CinemaKarnatakaLatestLeading NewsMain PostSandalwood

ರಮ್ಯಾ ಬ್ಯಾನರ್ ನಿಂದ ಮೊದಲ ಅವಕಾಶಗಿಟ್ಟಿಸಿಕೊಂಡ ನಿರ್ದೇಶಕ ಯಾರು? ಕರಾವಳಿ ಹುಡುಗನಿಗೆ ಒಲಿದ ಅವಕಾಶ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೊನ್ನೆಯಷ್ಟೇ ತಮ್ಮ ಹೊಸ ಬ್ಯಾನರ್ ಘೋಷಣೆ ಮಾಡಿದ್ದಾರೆ. ಅದಕ್ಕೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಅಂತ ಹೆಸರು ಇಟ್ಟಿದ್ದಾರೆ. ಪ್ರೊಡಕ್ಷನ್ ಹೆಸರು ಘೋಷಣೆ ಮಾಡುವ ದಿನವೇ ಎರಡು ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ವಿಷಯವನ್ನೂ ಬಹಿರಂಗ ಪಡಿಸಿದ್ದರು. ಆ ಎರಡು ಸಿನಿಮಾಗಳನ್ನು ಯಾರೆಲ್ಲ ಮಾಡಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು. ಮೂಲಗಳ ಪ್ರಕಾರ ಕರಾವಳಿ ಹುಡುಗ ರಾಜ್ ಬಿ ಶೆಟ್ಟಿ ಮೊದಲ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ರಮ್ಯಾ ಅವರಿಗೆ ಸಿನಿಮಾ ಮಾಡುತ್ತಿಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳುತ್ತಿದ್ದರೂ, ಆ್ಯಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಿಂದ ರಾಜ್ ಬಿ ಶೆಟ್ಟಿ ಅವರೇ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಈ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿಲ್ಲ. ಹಾಗಾಗಿ ರಮ್ಯಾಗೆ ಸಿನಿಮಾ ಮಾಡುತ್ತಿಲ್ಲವೆಂದು ಮಾತು ಬದಲಿಸುತ್ತಿದ್ದಾರಂತೆ ರಾಜ್ ಬಿ. ಶೆಟ್ಟಿ. ಆದರೆ, ಇವರೇ ಮೊದಲ ಸಿನಿಮಾ ನಿರ್ದೇಶನ ಮಾಡುವುದು ಪಕ್ಕಾ ಎನ್ನುತ್ತಿವೆ ಬಲ್ಲ ಮೂಲಗಳು. ಇದನ್ನೂ ಓದಿ: ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

ಈಗಾಗಲೇ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಎರಡು ಹಂತದಲ್ಲಿ ಮಾತುಕತೆ ಕೂಡ ಮಾಡಿದ್ದಾರೆ. ಸ್ವತಃ ರಮ್ಯಾ ಮನೆಗೆ ಹೋಗಿ ಶೆಟ್ಟಿ ಅವರು ಕಥೆ ಕೂಡ ಹೇಳಿ ಬಂದಿದ್ದಾರೆ. ಮುಂದಿನ ಹಂತದ ಕೆಲಸಗಳಲ್ಲೂ ಅವರು ತೊಡಗಿದ್ದಾರೆ. ರಮ್ಯಾ ಅವರೇ ಈ ವಿಷಯವನ್ನು ಬಹಿರಂಗ ಪಡಿಸಲಿ ಎಂದು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ರಮ್ಯಾ ಅವರ ಮೊದಲ ನಿರ್ಮಾಣದ ಸಿನಿಮಾ ರಾಜ್ ಬಿ ಶೆಟ್ಟಿ ಅವರದ್ದೇ ಆಗಿರಲಿದೆ.

Live Tv

Leave a Reply

Your email address will not be published.

Back to top button