ಬೆಂಗಳೂರು: ಬಿಬಿಎಂಪಿ ಮುಂದಿನ ಮೇಯರ್ ಯಾರು ಎಂಬ ಪ್ರಶ್ನೆಯೊಂದು ರಾಜಕೀಯ ಪಕ್ಷಗಳಲ್ಲಿ ಹುಟ್ಟಿಕೊಂಡಿದೆ. ಪಕ್ಷದ ಆಂತರಿಕ ಕಲಹಗಳ ನಡುವೆಯೂ ಮೂರು ಪಕ್ಷಗಳು ಅಧಿಕಾರದ ಗದ್ದುಗೆಗಾಗಿ ಪ್ಲಾನ್ ಮಾಡಿಕೊಳ್ಳುತ್ತಿವೆ. ಮೂರು ಪಕ್ಷಗಳು ಪ್ರತ್ಯೇಕ ತಂತ್ರಗಾರಿಕೆಯನ್ನು ಬಳಸಿದ್ದು, ಮೇಯರ್ ಯಾರಾಗ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮೇಯರ್ ಸ್ಥಾನಕ್ಕಾಗಿ ಭಾರೀ ಕಸರತ್ತು ನಡೆಸುತ್ತಿದೆ. ಬಿಬಿಎಂಪಿಯಲ್ಲಿ ಮೈತ್ರಿ ರಚಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಸದ್ಯ ಎಲ್ಲವೂ ಸರಿಯಿಲ್ಲ. ಮೂರು ಪಕ್ಷಗಳು ಪ್ರತ್ಯೇಕವಾಗಿ ಮೇಯರ್ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಲ್ಲಿ, ಪಕ್ಷೇತರರ ಬೆಂಬಲ ಬೇಕಿದೆ. ಹಾಗಾಗಿ ಪಕ್ಷೇತರರು ಯಾರ ಪರ ಎಂಬುದರ ಮೇಲೆ ಮೇಯರ್ ಸ್ಥಾನ ಯಾರಿಗೆ ಸಿಗಲಿದೆ ಎಂಬುವುದು ಬಹುತೇಕ ಖಚಿತವಾಗಲಿದೆ.
Advertisement
Advertisement
ಕಮಲ ಪಾಳಯದಲ್ಲಿ ನಿರಾಸಕ್ತಿ:
ಮೇಯರ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಕಮಲ ಪಾಳಯದಲ್ಲಿ ಈ ಬಾರಿ ಮೊದಲಿನಂತೆ ಉತ್ಸಾಹ ಕಾಣುತ್ತಿಲ್ಲ. ಬೆಂಗಳೂರು ಉಸ್ತುವಾರಿ ಮತ್ತು ಡಿಸಿಎಂ ಸ್ಥಾನ ತಪ್ಪಿದ್ದಕ್ಕೆ ಮೇಯರ್ ಸ್ಥಾನಕ್ಕಾಗಿ ಸದಾ ಆ್ಯಕ್ಟೀವ್ ಆಗಿರುತ್ತಿದ್ದ ಸಚಿವ ಆರ್.ಅಶೋಕ್ ತಲೆಕೆಡಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಇತ್ತ ಡಿಸಿಎಂ ಅಶ್ವಥ್ ನಾರಾಯಣ ಸಹ ಬೆಂಗಳೂರು ಉಸ್ತುವಾರಿ ಕೈ ತಪ್ಪಿದ್ದಕ್ಕೆ ಮೇಯರ್ ಚುನಾವಣೆಗೆ ಹಿಂದೇಟು ಹಾಕುತ್ತಿದ್ರೂ, ತಮ್ಮ ಕ್ಷೇತ್ರದ ಕಾರ್ಪೋರೆಟರ್ ಮಂಜುನಾಥ್ ರಾಜು ಪರ ಒಲವು ತೋರಿದ್ದಾರೆ. ಇತ್ತ ಸಚಿವ ವಿ.ಸೋಮಣ್ಣ ಸಹ ತಮ್ಮ ಕ್ಷೇತ್ರದ ಉಮೇಶ್ ಶೆಟ್ಟಿಗಾಗಿ ಲಾಬಿ ಮಾಡೊ ಸಾಧ್ಯತೆಗಳಿವೆ. ಈ ನಡುವೆ ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
Advertisement
Advertisement
ಕಾಂಗ್ರೆಸ್‍ಗೆ ಮೈನಸ್:
ಬಿಬಿಎಂಪಿಯಲ್ಲಿ ಕಾಂಗ್ರೆಸ್ ನಾಲ್ಕು ಬಾರಿ ಅಧಿಕಾರ ಹಿಡಿಯಲು ಅನರ್ಹ ಶಾಸಕ ಮುನಿರತ್ನವರ ಶ್ರಮವಿತ್ತು. ಡಿಕೆ ಸೋದರರು ಮುನಿರತ್ನವರ ಮೂಲಕ ಮೇಯರ್ ಸ್ಥಾನ ಕಾಂಗ್ರೆಸ್ ತೆಕ್ಕಗೆ ತೆಗೆದುಕೊಳ್ಳಲು ಯಶಸ್ವಿಯಾಗುತ್ತಿದ್ದರು. ಆದರೀಗ ಡಿಕೆ ಸೋದರರು ತಮ್ಮದೇ ಆದ ಸಮಸ್ಯೆಯಲ್ಲಿ ಸಿಲುಕಿದ್ದು, ದೆಹಲಿಯಲ್ಲಿದ್ದಾರೆ. ಇತ್ತ ಶಾಸಕ ಮುನಿರತ್ನ ಕಾಂಗ್ರೆಸ್ ನಿಂದ ಅನರ್ಹಗೊಂಡಿದ್ದಾರೆ. ಉಳಿದಿರುವ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಮೈತ್ರಿ ಸರ್ಕಾರದಲ್ಲಿ ಸ್ಥಾನ ನೀಡದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಈಗಾಗಲೇ ತಮ್ಮ ಕ್ಷೇತ್ರದ ಗಂಗಾಬಿಕೆ ಅವರನ್ನು ಮೇಯರ್ ಮಾಡಲಾಗಿದೆ. ಹಾಗಾಗಿ ಸೋತು ಕೈ ಸುಟ್ಟುಕೊಳ್ಳುವದಕ್ಕಿಂತ ದೂರ ಉಳಿಯಲು ರಾಮಲಿಂಗಾ ರೆಡ್ಡಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ದೂರ ಉಳಿದ ಜೆಡಿಎಸ್:
ಕಳೆದ ನಾಲ್ಕು ಬಾರಿ ಅಧಿಕಾರ ಅನುಭವಿಸಿರುವ ಜೆಡಿಎಸ್ ದೂರ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಜೆಡಿಎಸ್ ಶಾಸಕ ಗೋಪಾಲಯ್ಯ ಅನರ್ಹಗೊಂಡಿದ್ದಾರೆ. ಅನರ್ಹ ಶಾಸಕ ಪತ್ನಿ ಹೇಮಲತಾರನ್ನ ಮೇಯರ್ ಮಾಡಿಸಲು ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.