ಹೈದರಾಬಾದ್: ವಿವಾದಕ್ಕೆ ಸಿಲುಕಿರುವ ʼದಿ ಕಾಶ್ಮೀರ್ ಫೈಲ್ಸ್ʼ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪ್ರತಿಕ್ರಿಯಿಸಿದ್ದಾರೆ. ಯಾರಿಗೆ ಬೇಕು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಎಂದು ಪ್ರಶ್ನಿಸಿದ್ದಾರೆ.
Advertisement
‘ದಿ ಕಾಶ್ಮೀರ್ ಫೈಲ್ಸ್’, ಹಾಗೆಂದರೇನು? ಯಾವುದೇ ಪ್ರಗತಿಪರ ಸರ್ಕಾರವಿದ್ದರೆ ನೀರಾವರಿ ಫೈಲ್ಸ್ (ಕಡತಗಳು), ಆರ್ಥಿಕ ಫೈಲ್ಸ್ ಇರಬೇಕು. ದಿ ಕಾಶ್ಮೀರ್ ಫೈಲ್ಸ್ ಯಾರಿಗೆ ಬೇಕು? ಮತಕ್ಕಾಗಿ ಕೆಲವರು ಈ ರೀತಿ ಮಾಡುತ್ತಿದ್ದಾರೆ. ನಮಗೆ ಯಾವುದೇ ಪ್ರಯೋಜನವಾಗಿಲ್ಲ ಅಂತ ದೆಹಲಿಯಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರು ಹೇಳುತ್ತಿದ್ದಾರೆ ಎಂದು ರಾವ್ ಕೇಂದ್ರದ ವಿರುದ್ಧ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಕಂಗನಾ ರಣಾವತ್ ಪ್ರಶ್ನೆಗೆ ಮೌನ ಮುರಿದ ಆಮೀರ್ ಖಾನ್ : ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಬೆನ್ನು ತಟ್ಟಿದ ಖಾನ್
Advertisement
ಯಾಸಂಗಿ ಬೆಳೆ ಕುರಿತು ಮಾತನಾಡಿದ ಅವರು, ಯಾಸಂಗಿ ಬೆಳೆ ಖರೀದಿಸುವಂತೆ ಕೇಂದ್ರಕ್ಕೆ ಒತ್ತಾಯಿಸುತ್ತಿದ್ದೇವೆ. ನಮ್ಮ ಸಚಿವರು ನಾಳೆ ದೆಹಲಿಗೆ ಹೋಗಿ ಕೇಂದ್ರವನ್ನು ಕೇಳುತ್ತಾರೆ. ಆಹಾರ ಕ್ಷೇತ್ರವು ಭಾರತದಲ್ಲಿ ಪ್ರಮುಖ ಕ್ಷೇತ್ರವಾಗಿದೆ. ದೇಶದಲ್ಲಿ ಏಕರೂಪದ ಆಹಾರ ಧಾನ್ಯ ನೀತಿ ಜಾರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.
Advertisement
Advertisement
ನಾವು ಸುಮ್ಮನಿರುವುದಿಲ್ಲ, ಆಂದೋಲನ ನಡೆಸುತ್ತೇವೆ. ಶೇ.100ರಷ್ಟು ಖರೀದಿ ಆದೇಶ ಬರುವವರೆಗೂ ಹೋರಾಟ ನಡೆಸುತ್ತೇವೆ. ಯುಪಿಯಲ್ಲಿ ಬಿಜೆಪಿ ಸ್ಥಾನಗಳು ಕಡಿಮೆಯಾಗುತ್ತವೆ ಎಂದು ನಾನು ಮೊದಲೇ ಹೇಳಿದ್ದೆ, ಅದು ನಡೆದಿದೆ. MSP (ಕನಿಷ್ಠ ಬೆಂಬಲ ಬೆಲೆ) ಮೂಲಕ ಬೆಳೆಗಳನ್ನು ಖರೀದಿಸಲು ನಾವು ಕೇಂದ್ರವನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು