ಸಾಮಾಜಿಕ ಹೋರಾಟಗಾರ, ನಟ ಚೇತನ್ ಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ರಾಶಿ ರಾಶಿ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿರುವ ಕುರಿತು ಅವರು ಮಾತನಾಡಿದ್ದಾರೆ.
“ಒಂದು ಸಂಘಟನೆ, ಒಂದು ವ್ಯಕ್ತಿಯಂಥ ಹೇಳುವುದು ಕಷ್ಟವಾಗತ್ತೆ. ಅಷ್ಟೊಂದು ಬೆದರಿಕೆಯ ಕರೆಗಳು ಬರುತ್ತಿವೆ. ನನ್ನ ಹತ್ತಿರ ಎಲ್ಲ ದಾಖಲೆಗಳನ್ನೂ ಇಟ್ಟುಕೊಂಡಿದ್ದೇನೆ. ಆಧಾರವಿಲ್ಲದೇ ನಾನು ಯಾವತ್ತೂ ಮಾತನಾಡಿಲ್ಲ. ಸೂಕ್ತ ರೀತಿಯಲ್ಲಿ ಎಲ್ಲದಕ್ಕೂ ಉತ್ತರ ಕೊಡುವೆ’ ಎಂದಿದ್ದಾರೆ ಚೇತನ್. ಇದನ್ನೂ ಓದಿ : ಬಾಲಿವುಡ್ ಪಾಪ ತೊಳೆದ ದಿ ಕಾಶ್ಮೀರ್ ಫೈಲ್ಸ್: ಕಂಗನಾ ರಣಾವತ್
ನ್ಯಾಯಾಧೀಶರ ಬಗ್ಗೆ ಅವಹೇಳನವಾಗಿ ಟ್ವಿಟ್ ಮಾಡಿದ್ದಕ್ಕೆ ಜೈಲಿಗೂ ಹೋಗಿ ಬಂದಿರುವ ಚೇತನ್, ಆ ಸಮಯದಲ್ಲಿ ಸರಕಾರ ಅವರ ಭದ್ರತೆಗಾಗಿ ಕೊಟ್ಟಿದ್ದ ಗನ್ ಮ್ಯಾನ್ ವಾಪಸ್ಸು ಪಡೆದಿತ್ತು. ಈ ಕುರಿತು ಅವರು ಮಾತನಾಡಿದ್ದಾರೆ. ‘ನನಗೆ ಸೂಕ್ತ ಭದ್ರತೆ ಈ ಹೊತ್ತಿನಲ್ಲಿ ಬೇಕಾಗಿದೆ. ಹಾಗಾಗಿ ಪೊಲೀಸ್ ಅಧಿಕಾರಿಗಳ ಜತೆಯೂ ಮಾತನಾಡಿದ್ದೇನೆ. ಕಮಿಷ್ನರ್ ಗೆ ಮನವಿ ಮಾಡಿಕೊಂಡಿದ್ದೇನೆ. ನನಗೆ ಈಗ ಸೂಕ್ತ ಭದ್ರತೆ ಬೇಕಾಗಿದೆ’ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್
ಮೇಲಿಂದ ಮೇಲೆ ಅವರನ್ನು ಗಡಿಪಾರು ಮಾಡುವಂತಹ ವಿಷಯ ಪ್ರಸ್ತಾಪ ಆಗುತ್ತಿದೆ. ಈ ಕುರಿತು ನನಗೇನೂ ಗೊತ್ತಿಲ್ಲ ಎಂದಿರುವ ಚೇತನ್, ಅದು ಕೇವಲ ಗಾಳಿ ಸುದ್ದಿ ಎಂದು ಪ್ರತಿಕ್ರಿಯಿಸಿದ್ದಾರೆ.