊಳ್ಳುವೆ, ಸರ್ಕಾರದ ಮೇಲೆ ಆಪಾದನೆ ದಾಖಲೆಗಳಿದ್ದರೆ ನೀಡಲಿ. ನಾನೊಬ್ಬ ಕ್ರಿಶ್ಚಿಯನ್ ಧರ್ಮಸ್ಥಳದಲ್ಲಿ ಆಣೆ ಮಾಡಿದರೆ ಯಾರು ನಂಬುತ್ತಾರೆ? ಆತ್ಮಸಾಕ್ಷಿ ನನ್ನ ದೇವರು ಅದರ ಆಣೆಗೂ ನಾನು ಯಾವುದೇ ಹಣ ಪಡೆದಿಲ್ಲ ಸ್ಪಷ್ಟಪಡಿಸಿದರು.
Advertisement
Advertisement
ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ, ಸ್ವಲ್ಪ ಪ್ರಮಾಣದಲ್ಲಿ ಕೊರತೆ ಇದೆ. ಅದನ್ನು ಸರಿದೂಗಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ವಿದ್ಯುತ್ ಖರೀದಿಯಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಆರೋಪ ಆಧಾರ ರಹಿತ. ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಿಂದ ವಿದ್ಯುತ್ ಕೊರತೆಯಾಗಿಲ್ಲ. ಈ ಬಾರಿ ಮಳೆಯಾಗದ ಕಾರಣ ಜಲ ವಿದ್ಯುತ್ ಕೊರತೆಯಾಗಿದೆ. ಗಾಳಿಯೂ ಸರಿಯಾಗಿ ಬೀಸದ ಹಿನ್ನೆಲೆ ಪವನ ಶಕ್ತಿಯೂ ಕಡಿಮೆಯಾಗಿದೆ. ಕಲ್ಲಿದ್ದಲು ವಿದ್ಯುತ್ ಗುಣಮಟ್ಟದ ಕಾರಣದಿಂದ ಕಡಿಮೆಯಾಗಿದೆ. ಈ ಹಿನ್ನೆಲೆ ವಿದ್ಯುತ್ (Electricity) ಕೊರತೆ ಎದುರಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾದ್ರೆ ಅಮರಣಾಂತ ಉಪವಾಸ ಮಾಡ್ತೀನಿ: ಹೆಚ್‌ಡಿಕೆ ಪ್ರತಿಜ್ಞೆ
Advertisement
ಇದರ ಜೊತೆಗೆ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದ ಹಿನ್ನೆಲೆ ಪಂಪಸೆಟ್‍ಗಳ ಮೇಲಿನ ಅವಲಂಬನೆ ಹೆಚ್ಚಿದೆ. ಈ ಹಿನ್ನೆಲೆ ಕೃಷಿ ವಲಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದೆ. ಕಮರ್ಷಿಯಲ್ ಮತ್ತು ಕೊರೊನಾ ಬಳಿಕ ಕೈಗಾರಿಕೆಗಳ ಉತ್ಪಾದನೆ ಹೆಚ್ಚಿದ್ದು, ಈ ವಲಯಗಳಲ್ಲೂ ವಿದ್ಯುತ್ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿದೆ. ಗೃಹ ಜ್ಯೋತಿಯಿಂದ ಹೆಚ್ಚಿನ ಹೊರೆ ಎನ್ನುವುದು ಸರಿಯಲ್ಲ. ವಿದ್ಯುತ್ ಕೊರತೆ ಸರಿದೂಗಿಸಲು ಧರ್ಮಲ್ ಪ್ಲ್ಯಾಂಟ್‍ಗಳನ್ನು ನಿರ್ವಹಣೆ ಮಾಡಬೇಕಿತ್ತು. ಅದಾಗ್ಯೂ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಬೇಡಿಕೆಯನ್ನು