– ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರ ವಿರುದ್ಧ ಕೋಪ
– ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿರುದ್ಧ ಕಿಡಿ
– ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡಲಿ
ಬೆಂಗಳೂರು: ಪ್ರತಿ ಬಾರಿಯೂ ಮಾಧ್ಯಮಗಳ ವಿರುದ್ಧ ಕಿಡಿಕಾರುತ್ತಿದ್ದ ಮುಖ್ಯಮಂತ್ರಿಗಳು ಇಂದು ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ವಿರುದ್ಧ ತನ್ನ ಕೋಪ ಹೊರ ಹಾಕುವ ಮೂಲಕ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ಗ್ರಾಮ ವಾಸ್ತವ್ಯ ಮಾಡಲು ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಗರಂ ಆಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ನಾಯಕರು ಸಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ನೀವಾ ಅಥವಾ ಮೋದಿಯೇ? ರಾಜ್ಯದ ಸಮಸ್ಯೆಯನ್ನು ನಿಮ್ಮ ಬಳಿ ಹೇಳಿಕೊಳ್ಳುವಂತಿಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Advertisement
Advertisement
ನಡೆದಿದ್ದು ಏನು?
ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಪ್ರತಿಭಟನಾನಿರತರ ಮೇಲೆ ಗರಂ ಆದ ಪ್ರಸಂಗ ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ಅಷ್ಟೇ ಅಲ್ಲ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.
Advertisement
Advertisement
ನಂತರ ಸಿಎಂ ತಮ್ಮ ಸಿಟ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೇಲೆ ಹೊರ ಹಾಕಿದರು. ಗರಂ ಆಗಿದ್ದ ಸಿಎಂ ಅವರನ್ನು ನಾಡಗೌಡ ಅವರು ಸಮಾಧಾನಪಡಿಸಿ, ಯಾವನ್ರೀ ಅವನು ಎಸ್ಪಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು.
ಬಿಜೆಪಿ ನಾಯಕರಿಂದ ಟೀಕೆ
ಸಿಎಂ ಗೌರಯುತವಾಗಿ ನಡೆದುಕೊಳ್ಳಲಿ. ಸಿಎಂ ಅಅವರ ಮಾತನ್ನು ಖಂಡಿಸುತ್ತೇನೆ. ಅವರದ್ದೇ ಆದ ಭಾಷೆಯಲ್ಲಿ ಇದಕ್ಕೆ ಪ್ರತ್ಯುತ್ತರ ಕೊಡಲು ಸಿದ್ಧರಿದ್ದೇವೆ. ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಿಲ್ಲ. ಜನ ಕೊಟ್ಟಿರುವ ತೆರಿಗೆಯಿಂದ ಅಭಿವೃದ್ಧಿ ಮಾಡುವುದು ಹೊರತು ಸಿಎಂ ಅವರ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡೋದು ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜೀನಾಮೆ ನೀಡಲಿ: ಸಿಎಂ ಹೇಳಿಕೆಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಹೋರಾಟಗಾರರು ನಿಮ್ಮ ತಂದೆಯ ಆಸ್ತಿ ಕೇಳಿಲ್ಲ. ರಾಜ್ಯದ ಮುಖ್ಯಮಂತ್ರಿ ಆಗಲು ನಿಮಗೆ ಯೋಗ್ಯತೆ ಇಲ್ಲ. ನೀವು ಜೆಡಿಎಸ್ ಮುಖ್ಯಮಂತ್ರಿ ಆದರೆ ರಾಜ್ಯಪಾಲರು ಅವರಿಗೆ ನೀಡುತ್ತಿರುವ ಸೌಲಭ್ಯಗಳನ್ನು ವಾಪಸ್ ಪಡೆಯಲಿ. ನಿಮ್ಮ ಮಾತು ಅಸಂವಿಧಾನಿಕ ಮಾತು. ಸಿಎಂ ಜನರನ್ನ ಕೆರಳಿಸುವ ಮಾತುಗಳನ್ನಾಡಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಹತಾಶರಾಗಿ ವರ್ತನೆ ಮಾಡುತ್ತಿದ್ದಾರೆ. ನಿಮ್ಮ ಹತಾಶೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಆರೋಗ್ಯ, ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ದೇವೇಗೌಡರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ರಾಜ್ಯದ ಜನರ ಹಿತ ಸಿಎಂ ಕಾಪಾಡಲಿ ಎಂದು ರವಿ ಸಲಹೆ ನೀಡಿದರು.
