ಮೈಸೂರು: ಯ್ಯಾವನ್ರೀ ಅವ್ನು ಸಿಎಂ. ಪ್ರಧಾನಿ ಅವರನ್ನು ಪ್ರಶ್ನೆ ಮಾಡಲು ಅವನಿಗೆ ಏನು ಯೋಗ್ಯತೆ ಇದೆ. ಸೋಲಿನ ಭಯದಿಂದ ಚಾಮುಂಡೇಶ್ವರಿ ಮತಕ್ಷೇತ್ರದಿಂದ ಬದಾಮಿಗೆ ಹೋಗಿದ್ದಾನೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಒಡೆದ ಮನೆಯಾಗಿದೆ. ನೀವು, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮೂವರು ಸೇರಿ ಪ್ರವಾಸ ಮಾಡಿ ನೋಡೊಣಾ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಒಬ್ಬಂಟಿಯಾಗಿ ಅಲೆದಾಡುತ್ತಿದ್ದಾನೆ ಎಂದು ಏಕವಚನದಲ್ಲಿಯೇ ತರಾಟೆಗೆ ತಗೆದುಕೊಂಡರು.
Advertisement
ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರಕ್ಕಾಗಿ ರಾಜ್ಯ ಭೇಟಿ ನೀಡುವುದು ಸಂತೋಷವೆ. ಅವರು ಹುಚ್ಚುಹುಚ್ಚಾಗಿ ಮಾತನಾಡುವುರರಿಂದ ನಮ್ಮ ಗೆಲುವು ಸುಲಭವಾಗುತ್ತದೆ. ಅವರು ಈ ಹಿಂದೆ ಪ್ರವಾಸ ಕೈಗೊಂಡು ಪ್ರಚಾರ ಮಾಡಿದ ಯಾವುದೇ ರಾಜ್ಯದಲ್ಲಿಯೂ ಗೆಲುವು ಸಾಧಿಸಲು ಆಗಲಿಲ್ಲ. ಆದ್ದರಿಂದ ಇದು ರಾಜ್ಯದಲ್ಲಿಯೂ ಮರುಕಳಿಸಲಿದೆ. ಅವರು ಕರ್ನಾಟಕಕ್ಕೆ ಬಂದು ಪ್ರಚಾರ ಮಾಡಿದರೂ ರಾಜ್ಯವು ಕಾಂಗ್ರೆಸ್ ಮುಕ್ತವಾಗುವುದು ಖಂಡಿತ ಎಂದು ಹೇಳಿದರು.
Advertisement
ವಿಶೇಷ ಕಾರಣದಿಂದಾಗಿ ವರುಣಾ ಕ್ಷೇತ್ರದಿಂದ ಪುತ್ರ ವಿಜೇಂದ್ರ ಸ್ಪರ್ಧೆ ಮಾಡುತ್ತಿಲ್ಲ. ಆದರೆ, ಮತದಾರರು ಬಿಜೆಪಿಗೆ ಬೆಂಬಲ ನೀಡಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ನಾನು ಮುಖ್ಯಮಂತ್ರಿಯಾಗಿ ಮೇ 18 ರಂದು ಪ್ರಮಾಣ ವಚನ ಸ್ವೀಕರಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.