ಮೈಸೂರು: ರಾಘವೇಂದ್ರ ಯಾರ ಮಗ? ಒಂದು ಬಾರಿ ಸಂಸದ ಆಗಿಲ್ವಾ. ಆತ ಯಡಿಯೂರಪ್ಪನ ಮಗನಾ ಅಥವಾ ಅವರ ಅಮ್ಮನ ಮಗನಾ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ವಂಶ ಪಾರಂಪರ್ಯ ರಾಜಕೀಯ ಮಾಡಲ್ಲ ಎಂಬ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆಗೆ ಟಾಂಗ್ ನೀಡಿದ್ರು. ವರುಣಾದ ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತಾಡೋಕೆ ನಾನು ಬಿಜೆಪಿ ವಕ್ತಾರ ಅಲ್ಲ. ವರುಣಾದಲ್ಲಿ ಯಾವ ಬಿಜೆಪಿ ಅಭ್ಯರ್ಥಿಯನ್ನೂ ನಿಲ್ಲಿಸಿದ್ರು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಮಗನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಯಡಿಯೂರಪ್ಪ ವೀಕ್ ಆಗಿಲ್ಲ. ಯಡಿಯೂರಪ್ಪ ಯಾವಾಗಲೂ ವೀಕ್. ಕಳಂಕಿತ ವ್ಯಕ್ತಿಯಾಗಿರೋ ಅವರಿಗೆ ಸಾರ್ವಜನಿಕ ಮೌಲ್ಯಗಳಿಲ್ಲ. ಹೀಗಾಗಿ ಯಾವಾಗಲೂ ವೀಕ್ ಆಗಿಯೇ ಇದ್ದಾರೆ ಅಂತ ಅವರು ಲೇವಡಿ ಮಾಡಿದ್ರು. ಇದನ್ನೂ ಓದಿ: ಯಡಿಯೂರಪ್ಪನವರೇ ದಯವಿಟ್ಟು ನನಗೆ ಮೋಸ ಮಾಡ್ಬೇಡಿ, ನಿಮ್ಮ ಕಾಲಿಗೆ ಬೇಕಾದರೂ ಬೀಳ್ತೇನೆ- ಬಿಜೆಪಿ ಅಭ್ಯರ್ಥಿ ಮನವಿ
Advertisement
ಚಾಮುಂಡೇಶ್ವರಿ ತಿರಸ್ಕರಿಸಿದ್ದಾಳೆ, ಬನಶಂಕರಿಯೂ ತಿರಸ್ಕರಿಸುತ್ತಾಳೆ ಎಂಬ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ, ಶ್ರೀರಾಮುಲು ಯಾರ್ ರೀ? ಅವರಿಗೆ ನನ್ನ ರಾಜಕೀಯ ಇತಿಹಾಸ ಗೊತ್ತಿಲ್ಲ. ಶ್ರೀರಾಮುಲು ಶಾಸಕನಾಗಿದ್ದೇ 2004ರಲ್ಲಿ. ನಾನು 1983ರಲ್ಲೇ ಚಾಮುಂಡೇಶ್ವರಿಯಲ್ಲಿ ಶಾಸಕನಾಗಿದ್ದೆ. ನನ್ನ ಬಗ್ಗೆ ಅವರೇನು ಮಾತನಾಡುತ್ತಾರೆ. ನಾನು ಸಮೀಕ್ಷೆಗಳನ್ನು ನಂಬಲ್ಲ. ಆದ್ರೆ ಜನ ಸಮೀಕ್ಷೆಯಲ್ಲಿ ನಾನು ಮುಖ್ಯಮಂತ್ರಿಯಾಗಲಿ ಅನ್ನೋದೇ ಜಾಸ್ತಿ ಅಂದ್ರು. ಇದನ್ನೂ ಓದಿ: ಇಂದು ಸಿದ್ದರಾಮಯ್ಯ, ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಕೆ
Advertisement
ನಾನು ಇಂದು ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಮಧ್ಯಾಹ್ನ ಎರಡು ಗಂಟೆ ವೇಳೆಗೆ ನಾಮಪತ್ರ ಸಲ್ಲಿಸುತ್ತೇನೆ. ಅಂಬರೀಶ್ ನಾಮಪತ್ರ ಸಲ್ಲಿಸೋದು ಹೈಕಮಾಂಡ್ ಗೆ ಬಿಟ್ಟಿದ್ದು. ಅದು ನಂಗೆ ಗೊತ್ತಿಲ್ಲ ಅಂತ ಅವರು ಹೇಳಿದ್ರು.