ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik), ಪಾಕ್ ನಟಿ ಸನಾ ಜಾವೇದ್ ಅವರನ್ನ ವಿವಾಹವಾಗಿದ್ದಾರೆ. ಈ ಕುರಿತ ಫೋಟೋಗಳನ್ನು ಸ್ವತಃ ಶೋಯೆಬ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಪಾಕ್ ನಟಿ ಸನಾ ಜಾವೇದ್ (Sana Javed) ಯಾರು ಎಂಬ ಚರ್ಚೆ ಹುಟ್ಟಿಕೊಂಡಿದೆ. ಈ ಕುರಿತು ತಿಳಿಯಬೇಕಾದ್ರೆ ಮುಂದೆ ಓದಿ…
Advertisement
ಸನಾ ಜಾವೇದ್ ಬಗ್ಗೆ ನಿಮಗೆ ಗೊತ್ತಾ?
ಸನಾ ಜಾವೇದ್ 1993ರ ಮಾರ್ಚ್ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಜನಿಸಿದರು. 2012ರಲ್ಲಿ ತೆರೆಕಂಡಿದ್ದ ʻಶೆಹರ್-ಎ-ಝಾತ್ʼ ಹಾಸ್ಯ ಟಿವಿ ಕಾರ್ಯಕ್ರಮದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರದಲ್ಲಿ ʻಖಾನಿʼ ರೊಮ್ಯಾಂಟಿಕ್ ವೆಬ್‌ಸಿರೀಸ್‌ನಲ್ಲಿ ಕಾಣಿಸಿಕೊಂಡರು. ಈ ಬೆನ್ನಲ್ಲೇ ರುಸ್ವಾಯಿ, ಡಂಕ್‌ನಂತಹ ಸೀರಿಯಲ್‌ಗಳಲ್ಲೂ ಗುರುತಿಸಿಕೊಂಡು ಫೇಮಸ್ ಆದ್ರು. ʻಖಾನಿʼ (Khaani) ಸೀರಿಯಲ್‌ನಲ್ಲಿ ತೋರಿದ ಉತ್ತಮ ಅಭಿನಯಕ್ಕಾಗಿ ʻಲಕ್ಸ್ ಸ್ಟೈಲ್ ಅವಾರ್ಡ್ಸ್ʼಪ್ರಶಸ್ತಿ ಪಡೆಯುವಲ್ಲಿಯೂ ಸನಾ ಜಾವೇದ್ ಯಶಸ್ವಿಯಾದರು. ಇದನ್ನೂ ಓದಿ: ಡಿವೋರ್ಸ್ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್ ಮಲಿಕ್ – ನಟಿ ಸನಾ ಜಾವೇದ್ ಕೈಹಿಡಿದ ಪಾಕ್ ಕ್ರಿಕೆಟಿಗ!
Advertisement
Advertisement
ನಟಿಯಾಗಿದ್ದ ಜಾವೇದ್ 2020ರಲ್ಲಿ ಗೀತರಚನಕಾರ ಹಾಗೂ ಸಂಗೀತ ನಿರ್ಮಾಪಕರೂ ಆಗಿದ್ದ ಉಮರ್ ಜಸ್ವಾಲ್ ಅವರೊಂದಿಗೆ 2020ರಲ್ಲಿ ವಿವಾಹವಾಗಿದ್ದರು. ಆದ್ರೆ 2023ರಲ್ಲಿ ಅವರಿಂದ ವಿಚ್ಛೇದನ ಪಡೆದರು. ವಿಚ್ಛೇದನ ಪಡೆದ ಬಳಿಕ ಸನಾ ಹಾಗೂ ಉಮರ್ ಇಬ್ಬರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದ ಇಬ್ಬರಿಗೂ ಸಂಬಂಧಿಸಿದ ಎಲ್ಲ ಚಿತ್ರಗಳನ್ನ ಡಿಲೀಟ್ ಮಾಡಿದರು. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ
Advertisement
ಸನಾ ವಿಚ್ಛೇದನ ಪಡೆದ ಬಳಿಕ 2023ರಲ್ಲಿ ಶೋಯೆಬ್ ಮಲಿಕ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹುಟ್ಟಿಕೊಂಡಿತ್ತು. ಇದೀಗ ವದಂತಿಗಳಿಗೆಲ್ಲಾ ತೆರೆ ಎಳೆದಿದ್ದಾರೆ. ಶೋಯೆಬ್ ಮಲಿಕ್ ಅವರನ್ನು ಮದುವೆಯಾದ ನಂತರ ಸನಾ ಜೇವದ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನ ಸನಾ ಶೋಯೆಬ್ ಮಲಿಕ್ ಎಂದೂ ಬದಲಾಯಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಮಮಂದಿರ ಪ್ರಸಾದ ಅಂತಾ ಸ್ವೀಟ್ ಮಾರಾಟ – ಆನ್‌ಲೈನ್ ಶಾಪಿಂಗ್ ಸಂಸ್ಥೆಗೆ ನೋಟಿಸ್