ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ (Molakalmuru constituency) ಬಿಜೆಪಿ (BJP) ಅಭ್ಯರ್ಥಿಯಾಗಿ ಮಾಜಿ ಶಾಸಕ ತಿಪ್ಪೇಸ್ವಾಮಿ (Thippeswamy), ಕಾಂಗ್ರೆಸ್‌ನಿಂದ (Congress) ಕೂಡ್ಲಿಗಿ ಮಾಜಿ ಶಾಸಕ ಎನ್‌ವೈ ಗೋಪಾಲಕೃಷ್ಣ (NY Gopalakrishna) ಹಾಗೂ ಜೆಡಿಎಸ್‌ನಿಂದ (JDS) ವೀರಭದ್ರ ಬಾಬು (Veerabhadra Babu) ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಹಾಗೂ ತಿಪ್ಪೇಸ್ವಾಮಿ ಹಿಂದಿನಿಂದಲೂ ಬದ್ಧ ವೈರಿಗಳಾಗಿದ್ದು, ಇಬ್ಬರು ಸಹ ಸಮಬಲದ ಹೋರಾಟ ನಡೆಸುತಿದ್ದಾರೆ. ಆದರೆ ಜೆಡಿಸ್‌ನ ಅಭ್ಯರ್ಥಿ ವಲಸಿಗರಾಗಿದ್ದು, ಕ್ಷೇತ್ರದಲ್ಲಿ ಅಷ್ಟು ಪರಿಚಯವಿಲ್ಲ.
ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದು ಸಚಿವರಾಗಿದ್ದ ಶ್ರೀರಾಮುಲು ಅವರ ಎದುರಾಳಿಯಾಗಿದ್ದ ತಿಪ್ಪೇಸ್ವಾಮಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ, ಅವರನ್ನು ಗೆಲ್ಲಿಸಲು ಬೆಂಗಾವಲಾಗಿ ನಿಂತಿದ್ದಾರೆ. ಈ ಮಧ್ಯೆ ಕೂಡ್ಲಿಗಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರ್ಪಡೆಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಗೋಪಾಲಕೃಷ್ಣ ಕೂಡಾ ಸತತ 6 ಬಾರಿ ಶಾಸಕರಾಗಿದ್ದು, ತಿಪ್ಪೇಸ್ವಾಮಿ ವಿರುದ್ಧ ಭಾರೀ ಕಸರತ್ತು ಆರಂಭಿಸಿದ್ದಾರೆ.
Advertisement
Advertisement
ಇಬ್ಬರು ನಾಯಕರು ಸಹ ಸ್ಥಳೀಯರಾಗಿದ್ದು, ದಿಗ್ಗಜರ ಮಧ್ಯೆ ಜಿದ್ದಾಜಿದ್ದಿನ 50:50 ಸ್ಪರ್ಧೆ ನಡೆಯುತ್ತಿದೆ. ಈ ಕ್ಷೇತ್ರವು ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಬುಡಕಟ್ಟು ಸಂಪ್ರದಾಯದ ಮ್ಯಾಸನಾಯಕ ಸಮುದಾಯ ಹೆಚ್ಚಾಗಿದೆ. ಅವರೇ ಫಲಿತಾಂಶದ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇಲ್ಲಿ ಊರು ನಾಯಕ ಸಮುದಾಯ ಅವರಿಗಿಂತ ಕಡಿಮೆ ಇದೆ. ಹೀಗಾಗಿ ಈ ಇಬ್ಬರು ಸ್ಪರ್ಧಿಗಳಲ್ಲಿ ತಿಪ್ಪೇಸ್ವಾಮಿ ಮ್ಯಾಸನಾಯಕ ಬೇಡರ ಸಮುದಾಯದವರಾಗಿದ್ದು, ಗೋಪಾಲಕೃಷ್ಣ ಊರು ನಾಯಕರಾಗಿರುವುದು ಬಿಜೆಪಿಗೆ ವರದಾನವಾಗಿದೆ.
Advertisement
ಕಾಂಗ್ರೆಸ್ ಟಿಕೆಟ್ ವಂಚಿತ ಯೋಗೇಶ್ ಬಾಬು ಸಹ ಮ್ಯಾಸನಾಯಕ ಬುಡಕಟ್ಟಿನವರಾಗಿದ್ದು, ಗೋಪಾಲಕೃಷ್ಣ ಜೊತೆ ಗುರುತಿಸಿಕೊಂಡಿರುವುದು ಬಿಜೆಪಿಗೆ ತೀವ್ರ ಪೈಪೋಟಿ ಎನಿಸಿದೆ. ಈ ಜಿದ್ದಾಜಿದ್ದಿನ ಕಣದಲ್ಲಿ ಇಬ್ಬರು ಸ್ಪರ್ಧಿಗಳು ಸಹ ಭಾರೀ ಪೈಪೋಟಿಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ತಿಪ್ಪೇಸ್ವಾಮಿ ಪರ ಕಳೆದ ಬಾರಿ ಸೋತಿರುವ ಅನುಕಂಪ ಹಾಗೂ ಇತ್ತೀಚೆಗೆ ಅವರ ಏಕೈಕ ಪುತ್ರನ ಅಕಾಲಿಕ ಸಾವು ಸಹ ಮತದಾರರ ಮನ ಕರಗಿಸಿದೆ.
Advertisement
ಕ್ಷೇತ್ರದಲ್ಲಿನ ಮತದಾರರೊಂದಿಗಿನ ಒಡನಾಟ ವರ್ಕೌಟ್ ಆದರೆ ಬಿಜೆಪಿ ಗೆಲುವು ಸುಲಭವಾಗಲಿದೆ. ಆದರೆ ತುಂಬಾ ಬುದ್ಧಿವಂತ ಹಾಗೂ ಚುನಾವಣಾ ತಂತ್ರಗಾರಿಕೆ ಬಲ್ಲ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ವಿರುದ್ಧ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ ಎಂಬ ಚರ್ಚೆ ಸಹ ಕ್ಷೇತ್ರದಲ್ಲಿದೆ.
ಇನ್ನು ಮಾಜಿ ಶಾಸಕ ತಿಪ್ಪೇಸ್ವಾಮಿ ಪರ ಮಾಜಿ ಸಚಿವ ಶ್ರೀರಾಮುಲು ಆಪ್ತ ಪಾಪೇಶ್ ನಾಯಕ ಓಡಾಡುತ್ತಿರುವುದು ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಕಳೆದ ಬಾರಿ ಗೆದ್ದಿದ್ದ ಶ್ರೀ ರಾಮುಲು ಪರ ಎಲ್ಲಾ ಕೆಲಸಗಳನ್ನು ಪಾಪೇಶ್ ನಾಯಕ ನೆರವೇರಿಸುತ್ತಿದ್ದು, ಕ್ಷೇತ್ರದಲ್ಲಿ ಜನವಿರೋಧಿ ಅಲೆ ಪರಿಣಾಮ ರಾಮುಲು ಕ್ಷೇತ್ರ ಬದಲಾವಣೆ ಮಾಡಿದ್ದರು. ಹೀಗಾಗಿ ಅದರ ಎಫೆಕ್ಟ್ ತಿಪ್ಪೇಸ್ವಾಮಿ ಮೇಲೆ ತಟ್ಟಿದರೆ ಬಿಜೆಪಿ ಗೆಲುವು ಕಷ್ಟವಾಗಲಿದೆ. ಇದನ್ನೂ ಓದಿ: ‘ಕೈ’, ‘ಕಮಲ’ದ ನಡುವೆ ಟಫ್ ಫೈಟ್ – ಕಾಗವಾಡ ಅಖಾಡ ಹೇಗಿದೆ?
ಮತದಾರರು ಎಷ್ಟಿದ್ದಾರೆ?
ಒಟ್ಟು ಮತದಾರರು: 2,43,027
ಪುರುಷರು: 1,22,622
ಮಹಿಳೆಯರು: 1,20,393
ಯಾರ ವೋಟು ಎಷ್ಟು?
ನಾಯಕ : 1,10,000
ಎಸ್‌ಸಿ : 55,000
ರೆಡ್ಡಿ ಲಿಂಗಾಯತ : 25,000
ಗೊಲ್ಲ : 16,000
ಮುಸ್ಲಿಂ : 9,000
ಕುರುಬ : 10,000
ನೇಕಾರ : 5,000
ಇತರೆ: 13,000 ಇದನ್ನೂ ಓದಿ: ಕಾಂಗ್ರೆಸ್ 10 ಪರ್ಸೆಂಟ್ ಕೆಲಸ ಮಾಡಿದ್ರೆ ವೋಟ್ ಕೇಳೋ ಅವಶ್ಯತೆ ಇರ್ತಿರಲಿಲ್ಲ : ಶಾ ಗುಡುಗು