ಬಿಗ್ ಬಾಸ್ ಮನೆಯಿಂದ ಹೊರ ಬರೋದು ಯಾರು?

Public TV
1 Min Read
Bigg Boss 3 3

ಬಿಗ್ ಬಾಸ್ (Bigg Boss Kannada) ಮನೆ ಈ ವಾರ ಅಕ್ಷರಶಃ ಯುದ್ಧ ಭೂಮಿಯಂತೆ ಕಾಣುತ್ತಿದೆ. ಫಿನಾಲೆಗೆ ಒಂದು ವಾರವಷ್ಟೇ ಬಾಕಿ. ಮನೆಯಲ್ಲಿ ಇರೋದು ಏಳು ಜನ. ಈಗಾಗಲೇ ಸಂಗೀತಾ ಶೃಂಗೇರಿ ಡೈರೆಕ್ಟ್ ಆಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ತುಕಾಲಿ ಸಂತು ಅವರು ನಾಮಿನೇಷನ್ ತೂಗುಕತ್ತಿಯಿಂದ ತಪ್ಪಿಸಿಕೊಂಡಿದ್ದಾರೆ. ಹಾಗಾಗಿ ವರ್ತೂರು ಸಂತೋಷ, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್ (Drone Pratap) ಮತ್ತು ನಮ್ರತಾ ಸೆಣೆಸಾಡೋದು ಅನಿವಾರ್ಯವಾಗಿದೆ.

Bigg Boss 1 2

ಮಿಡ್ ವೀಕ್ ಎಲಿಮಿನೇಷನ್ (Elimination) ಅಂತ ಈಗಾಗಲೇ ತನಿಷಾ ಕುಪ್ಪಂಡ ಅವರನ್ನು ಮನೆಯಿಂದ ಕಳುಹಿಸಲಾಗಿದೆ. ಫಿನಾಲೆ ವೇದಿಕೆಯ ಮೇಲೆ ಐದೇ ಐದು ಜನರು ಇರುವ ಕಾರಣದಿಂದಾಗಿ ಇನ್ನೂ ಇಬ್ಬರನ್ನೂ ಮನೆಯಿಂದ ಹೊರ ಕಳುಹಿಸಬೇಕಿದೆ. ಹಾಗಾಗಿ ಈ ವಾರ ಮತ್ತ್ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಶುರುವಾಗಿದೆ. ಕಳೆದ ಸುದೀಪ್ ಅವರು ವರ್ತೂರು ಸಂತೋಷ್ ಅಥವಾ ತುಕಾಲಿ ಸಂತು ಇಬ್ಬರಲ್ಲಿ ಒಬ್ಬರು ಮನೆಯಿಂದ ಆಚೆ ಹೋಗಲು ರೆಡಿಯಾಗಿ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು. ಈ ಬಾರಿ ತುಕಾಲಿ ಬಚಾವ್ ಆಗಿದ್ದಾರೆ.

Bigg Boss 2 3

ಸದ್ಯ ನಾಮಿನೇಟ್ ಆಗಿರುವ ಕಂಟೆಸ್ಟೆಂಟ್ ಗಳ ಪೈಕಿ ವಿನಯ್, ಕಾರ್ತಿಕ್ ಹಾಗೂ ಡ್ರೋನ್ ಪ್ರತಾಪ್ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳು ಅನಿಸಿಕೊಂಡಿದ್ದಾರೆ. ಉಳಿದಿರೋದು ವರ್ತೂರು ಸಂತೋಷ್ ಮತ್ತು ನಮ್ರತಾ. ಇಬ್ಬರಲ್ಲಿ ಒಬ್ಬರು ಈ ವಾರ ಆಚೆ ಬರಬಹುದಾ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಹೊರ ಬಂದರೆ ಈ ಇಬ್ಬರಲ್ಲಿ ಒಬ್ಬರು ಗ್ಯಾರಂಟಿ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಕಳೆದ ವಾರವೇ ವರ್ತೂರು ಆಚೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಈ ವಾರ ಅದೇನಾದರೂ ರಿಪೀಟ್ ಆಗಬಹುದಾ? ಗೊತ್ತಿಲ್ಲ.

ಮತ್ತೊಂದು ಕಿಚ್ಚನ ಪಂಚಾಯತಿ ಎಂದು ನಡೆಯುತ್ತಿದೆ. ಈ ಪಂಚಾಯತಿಯಲ್ಲಿ ಏನೆಲ್ಲ ಸಂಗತಿಗಳು ನಡೆಯಲಿವೆ ಎನ್ನುವ ಚರ್ಚೆ ಕೂಡ ಆಗುತ್ತಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ಕಿಚ್ಚ ಇಂದು ಮಾಡುತ್ತಾರಾ ಅಥವಾ ನಾಳೆ ಮಾಡುತ್ತಾರಾ ಎನ್ನುವುದು ಇಂದು ರಾತ್ರಿಗೆ ಅಂದಾಜು ಸಿಗಲಿದೆ.

Share This Article