ತನ್ನ ಪತಿ ನರೇಶ್ ಅವರು ನಟಿ ಪವಿತ್ರಾ ಲೋಕೇಶ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಮೊನ್ನೆಯಷ್ಟೇ ರಮ್ಯಾ ಆರೋಪ ಮಾಡಿದ್ದರು. ಈ ಕಾರಣದಿಂದಾಗಿಯೇ ನನಗೆ ನರೇಶ್ ಅವರು ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತಾಗಿ ನಟಿ ಪವಿತ್ರಾ ಲೋಕೇಶ್ ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ನರೇಶ್ ಮತ್ತು ತಮ್ಮ ನಡುವಿನ ಬಾಂಧವ್ಯದ ಕುರಿತು ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ.
ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ಅಷ್ಟಕ್ಕೂ ರಮ್ಯಾ ಅವರು ನನ್ನ ಬಗ್ಗೆ ಮಾತನಾಡಲು ಯಾರು? ತನ್ನ ಕುಟುಂಬದ ಬಗ್ಗೆ ಏನಾದರೂ ಹೇಳಿಕೊಳ್ಳಲಿ. ಅದರಲ್ಲಿ ನನ್ನನ್ನು ಎಳೆತಂದಿರುವುದು ಸರಿಯಲ್ಲ. ಅಷ್ಟಕ್ಕೂ ಅವರು ನನ್ನ ಬಗ್ಗೆ ಮಾತನಾಡಲು ಯಾರು? ನರೇಶ್ ಮತ್ತು ರಮ್ಯಾ ಅವರ ಸಂಬಂಧ ಸರಿ ಇಲ್ಲದೇ ಇದ್ದರೆ, ಅದನ್ನು ಅವರೇ ಬಗೆ ಹರಿಸಿಕೊಳ್ಳಬೇಕು. ನನ್ನನ್ನು ಸುಖಾ ಸುಮ್ಮನೆ ಎಳೆತಂದು, ಅವರು ಪ್ರಚಾರ ಪಡೆಯುತ್ತಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ ನಟಿ ಪವಿತ್ರಾ ಲೋಕೇಶ್. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ
ನರೇಶ್ ಅವರು ವಾಸಿಸುತ್ತಿರುವುದು ಹೈದರಾಬಾದ್ ನಲ್ಲಿ. ನರೇಶ್ ಮತ್ತು ರಮ್ಯಾ ಅವರು ಇದ್ದದ್ದು ಹೈದರಾಬಾದ್ ನಲ್ಲಿ. ಅವರಿಬ್ಬರ ಮಧ್ಯೆ ಏನಾಯಿತು ಅಂತ ನನಗೆ ಗೊತ್ತಿಲ್ಲ. ಗಂಡ ಹೆಂಡತಿ ಜಗಳ ಇದಾಗಿದ್ದರೆ, ಅದನ್ನು ಹೈದರಾಬಾದ್ ನಲ್ಲೇ ಮಾತನಾಡಬೇಕು. ಕರ್ನಾಟಕದಲ್ಲಿ ಕೂತು ಏಕೆ ಮಾತನಾಡುತ್ತಿದ್ದಾರೆ? ಪವಿತ್ರಾ ಲೋಕೇಶ್ ಕನ್ನಡದವಳು ಅಂತನಾ? ಈ ವಿಷಯದಲ್ಲಿ ನಾನು ಬಲಿಪಶು ಆಗುತ್ತಿದ್ದೇನೆ. ನನ್ನ ಹೆಸರು ಬಳಸಿಕೊಂಡು ರಮ್ಯಾ ಪ್ರಚಾರ ಪಡೆಯುತ್ತಿದ್ದಾರೆ ಅಂದಷ್ಟೇ ಹೇಳುತ್ತೇನೆ. ಈ ಪ್ರಕರಣದಿಂದ ನನ್ನ ಕುಟುಂಬಕ್ಕೆ ತುಂಬಾ ನೋವಾಗಿದೆ ಎಂದಿದ್ದಾರೆ ಪವಿತ್ರಾ ಲೋಕೇಶ್.