ಸಿಎಂ ಇಂದು ಸಣ್ಣತನದ ಮಾತು ಆಡಿದ್ದಾರೆ. ಶಿವನಗೌಡರು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆಯೂ ಏಕವಚನದಲ್ಲಿ ಮಾತಾಡಿದ್ದಾರೆ. ನೀವು ರಾಜ್ಯದ ಮುಖ್ಯಮಂತ್ರಿಯೋ, ಜೆಡಿಎಸ್ ಮುಖ್ಯಮಂತ್ರಿಯೋ. ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ರಾ ಅಥವಾ ಜೆಡಿಎಸ್ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ರಾ ಎಂದು ಪ್ರಶ್ನಿಸುವ ಮೂಲಕ ಸಿಟಿ ರವಿ ಅವರು ಕಿಡಿಕಾರಿದರು.
ಮುಖ್ಯಮಂತ್ರಿ @hd_kumaraswamyರವರ ಗ್ರಾಮ ವಾಸ್ತವ್ಯದ ನಾಟಕ ಮತ್ತೊಮ್ಮೆ ಬಯಲಾಗಿದೆ. ಸಮಸ್ಯೆ ಬಗೆಹರಿಸಲೆಂದು ಕೋರಿದ ಸಾರ್ವಜನಿಕರನ್ನು ಮೋದಿಜೀ (ಬಿಜೆಪಿ) ಪಕ್ಷಕ್ಕೆ ಮತಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಲಾಠಿ ಚಾರ್ಜ್ ಮಾಡಿಸುವುದಾಗಿ ಬೆದರಿಸಿ ದೌರ್ಜನ್ಯವೆಸಗಿದ್ದಾರೆ. ಇವರ ನಕಲಿ ಜನಪರ ಕಾಳಜಿ ಇಲ್ಲಿ ಬಯಲಾಗಿದೆ. pic.twitter.com/KjKB9P5ONU
— R. Ashoka (ಆರ್. ಅಶೋಕ) (@RAshokaBJP) June 26, 2019
ನಕಲಿ ಜನಪರ ಕಾಳಜಿ: ಈ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಆರ್ ಆಶೋಕ್ ಕೂಡ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರ್. ಅಶೋಕ್, ಜನರಿಗೆ ಬೈಯುವ ಮೂಲಕ ಮುಖ್ಯಮಂತ್ರಿಗಳ ನಕಲಿ ಜನಪರ ಕಾಳಜಿ ಇಂದು ಬಯಲಾಗಿದೆ ಎಂದು ಬರೆದುಕೊಂಡಿದ್ದಾರೆ. `ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯದ ನಾಟಕ ಮತ್ತೊಮ್ಮೆ ಬಯಲಾಗಿದೆ. ಸಮಸ್ಯೆ ಬಗೆಹರಿಸಲೆಂದು ಕೋರಿದ ಸಾರ್ವಜನಿಕರನ್ನು ಮೋದಿಜೀ (ಬಿಜೆಪಿ) ಪಕ್ಷಕ್ಕೆ ಮತಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಲಾಠಿ ಚಾರ್ಜ್ ಮಾಡಿಸುವುದಾಗಿ ಬೆದರಿಸಿ ದೌರ್ಜನ್ಯವೆಸಗಿದ್ದಾರೆ. ಇವರ ನಕಲಿ ಜನಪರ ಕಾಳಜಿ ಇಲ್ಲಿ ಬಯಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ನೀವೇನು ಸರ್ವಾಧಿಕಾರಿಯೇ: ಶಿವಮೊಗ್ಗದಲ್ಲಿ ಪ್ರತಿಯಿಸಿರುವ ಕೆ.ಎಸ್ ಈಶ್ವರಪ್ಪ, ಕರ್ನಾಟಕ ರಾಜ್ಯದ ಕಾಂಗ್ರೆಸ್- ಜೆಡಿಎಸ್ ನಾಯಕರು ತಲೆ ಕೆಟ್ಟವರಂತೆ ಮಾತನಾಡುತ್ತಿದ್ದಾರೆ. ಸಿಎಂ, ಡಿಸಿಎಂ ಹೇಳಿಕೆಗಳ ನೋಡಿದ್ರೆ ಇವರನ್ನು ತಲೆಕೆಟ್ಟವರು ಎಂದೇ ಹೇಳಬೇಕಾಗಿದೆ. ಮುಖ್ಯಮಂತ್ರಿ ಆಗಿರೋದಕ್ಕೆ ಜನ ಸಮಸ್ಯೆ ಹೇಳಿಕೊಳ್ಳಲು ಬರುತ್ತಾರೆ. ರಸ್ತೆ ಮೇಲೆ ಹೋಗೋ ದಾಸಯ್ಯನಿಗೆ ಕೇಳುತ್ತಿಲ್ಲ ಅನ್ನೋದನ್ನ ಸಿಎಂ ಅರಿತುಕೊಳ್ಳಬೇಕು. ಇದು ಸೊಕ್ಕಿನ, ದುರಹಂಕಾರದ ಮಾತಾಗಿದೆ. ಪ್ರಜಾಪ್ರಭುತ್ವ ಹಾಗೂ ಮತದಾರರಿಗೆ ಮಾಡಿದ ಅವಮಾನವಾಗಿದೆ. ಲಾಠಿ ಚಾರ್ಜ್ ಮಾಡುತ್ತೇನೆ ಎಂದಿದ್ದೀರಿ, ನೀವೇನು ಸರ್ವಾಧಿಕಾರಿಯೇ? ಅಘೋಷಿತ ತುರ್ತು ಪರಿಸ್ಥಿತಿ ತರಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ತಾವು, ಅನುಭವಿ ರಾಜಕಾರಣಿಯಾಗಿ, ಮಾಜಿ ಪ್ರಧಾನಿಯ ಪುತ್ರನಾಗಿ ಹೀಗೆ ಹೇಳುವುದು ನಿಮ್ಮ ಯೋಗ್ಯತೆಯ ಬಗ್ಗೆ ಸಂಶಯ ಮೂಡುತ್ತದೆ !!!!!
— Bharatish@Valale.???? (@bharatish4) June 26, 2019
ನಿಮ್ಮ ಸ್ಥಾನಕ್ಕೆ ಗೌರವ ತರುವ ಕೆಲಸ ಮಾಡಿ, ಅಡಿದ ಮಾತಿಗಾಗಿ ಮತದಾರರ ಕ್ಷಮೆ ಕೇಳಿ. ನಿಮ್ಮ ಮಗ ನಿಖಿಲ್ ಸೋತಿದ್ದಕ್ಕೆ ಸಿಟ್ಟು ಬಂದಿದೆಯೋ ಅಥವಾ ಪ್ರಜ್ವಲ್ ಗೆದ್ದಿದ್ದಕ್ಕೆ ಸಿಟ್ಟು ಬಂದಿದೆಯೋ ಎಂದು ಮರು ಪ್ರಶ್ನೆ ಮಾಡಿರುವ ಈಶ್ವರಪ್ಪ ಅವರು, ನಿಮ್ಮ ಈ ಸಿಟ್ಟನ್ನು ಮೋದಿ ಅವರ ಮೇಲೆ ತೀರಿಸಿಕೊಳ್ಳಬೇಡಿ. ಪ್ರಜಾಪ್ರಭುತ್ವಕ್ಕೆ ಗೌರವ ನೀಡಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಹೋಗಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂಗೆ ‘ಪಬ್ಲಿಕ್’ ಪ್ರಶ್ನೆಗಳೇನು?:
ಪ್ರಶ್ನೆ 1– ನಿಮಗೆ ವೋಟು ಹಾಕದಿದ್ದರೆ ಸಮಸ್ಯೆ ಹೇಳೋ ಹಾಗೆನೇ ಇಲ್ವಾ?
ಪ್ರಶ್ನೆ 2– ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ?
ಪ್ರಶ್ನೆ 3– ನೀವು ಕರ್ನಾಟಕದ ಮುಖ್ಯಮಂತ್ರಿನಾ ಅಥವಾ ಜೆಡಿಎಸ್ ಮುಖ್ಯಮಂತ್ರಿನಾ?
ಪ್ರಶ್ನೆ 4– ಜನರು ನಿಮ್ಮತ್ರ ಬರೋ ಹಾಗೇ ಇಲ್ವಾ?
ಪ್ರಶ್ನೆ 5– ಕಷ್ಟ ಹೇಳೋದು ಜನರ ಹಕ್ಕು; ಬಗೆಹರಿಸೋದು ನಿಮ್ಮ ಕರ್ತವ್ಯ
ಪ್ರಶ್ನೆ 6– ಸಮಸ್ಯೆ ಹೇಳಿದ್ರೆ ಲಾಠಿಚಾರ್ಜ್ ಮಾಡಿಸ್ತೀರಾ?
ಪ್ರಶ್ನೆ 7– ಮೋದಿಗೆ ವೋಟ್ ಹಾಕಿದ್ರೆ ನಿಮ್ಮ ಬಳಿ ಸಮಸ್ಯೆ ಹೇಳೋ ಆಗಿಲ್ವಾ?
ನರೇಂದ್ರ ಮೋದಿ ಬಗೆಹರಿಸುವ ಸಮಸ್ಯೆಗಳನ್ನು ನರೇಂದ್ರ ಮೋದಿಗೆ ಕೇಳುತ್ತೇವೆ.
ನಿಮ್ಮನ್ನ ಸಿ.ಎಮ್ ಎಂದು ನಾವ್ಯಾರೂ ಸೆಲೆಕ್ಟೇ ಮಾಡಿಲ್ಲ. ಯಾಕೆ ಸಿ.ಎಮ್ ಆದ್ರಿ? ಈಗ ಸಮಸ್ಯೆ ಬಗೆಹರಿಸಿ, ಇಲ್ಲವೇ, ರಾಜೀನಾಮೆ ನೀಡಿ ಮನೆಗೆ ಹೋಗಿ.
— jayasimha (@BlrJayasimha) June 26, 2019