Cinema

ರಾಜಮೌಳಿ ಕನ್ನಡ ಸಿನಿಮಾವನ್ನು ಮಾಡಿದ್ರೂ, ಮಾಡಬಹುದು: ವಿಜಯೇಂದ್ರ ಪ್ರಸಾದ್

Published

on

Share this

ಬೆಂಗಳೂರು: ರಾಜಮೌಳಿ, ಕರ್ನಾಟಕಕ್ಕೆ ಬಂದು ಕನ್ನಡ ಸಿನಿಮಾವನ್ನು ಮಾಡಿದ್ರೂ, ಮಾಡಬಹುದು ಎಂದು ತಂದೆ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.

ಮುಂದೆ ಬಿಡುಗಡೆಯಾಗಲಿರುವ ಶ್ರೀವಲ್ಲಿ ಚಿತ್ರದ ಬಗ್ಗೆ ಮಾತನಾಡುವ ವೇಳೆ ರಾಜಮೌಳಿ ಕನ್ನಡ ಸಿನಿಮಾ ಮಾಡುತ್ತಾರಾ ಎಂದು ಕೇಳಿದ್ದಕ್ಕೆ, ಯಾರಿಗೆ ಗೊತ್ತು, ಒಂದು ದಿನ ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡಿದ್ರೂ ಮಾಡಬಹುದು ಎಂದು ಅವರು ಉತ್ತರಿಸಿದರು.

ಕರ್ನಾಟಕದ ಜನತೆ ಬಗ್ಗೆ ಮಾತನಾಡಿದ ಅವರು, ಕನ್ನಡ ಜನತೆ ಹೃದಯವಂತರು ಎಲ್ಲ ಭಾಷೆ ಮತ್ತು ಸಂಸ್ಕೃತಿಯನ್ನು ಇಷ್ಟಪಡುತ್ತಾರೆ ಎಂದು ತಿಳಿಸಿದರು.

ಆಂಧ್ರ ತೆಲಂಗಾಣ ಬಿಟ್ಟರೆ ಬಾಹುಬಲಿಯ ಎರಡನೇ ಅತ್ಯಧಿಕ ಮಾರುಕಟ್ಟೆಗೆ ಕರ್ನಾಟಕವಾಗಿದ್ದು, 540 ಕೋಟಿ ಕಲೆಕ್ಷನ್ ನಲ್ಲಿ ಶೇ. 20 ರಷ್ಟು ಹಣ ಕರ್ನಾಟಕದಲ್ಲೇ ಕಲೆಕ್ಷನ್ ಆಗಿದೆ. ದುಬೈಗೆ ಪ್ರವಾಸ ಮುಗಿಸಿ ಬಂದಿದ್ದ ಸಿಎಂ ಸಿದ್ದರಾಮಯ್ಯನವರು ಮೊಮ್ಮಗನ ಜೊತೆ ಈ ಚಿತ್ರವನ್ನು ವೀಕ್ಷಿಸಿದ್ದರು.

ಬಾಹುಬಲಿ ಸಿನಿಮಾಗೆ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್ ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಅಭಿನಯದ ಜಾಗ್ವಾರ್ ಚಿತ್ರಕ್ಕೆ ಕಥೆ ಬರೆದಿದ್ದರು.

ರಾಯಚೂರಿನ ನಲ್ಲಿ ಹೀರೇಕೋಟಿಕಲ್‍ನಲ್ಲಿ ಜನಿಸಿದ ರಾಜಮೌಳಿ ಅವರು ಬಳಿಕ ಪಶ್ಚಿಮ ಗೋದಾವರಿಯಲ್ಲಿ ಓದಿ ತಮಿಳುನಾಡಿನಲ್ಲಿ ಕೆಲಸ ಮಾಡಿ ಈಗ ಆಂಧ್ರದಲ್ಲಿ ನೆಲೆಸಿದ್ದಾರೆ.

2015ರಲ್ಲಿ ಆಂಧ್ರಪ್ರದೇಶ ಸರ್ಕಾರ ರಾಜಮೌಳಿ ಅವರ ಹಸರನ್ನು ಪದ್ಮ ಗೌರವಕ್ಕೆ ಸೂಚಿಸಿದಾಗ ರಾಜಮೌಳಿ ಅವರು ನಿರಾಕರಿಸಿದ್ದರು. ನಾನು ಆ ಪ್ರಶಸ್ತಿಗೆ ಅರ್ಹನಲ್ಲ. ನನ್ನ ಹೆಸರನ್ನು ಶಿಫಾರಸ್ಸು ಮಾಡಬೇಡಿ ಅಂದಿದ್ದರು. ಆದರೆ 2016ರಲ್ಲಿ ರ್ನಾಟಕ ಸರ್ಕಾರ ರಾಜಮೌಳಿ ಅವರ ಹೆಸರನ್ನು ಸೂಚಿಸಿತ್ತು.

ಈ ಗೌರವಕ್ಕೆ ಪಾತ್ರರಾದ ಬಳಿಕ ಟ್ವೀಟ್ ಮಾಡಿದ್ದ ರಾಜಮೌಳಿ, ನಾನು ಹುಟ್ಟಿದ್ದು ಕರ್ನಾಟಕ(ರಾಯಚೂರು)ದಲ್ಲಿ, ಓದಿದ್ದು ಆಂಧ್ರಪ್ರದೇಶದಲ್ಲಿ, ಕೆಲಸ ಮಾಡುತ್ತಿರುವುದು ತಮಿಳುನಾಡಿನಲ್ಲಿ, ವಾಸವಾಗಿರುವುದು ಆಂಧ್ರಪ್ರದೇಶದ ತೆಲಂಗಾಣದಲ್ಲಿ. ಹಾಗಾಗಿ ನಾನು ಎಲ್ಲಾ ರಾಜ್ಯಗಳಿಗೆ ಸೇರಿದ ಮಣ್ಣಿನ ಮಗನಾಗಿರುವುದಕ್ಕೆ ಸಂತಸವಾಗುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸುನಾಮಿ: ಒಟ್ಟು ಐದು ದಿನದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?

ಇದನ್ನೂ ಓದಿ: ಬಾಹುಬಲಿಗಾಗಿ 5 ವರ್ಷ ಮುಡಿಪಿಟ್ಟ ನಿರ್ದೇಶಕ ರಾಜಮೌಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

Click to comment

Leave a Reply

Your email address will not be published. Required fields are marked *

Advertisement
Advertisement