‘ಬಿಗ್‌ ಬಾಸ್‌’ ಖ್ಯಾತಿಯ ದಿವ್ಯಾ ಸುರೇಶ್ ಜೊತೆ ಇರುವ ಹುಡುಗ ಯಾರು?

Public TV
1 Min Read
divya suresh

ಕಿರುತೆರೆಯ ತ್ರಿಪುರ ಸುಂದರಿ, ಬಿಗ್ ಬಾಸ್ (Bigg Boss Kannada 10) ಬೆಡಗಿ ದಿವ್ಯಾ ಸುರೇಶ್ (Divya Suresh) ಸದ್ಯ ಪರಭಾಷೆಯ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮ್ಮ ಖಾಸಗಿ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ಸ್ಪೆಷಲ್ ವ್ಯಕ್ತಿಯ ಜೊತೆ ದಿವ್ಯಾ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ದಿವ್ಯಾ ಜೊತೆಯಿರುವ ಆ ಹುಡುಗ ಯಾರು? ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

divya suresh 1

ಕಳೆದ ವರ್ಷ ಸ್ಪೆಷಲ್ ವ್ಯಕ್ತಿಯ ಹುಟ್ಟುಹಬ್ಬದ ದಿನ ‘ಹ್ಯಾಪಿ ಬರ್ತ್‌ಡೇ ಲವ್’ ಎಂದು ದಿವ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಮತ್ತೆ ಅದೇ ವ್ಯಕ್ತಿಯ ಜೊತೆ ನಟಿ ಫೋಟೋ ಶೇರ್ ಮಾಡಿ, ನನಗೆ ಸಿಕ್ಕ ಅತ್ಯುತ್ತಮ ವಿಷಯ ಇದು ಎಂದು ಬರೆದುಕೊಂಡಿದ್ದಾರೆ. ಈ ಯುವಕ ದಿವ್ಯಾ ಅವರ ಬಾಯ್‌ಫ್ರೆಂಡ್ ಇರಬಹುದಾ? ಎಂಬ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಪತ್ನಿ ಜೊತೆ ವರ್ಕೌಟ್ ಮಾಡುತ್ತಿರುವ ನಟ ಸೂರ್ಯ ವಿಡಿಯೋ ವೈರಲ್

ಟಿವಿ ರಿಯಾಲಿಟಿ ಶೋ ಬಿಗ್ ಬಾಸ್‌ನಿಂದ ಗಮನ ಸೆಳೆದ ಸ್ಪರ್ಧಿ ದಿವ್ಯಾ ಸುರೇಶ್‌ಗೆ ಈ ಹಿಂದೆ ರಾಕೇಶ್ ಅಡಿಗ ಜೊತೆ ಎಂಗೇಜ್ ಆಗಿದ್ದರು. ಕಾರಣಾಂತರಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇಬ್ಬರು ತಮ್ಮ ತಮ್ಮ ಲೈಫ್‌ನಲ್ಲಿ ಮೂವ್ ಆನ್ ಆಗಿದ್ದಾರೆ. ಸದ್ಯ ದಿವ್ಯಾ ಕಾಣಿಸಿಕೊಳ್ತಿರುವ ಹುಡುಗನ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನ ನಟಿ ಹಂಚಿಕೊಂಡಿಲ್ಲ. ಸದ್ಯದಲ್ಲೇ ನಟಿಯ ಕಡೆಯಿಂದ ಗುಡ್ ನ್ಯೂಸ್ ಸಿಗುತ್ತಾ? ಕಾದುನೋಡಬೇಕಿದೆ.

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದಿವ್ಯಾ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಈ ಸೀಸನ್‌ನಲ್ಲಿ ಮಂಜು ಪಾವಗಡ ವಿನ್ನರ್ ಆಗಿ ಹೊರಹೊಮ್ಮಿದ್ದರು. ಸದ್ಯ ಡಿಂಗ್ರಿ ನಾಗಾರಾಜ್‌ ಪುತ್ರ ರಾಜ್‌ವರ್ಧನ್‌ ನಟನೆಯ ‘ಹಿರಣ್ಯ’ ಸಿನಿಮಾದಲ್ಲಿ ದಿವ್ಯಾ ನಟಿಸಿದ್ದರು.

Share This Article