ಬೆಂಗಳೂರು: ಟಿಕೆಟ್ ಸಿಗದ ನಿಷ್ಠಾವಂತರಿಗೆ ವಿಧಾನ ಪರಿಷತ್ ಸ್ಥಾನ, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುತ್ತೇವೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಟಿಕೆಟ್‍ಗಾಗಿ ಸಿದ್ದರಾಮಯ್ಯ (Siddaramaiah) ಮುಂದೆ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಎಲ್ಲಾ ಕಡೆ ಆಕಾಂಕ್ಷಿಗಳು ಇದ್ದಾರೆ. 1,200 ಜನ ಟಿಕೆಟ್‍ಗೆ ಅರ್ಜಿ ಹಾಕಿದ್ದಾರೆ. ಟಿಕೆಟ್ ಕೇಳೋದ್ರಲ್ಲಿ ತಪ್ಪೇನೂ ಇಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಅಂತ ಪಾರ್ಟಿ ತೀರ್ಮಾನ ಮಾಡುತ್ತೆ ಎಂದರು.
- Advertisement
ಮಾರ್ಚ್ 7, 8ಕ್ಕೆ ಸ್ಕ್ರಿನಿಂಗ್ ಕಮಿಟಿ ಸಭೆ ಇದೆ. ಈಗಾಗಲೇ ಅನೇಕ ಬಾರಿ ಚರ್ಚೆ ಆಗಿದೆ. ಸಹಜವಾಗಿ ಆಕ್ರೋಶದಿಂದ ಗಲಾಟೆ ಮಾಡ್ತಾರೆ. ಎಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಚುನಾವಣೆ ಮಾಡ್ತೀವಿ. ಯಾವ ಗಲಾಟೆಗೂ ಅವಕಾಶ ಕೊಡೊದಿಲ್ಲ ಅಂತ ತಿಳಿಸಿದರು. ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್, ಸಂಸದ ಡಿ.ಕೆ.ಸುರೇಶ್ ಏಕವಚನದಲ್ಲೇ ವಾಕ್ಸಮರ – ದಂಗಾದ ಸುಧಾಕರ್
- Advertisement
ಟಿಕೆಟ್ (Election Ticket) ವಿಚಾರವಾಗಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಯಾವುದೇ ಗಲಾಟೆ ಇಲ್ಲ. ಯಾವ ರೀತಿ ಅದನ್ನ ಹ್ಯಾಂಡಲ್ ಮಾಡಬೇಕು ಅದನ್ನ ನಾವು ಮಾಡ್ತೀವಿ. ಪಕ್ಷದಲ್ಲಿ ಶಿಸ್ತು ಮುಖ್ಯ. ಒಂದು ಕ್ಷೇತ್ರಕ್ಕೆ ಒಂದೇ ಟಿಕೆಟ್ ಕೊಡೊಕೆ ಸಾಧ್ಯ. ಎರಡು, ಮೂರು ಟಿಕೆಟ್ ಕೊಡೋಕೆ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್, ಸಂಸದ ಡಿ.ಕೆ.ಸುರೇಶ್ ಏಕವಚನದಲ್ಲೇ ವಾಕ್ಸಮರ – ದಂಗಾದ ಸುಧಾಕರ್
ಕಾಂಗ್ರೆಸ್ (Congress) ಸರ್ಕಾರ ಗ್ಯಾರಂಟಿ ಬಂದೇ ಬರುತ್ತದೆ. ಟಿಕೆಟ್ ವಂಚಿತರಿಗೆ ನಿಗಮ ಮಂಡಳಿ ಅಧ್ಯಕ್ಷರು, ಎಂಎಲ್‍ಸಿ ಮಾಡ್ತೀವಿ. ಎಲ್ಲಾ ಪಕ್ಷದಲ್ಲಿ ಮಾಡಿದ ಹಾಗೆ ನಮ್ಮ ಪಕ್ಷದಲ್ಲೂ ಮಾಡ್ತೀವಿ. 20 ಜನರನ್ನ ಎಂಎಲ್‍ಸಿ ಮಾಡಬಹುದು, 150 ಬೋರ್ಡ್ ಛೇರ್ಮನ್ ಮಾಡಲು ಅವಕಾಶ ಇದೆ. ಯಾರಿಗೆ ಟಿಕೆಟ್ ಸಿಗೊಲ್ಲವೋ ಅವರಿಗೆ ಅಲ್ಲಿ ಸ್ಥಾನ ಕೊಡ್ತೀವಿ. ಪ್ರಾಮಾಣಿವಾಗಿ ಕೆಲಸ ಮಾಡೋರಿಗೆ, ಪಕ್ಷದ ಕೆಲಸ ಮಾಡೋರಿಗೆ, ಶಿಸ್ತಿನಿಂದ ದುಡಿಯೋರಿಗೆ ಕೊಡ್ತೀವಿ ಎಂದರು.
ಟಿಕೆಟ್ ಆಕಾಂಕ್ಷಿಗಳ ಜೊತೆ ಒನ್ ಟು ಒನ್ ಮಾತಾಡುತ್ತಿದ್ದೇವೆ. ಈಗಾಗಲೇ ಮಾತುಕತೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಮಾತಾಡುತ್ತಿದ್ದಾರೆ. ನಮ್ಮ ಹೈಕಮಾಂಡ್ ನಾಯಕರು ಮಾತಾಡ್ತಾರೆ. ಸಂಧಾನ ಸಭೆಗಳನ್ನು ಮಾಡ್ತಿದ್ದೇವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ತಿದ್ದೇವೆ. ಎಲ್ಲರು ಒಟ್ಟು ಸೇರಿದ್ರೆ ಒಳ್ಳೆ ರಿಸಲ್ಟ್ ಬರುತ್ತದೆ ಎಂದು ತಿಳಿಸಿದರು.