ಮಂಡ್ಯದಲ್ಲಿ ಮತದಾರನ ಒಲವು ದೋಸ್ತಿಗೋ, ಬಿಜೆಪಿಗೋ?

Public TV
1 Min Read
MND BY ELECTION

ಮಂಡ್ಯ: ಇಲ್ಲಿನ ಲೋಕಸಭಾ ಉಪಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಹಾಗೂ ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ನಡುವೆ ಹಣಾಹಣಿ ನಡೆದಿದೆ.

ಈ ಹಿಂದೆ 2014ರ ಮಹಾ ಚುನಾವಣೆಗೂ ಮೊದಲು ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ರಮ್ಯಾ ಗೆದ್ದಿದ್ರೆ, ಆಮೇಲೆ ಮಹಾ ಚುನಾವಣೆಯಲ್ಲಿ ಅತ್ಯಲ್ಪ ಅಂತರದಲ್ಲಿ ಜಯಿಸಿದ್ದು ಸದ್ಯ ಸಚಿವರಾಗಿರುವ ಜೆಡಿಎಸ್‍ನ ಸಿ.ಎಸ್.ಪುಟ್ಟರಾಜು. ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳ ಕ್ರೂಢೀಕರಣದಿಂದ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ವಲಸೆ ಹೋದವ್ರೇ ಧೂಳೀಪಟವಾಗಿದ್ರು. ಅಸೆಂಬ್ಲಿ ಹೊತ್ತಿನ ರಾಜಕೀಯ ವೈರತ್ವ ಇನ್ನೂ ತಣ್ಣಗಾಗಿಲ್ಲ ಅನ್ನೋದಕ್ಕೆ ಉಪ ಚುನಾವಣೆ ಸಾಕ್ಷಿ ಆಗಿತ್ತು.

mandya

ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು. ಈಗಾಗಲೇ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು ರಾಮನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಒಟ್ಟಿನಲ್ಲಿ ರಾಮನಗರ, ಮಂಡ್ಯ ಉಪಚುನಾವಣೆ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದ್ದು ಮತದಾರ ಯಾರಿಗೆ ಜೈ ಅಂದಿದ್ದಾನೋ ಫಲಿತಾಂಶದ ಬಳಿಕ ತಿಳಿಯಲಿದೆ.

ಮಂಡ್ಯದಲ್ಲಿಯ ಜಾತಿ ಲೆಕ್ಕಾಚಾರ ಹೀಗಿದೆ. ಒಕ್ಕಲಿಗರು 8,10,000, ಪರಿಶಿಷ್ಟ ಜಾತಿ ಮತ್ತು ಪಂಗಡ 3,50,000, ಲಿಂಗಾಯತ 1,00,000, ಕುರುಬರು 1,00,000, ಮುಸ್ಲಿಮರು 80,000, ಬೆಸ್ತರು 40,000, ಬ್ರಾಹ್ಮಣರು 30,000, ಕ್ರೈಸ್ತರು 30,000, ಇತರರು 1,40,000 ಮತದಾರರಿದ್ದರು. ಇವುಗಳಲ್ಲಿ ಒಕ್ಕಲಿಗರು ಮತಗಳು ನಿರ್ಣಾಯಕವಾಗಿತ್ತು.

election bang

ಮಂಡ್ಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಪತಾಕೆಯನ್ನು ಹಾರಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಸ್.ಪುಟ್ಟರಾಜು 5,24,370 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದ ರಮ್ಯಾ ಅವರು 5,18,852 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಬಿ.ಶಿವಲಿಂಗಯ್ಯ 86,993 ಮತ ಪಡೆದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *