ಚಿತ್ರದುರ್ಗ: ಯಾರು ಗೋ ಬ್ಯಾಕ್, ಯಾರು ಕಮ್ ಬ್ಯಾಕ್ ಎಂಬುದು ಚುನಾವಣೆ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ಹೇಳಿದರು.
ಚಿತ್ರದುರ್ಗ (Chitradurga) ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಪರ ನಡೆದ ಲಿಂಗಾಯತ ಮುಖಂಡರ ಪ್ರಚಾರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದ ವೇಳೆ 40% ಕಮಿಷನ್ ಹೊಡೆದಿದೆ. ಹೀಗಾಗಿ ಮತ ಕೇಳಲು ಬರುವ ಬಿಜೆಪಿ ನಾಯಕರಿಗೆ ಗೋ ಬ್ಯಾಕ್ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿರುವ ವಿಚಾರಕ್ಕೆ ಬಿಎಸ್‌ವೈ ತಿರುಗೇಟು ನೀಡಿದರು. ಇದನ್ನೂ ಓದಿ: ರಾಜಾ ಅಮರೇಶ್ವರ ನಾಯಕ ಜಾತಿ ಪ್ರಮಾಣ ಪತ್ರ ಗೊಂದಲ- ಏ.19ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
Advertisement
Advertisement
ಈಗ ನಾನು ಸಿದ್ಧರಾಮಯ್ಯಗೆ ಈ ಬಗ್ಗೆ ಉತ್ತರಿಸಲ್ಲ. ಈ ಲೋಕಸಭೆ ಚುನಾವಣೆ ಮುಗಿಯಲಿ. ಯಾರು ಗೋ ಬ್ಯಾಕ್, ಕಮ್ ಬ್ಯಾಕ್ ಎಂಬುದು ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ಟಾಂಗ್ ಕೊಟ್ಟರು.
Advertisement
Advertisement
ಕೊಪ್ಪಳದಲ್ಲಿ ಮುಂದುವರೆದಿರುವ ಸಂಸದ ಸಂಗಣ್ಣ ಕರಡಿ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್‌ವೈ, ಎಲ್ಲವೂ ಬಗೆಹರಿದಿದೆ. ನಮ್ಮ ದೊಡ್ಡ ಪಕ್ಷದಲ್ಲಿ ಸಣ್ಣ ಭಿನ್ನಮತ ಸಹಜವಾಗಿರುತ್ತವೆ. ಕೆಲವೆಡೆ ಇರುವ ಭಿನ್ನಮತ ಸರಿಪಡಿಸುತ್ತೇವೆ ಎಂದರು. ಈ ವೇಳೆ ಮಾಜಿ ಸಚಿವ ಮುರುಗೇಶ್ ನೀರಾಣಿ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ, ಎಂಎಲ್‌ಸಿಗಳಾದ ರವಿಕುಮಾರ್, ನವೀನ್ ಇದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಅಜ್ಜಿ, ತಾತಾ, ಅಮ್ಮ ಬಂದ್ರೂ ಕೋಲಾರ ಗೆಲುವು ನಮ್ಮದೇ: ಮುನಿಸ್ವಾಮಿ