ಪೂರೈಸಲು ವಿದ್ಯುತ್ ಮಾರುಕಟ್ಟೆಯಿಂದ 700-800 ಎಂಡಬ್ಲ್ಯೂ ಖರೀದಿಸಲಾಗುತ್ತಿದೆ. ಪಂಜಾಬ್ ನಿಂದ 300 ಎಂಡಬ್ಲ್ಯೂ ಉತ್ತರ ಪ್ರದೇಶದಿಂದ 500 ಎಂಡಬ್ಲ್ಯೂ ಇಂಧನ ವಿನಿಯಮದಡಿಯಲ್ಲಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಪ್ರಸುತ್ತ ಕೇಂದ್ರ ಸರ್ಕಾರದ NTPC ಕೂಡ್ಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ 2400 ಒW ಪೈಕಿ ಕರ್ನಾಟಕದ ಪಾಲು 1250 MW ವಿದ್ಯುತ್ ಇದೆ. ಇದರಲ್ಲಿ 1100 MW ಈಗಾಗಲೇ ನೀಡಲಾಗುತ್ತಿದೆ. ಬಾಕಿ 150 MW ವಿದ್ಯುತ್ ಕೇಂದ್ರ ಸರ್ಕಾರದ ಮೂಲಕ ದೆಹಲಿಗೆ ನೀಡುತ್ತಿದೆ. ಅದನ್ನು ನೀಡಲು ಕೇಳಿದ್ದು, ಡಿಸೆಂಬರ್ 1 ರಿಂದ ನೀಡುವ ಭರವಸೆ ನೀಡಿದ್ದಾರೆ. ಸರ್ಕಾರದಿಂದ ಸರ್ಕಾರ ವಿದ್ಯುತ್ ಪಡೆಯಲಾಗುತ್ತಿದೆ. ಇರದಲ್ಲಿ ಅಕ್ರಮ ಹೇಗೆ ಸಾಧ್ಯತೆ ಎಂದು ಪ್ರಶ್ನಿಸಿದರು.
ಕಲ್ಲಿದ್ದಲು ಆಮದಿನಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಪ್ರತಿಕ್ರಿಯಿಸಿ, ದೇಶಿಯ ಕಲ್ಲಿದ್ದಲು ವಿದ್ಯುತ್ ಉತ್ಪಾದನೆ ಪ್ರಮಾಣ 50% ರಷ್ಟಿದೆ ಈ ಹಿನ್ನಲೆ ಆಮದು ಮಾಡಿಕೊಂಡ 10% ಕಲ್ಲಿದ್ದಲು ಮಿಶ್ರಣ ಮಾಡಿ ಬಳಕೆಗೆ ಸೂಚಿಸಿದೆ. ಇದರಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಬಹುದು. ಇದರಿಂದ 700 MW ವಿದ್ಯುತ್ ಉತ್ಪಾದನೆಯಾಗುತ್ತಿದೆ. KTPP ಕಾಯ್ದೆಗಳ ಅಡಿಯಲ್ಲಿ ಕಲ್ಲಿದ್ದಲು ಖರೀದಿಯಾಗುತ್ತಿದ್ದು ಅಕ್ರಮದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರಿಗೆ ಐದು ಗಂಟೆ ನಿರಂತರ ವಿದ್ಯುತ್ ನೀಡಲಾಗುತ್ತಿದೆ. ಭತ್ತ ಮತ್ತು ಕಬ್ಬು ಬೆಳೆಗಳು ಎಲ್ಲಿ ಕಟಾವಿಗೆ ಬಂದಿವೆಯೋ ಅಲ್ಲಿ ಏಳು ಗಂಟೆಗಳ ವಿದ್ಯುತ್ ನೀಡಲು ಸೂಚಿಸಿದೆ. ಕೆಲವು ಭಾಗದಲ್ಲಿ ಐದು ಗಂಟೆ ವಿದ್ಯುತ್ ಸಿಗುತ್ತಿಲ್ಲ ಎನ್ನುವ ಆರೋಪಗಳಿದೆ ಇದಕ್ಕೆ ತಾಂತ್ರಿಕ ಕಾರಣಗಳು ಇರಬಹುದು ಸ್ಥಳೀಯ ಎಸ್ಕಾಂಗಳಿಗೆ ದೂರು ನೀಡಿ ಸರಿಪಡಿಸಿಕೊಳ್ಳಬಹುದು ಎಂದರು.
Web Stories