ಬ್ರಿಟನ್ ಲೇಖಕಿ ನಿತಾಶಾ ಕೌಲ್‌ಗೆ ನೋ ಎಂಟ್ರಿ – ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್

Public TV
2 Min Read
Nitasha Kaul

ಬೆಂಗಳೂರು: ಭಾರತ ಮೂಲದ ಬ್ರಿಟನ್ ಪ್ರೊಫೆಸರ್, ಲೇಖಕಿ ನಿತಾಶಾ ಕೌಲ್‌ಗೆ (Nitasha Kaul) ದೇಶ ಪ್ರವೇಶವನ್ನು ಮೋದಿ ಸರ್ಕಾರ (Narendra Modi Government) ನಿರಾಕರಿಸಿದೆ.

ಸಿದ್ದರಾಮಯ್ಯ ಸರ್ಕಾರ (Siddaramaiah Government) ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮ್ಮೇಳನಕ್ಕೆ ನಿತಾಶಾ ಕೌಲ್‌ರನ್ನು ಆಹ್ವಾನಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಅವರು ಲಂಡನ್‌ನಿಂದ ನೇರವಾಗಿ ಬೆಂಗಳೂರಿಗೆ (Bengaluru) ಬಂದಿಳಿದಿದ್ದರು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಅವರನ್ನು ಹೊರಗೆ ಬಿಡಲಿಲ್ಲ.

12 ಗಂಟೆ ವಿಚಾರಣೆ ನಡೆಸಿ, 12 ಗಂಟೆ ವಿಮಾನ ನಿಲ್ದಾಣದಲ್ಲೇ ಕಾಯಿಸಿ ಮತ್ತೆ ಬ್ರಿಟನ್‌ಗೆ ವಾಪಸ್ ಕಳಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಮೌಲ್ಯಗಳ ಬಗ್ಗೆ ಮಾತಾಡಿದ ಕಾರಣಕ್ಕೆ ನನಗೆ ಭಾರತ ಪ್ರವೇಶ ನಿರಾಕರಿಸಲಾಗಿದೆ. ಎಲ್ಲಾ ಸಮರ್ಪಕ ದಾಖಲೆ ಹೊಂದಿದ್ದರೂ ವಿಮಾನ ನಿಲ್ದಾಣದಿಂದ ನನ್ನನ್ನು ವಾಪಸ್ ಕಳುಹಿಸಲಾಯಿತು ಎಂದು ನಿತಾಶಾ ಕೌಲ್ ಆಪಾದಿಸಿದ್ದಾರೆ. ಇದನ್ನೂ ಓದಿ:ಜಾರ್ಖಂಡ್‌ನ ಮಾಜಿ ಸಿಎಂ ಮಧು ಕೋಡ ಪತ್ನಿ, ಕಾಂಗ್ರೆಸ್‌ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

ದೆಹಲಿಯಿಂದ ಆದೇಶ ಬಂದಿದೆ. ನಾವೇನು ಮಾಡಲು ಸಾಧ್ಯವಿಲ್ಲ. ಆರ್‌ಎಸ್‌ಎಸ್ ಬಗ್ಗೆ ತಾನು ಮಾಡಿದ ಟೀಕೆಗಳನ್ನು ಅಧಿಕಾರಿಗಳು ಪರೋಕ್ಷವಾಗಿ ಪ್ರಸ್ತಾಪಿಸಿದ್ರು ಎಂದು ಕೌಲ್ ಹೇಳಿದ್ದಾರೆ.

ಬಿಜೆಪಿ ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ. ಕೌಲ್‌ರನ್ನು ಕಾರ್ಯಕ್ರಮಕ್ಕೆ ಕರೆಸಿದ ಸಿದ್ದರಾಮಯ್ಯ ಸರ್ಕಾರದ ಉದ್ದೇಶವನ್ನು ಬಿಜೆಪಿ ಪ್ರಶ್ನಿಸಿದೆ. ಪಾಕ್ ಪರ ಸಹಾನುಭೂತಿ ಹೊಂದಿರುವವರನ್ನು ಆಹ್ವಾನಿಸುವ ಮೂಲಕ ಕಾಂಗ್ರೆಸ್ ಭಾರತ ಸಂವಿಧಾನವನ್ನು ಅಪಮಾನಿಸಿದೆ ಎಂದು ಬಿಜೆಪಿ ದೂಷಿಸಿದೆ. ಅಷ್ಟೇ ಅಲ್ಲದೇ ನಗರ ನಕ್ಸಲ್ ಎನ್ನುವ ಮೂಲಕ ಕಿಡಿಕಾರಿದೆ.

ಈ ಬೆಳವಣಿಗೆ ನಿಜಕ್ಕೂ ದುರಾದೃಷ್ಟಕರ ಮತ್ತು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡಿದ ಅಪಮಾನ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ. ಇದನ್ನೂ ಓದಿ: ಧ್ರುವ್‌ ರಥೀ ವಿಡಿಯೋ ಪೋಸ್ಟ್‌ ಮಾಡಿ ತಪ್ಪು ಮಾಡಿದ್ದೇನೆ – ಸುಪ್ರೀಂನಲ್ಲಿ ಕೇಜ್ರಿವಾಲ್‌ ತಪ್ಪೊಪ್ಪಿಗೆ

ನಿತಾಶಾ ಕೌಲ್ ಯಾರು?
ಮೂಲತಃ ಕಾಶ್ಮೀರ ಪಂಡಿತರ ಕುಟುಂಬದವರಾಗಿದ್ದು ಲಂಡನ್‌ನ ವೆಸ್ಟ್ ಮಿನಿಸ್ಟರ್ ವಿವಿ ಪ್ರೊಫೆಸರ್ ಆಗಿದ್ದಾರೆ. ಪಾಕ್ ಪರ ಸಹಾನುಭೂತಿ ಹೊಂದಿರುವ ಇವರು ಭಾರತ ಸರ್ಕಾರದ ಪರ ಪಕ್ಷಪಾತ ಧೋರಣೆ ಹೊಂದಿದ್ದಾರೆ. ಕಾಶ್ಮೀರ ಭಾರತದ ಭಾಗವಲ್ಲ ಎಂದಿದ್ದ ಅವರು ಭಾರತ ಆಡಳಿತವಿರುವ ಕಾಶ್ಮೀರ ಎಂದು ಕರೆದಿದ್ದರು. ಮುಸ್ಲಿಮರನ್ನು ಕ್ರೈಸ್ತರನ್ನು ಶತ್ರು ರೀತಿ ನೋಡಲಾಗುತ್ತಿದೆ ಎಂದು ದೂರಿದ್ದರು.

 

Share This Article