ನ್ಯಾಯಾಧೀಶರ ಮಾನಹಾನಿ ಆಗುವಂತಹ ರೀತಿಯಲ್ಲಿ ಟ್ವಿಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ನಟ ಚೇತನ್, ಜೈಲಿನಲ್ಲಿ ಅವರು ಹೆಚ್ಚಿನ ಸಮಯವನ್ನು ಓದಿನಲ್ಲಿ ಕಳೆಯುತ್ತಿದ್ದಾರಂತೆ. ಇದನ್ನೂ ಓದಿ : ಮಾಜಿ ಸಿಎಂ ಸಿದ್ಧರಾಮಯ್ಯಗೆ ಹೆದರಿಸಿದ ಬಿಗ್ ಬಾಸ್ ಪ್ರಥಮ್
Advertisement
ಬುಧವಾರವಷ್ಟೇ ಚೇತನ್ ಅವರ ಪತ್ನಿ ಮೇಘಾ ಜೈಲಿನಲ್ಲಿ ಪತಿಯನ್ನು ಭೇಟಿ ಮಾಡಿ ಬಂದಿದ್ದಾರೆ. ಚೇತನ್ ಆರೋಗ್ಯವಾಗಿದ್ದಾರೆ ಮತ್ತು ಅವರ ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗಿಲ್ಲ ಎಂದಿದ್ದರು. ಇದೀಗ ಚೇತನ್ ಜೈಲಿಗೆ ಹೋಗುವ ಮುನ್ನ ತಾವು ತಗೆದುಕೊಂಡು ಹೋಗಿದ್ದ ಪುಸ್ತಕವನ್ನು ಓದುವುದರಲ್ಲಿ ಹೆಚ್ಚು ಮಗ್ನರಾಗಿದ್ದಾರಂತೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
Advertisement
Advertisement
ಅಂದಹಾಗೆ ಪೊಲೀಸರು ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಚೇತನ್ ಅವರನ್ನು ಕರೆತಂದಾಗ ಅವರ ಕೈಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಬರೆದ Annihilation of cast ಪುಸ್ತಕವಿತ್ತು. ಅದನ್ನು ತಮ್ಮೊಂದಿಗೆ ಜೈಲಿನೊಳಗೆ ತಗೆದುಕೊಂಡು ಹೋಗಿದ್ದಾರೆ ಚೇತನ್. ಸದ್ಯ ಈ ಪುಸ್ತಕವೇ ಚೇತನ್‍ಗೆ ಸಂಗಾತಿ ಆಗಿದೆ.