ಢಾಕಾ: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ಕಟು ಟೀಕಕಾರರಾಗಿದ್ದ ಮೊಹಮ್ಮದ್ ಯೂನುಸ್ (Muhammad Yunus) ಅವರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮೊಹಮ್ಮದ್ ಯೂನುಸ್ ಅವರನ್ನೇ ಪ್ರಧಾನಿಯನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದ್ದರು. ಮಧ್ಯಂತರ ಸರ್ಕಾರದ ಸಾರಥ್ಯ ವಹಿಸುವ ಹೊಣೆ ನೀಡಿದರೆ ಜವಾಬ್ದಾರಿ ವಹಿಸಲು ನಾನು ಸಿದ್ಧ ಎಂದು ಯೂನುಸ್ ಹೇಳಿಕೆ ನೀಡಿದ್ದರು.
Advertisement
ಮೊಹಮ್ಮದ್ ಯೂನುಸ್ ಅವರಿಗೆ ಬಾಂಗ್ಲಾ ಸೇನೆಯ ಬೆಂಬಲ ನೀಡಿತ್ತು. ಪ್ರತಿಭಟನಾ ನಿರತರು ಮತ್ತು ಸೇನೆಯಿಂದ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಬಾಂಗ್ಲಾದೇಶದ ಅಧ್ಯಕ್ಷ ಶಹಾಬುದ್ದೀನ್ ಮೊಹಮ್ಮದ್ ಯೂನುಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.
Advertisement
Advertisement
ಯಾರು ಈ ಯೂನುಸ್?
ಬಾಂಗ್ಲಾದ ಆರ್ಥಿಕ ತಜ್ಞ 84 ವರ್ಷದ ಮೊಹಮ್ಮದ್ ಯೂನುಸ್ 1983ರಲ್ಲಿ ಬಾಂಗ್ಲಾದಲ್ಲಿ ಬಡತನ ನಿರ್ಮೂಲನೆಗಾಗಿ ಗ್ರಾಮೀಣ ಬ್ಯಾಂಕ್ (Grameen Bank) ಸ್ಥಾಪಿಸಿದ್ದರು. ಸಣ್ಣ ಪ್ರಮಾಣದ ಸಾಲ ನೀಡಿದ್ದರಿಂದ ಬಡವರಿಗೆ ಬಹಳಷ್ಟು ಸಹಾಯವಾಗಿತ್ತು. ಇದನ್ನೂ ಓದಿ: ಬಾಂಗ್ಲಾ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಶಾಂತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಆಯ್ಕೆ
Advertisement
ಗ್ರಾಮೀಣ ಬ್ಯಾಂಕ್ ಸಾಧನೆಗೆ 2006ರಲ್ಲಿ ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತ್ತು. ಈ ಬೆನ್ನಲ್ಲೇ 2007ರಲ್ಲಿ ಹೊಸ ರಾಜಕೀಯ ಪಕ್ಷ ರಚಿಸುವುದಾಗಿ ಯೂನುಸ್ ಘೋಷಣೆ ಮಾಡುತ್ತಾರೆ. ರಾಜ್ಕೀಯ ಪಕ್ಷ ಘೋಷಣೆ ಮಾಡಿದ ನಂತರ ಹಸೀನಾ ಸರ್ಕಾರದ ಜೊತೆ ತಿಕ್ಕಾಟ ಆರಂಭವಾಗುತ್ತದೆ. 2008ರಲ್ಲಿ ಯೂನುಸ್ ವಿರುದ್ಧ ಹಸೀನಾ ಸರ್ಕಾರ ತನಿಖೆಗೆ ಆದೇಶ ನೀಡುತ್ತದೆ.
ಯೂನುಸ್ ಅವರು ಬಲ ಪ್ರಯೋಗ ಮಾಡಿ ಬಡವರಿಂದ ಹಣವನ್ನು ವಸೂಲಿ ಮಾಡುತ್ತಾರೆ ಎಂಬ ಆರೋಪವನ್ನು ಶೇಖ್ ಹಸೀನಾ ಬೆಂಬಲಿಗರು ಮಾಡುತ್ತಾರೆ. ಸರ್ಕಾರದ ಅನುಮತಿ ಲ್ಲದೇ 2013 ರಲ್ಲಿ 2 ದಶಲಕ್ಷ ಡಾಲರ್ ವಂಚನೆ ಮಾಡಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಯೂನುಸ್ ಅವರ ಬಂಧನವಾಗುತ್ತದೆ. ಈ ಪ್ರಕರಣದಲ್ಲಿ ಜೈಲಿನಿಂದ ಜಾಮೀನು ಪಡೆದು ಹೊರ ಬಂದ ಬಳಿಕ ಯೂನುಸ್ ಅವರು ಹಸೀನಾ ವಿರುದ್ಧ ಮತ್ತಷ್ಟು ಟೀಕೆ ಮಾಡುತ್ತಿದ್ದರು.
ಜವಾಬ್ದಾರಿ ಹೊರಲು ಸಿದ್ಧ:
ಹಸೀನಾ ರಾಜೀನಾಮೆ ಮೂಲಕ ಬಾಂಗ್ಲಾಗೆ ಎರಡನೇ ಬಾರಿಗೆ ವಿಮೋಚನೆ ಸಿಕ್ಕಿದೆ ಎಂದು ಯುನುಸ್ ಅವರು ಹರ್ಷ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಪಲಾಯನಕ್ಕೆ ಯತ್ನಿಸಿದ್ದ ಬಾಂಗ್ಲಾ ಮಾಜಿ ವಿದೇಶಾಂಗ ಸಚಿವ ಏರ್‌ಪೋರ್ಟ್‌ನಲ್ಲಿ ಅರೆಸ್ಟ್
ನಾನು ಸರ್ಕಾರದ ಮುಖ್ಯಸ್ಥನಾಗಬೇಕು ಎಂದು ದೇಶದ ಜನರ ಇಚ್ಛೆ ಅದೇ ಆಗಿದ್ದರೆ ಈ ಜವಾಬ್ದಾರಿ ಹೊರಲು ನಾನು ಸಿದ್ಧನಿದ್ದೇನೆ. ಆದರೆ ಮಧ್ಯಂತರ ಸರ್ಕಾರ ಯಾವ ಸಮಸ್ಯೆಗೂ ಪರಿಹಾರ ಆಗಲಾರದು. ಶಾಂತಿಯುತ ಮುಕ್ತ ಚುನಾವಣೆ ನಡೆದರೆ ಮಾತ್ರ ಶಾಶ್ವತ ಶಾಂತಿ ನೀಡಬಲ್ಲದು ಎಂದು ಯೂನುಸ್ ಹೇಳಿದ್ದಾರೆ.