ಮ್ಯಾಂಚೆಸ್ಟರ್: ಶ್ರೀಲಂಕಾ (Sri Lanaka) ವಿರುದ್ಧದ ಟೆಸ್ಟ್ ಪಂದ್ಯದಲ್ಲಿ (Test Match) ಭಾರತದ (Team India) ಮಾಜಿ ಕ್ರಿಕೆಟಿಗ ರುದ್ರ ಪ್ರತಾಪ್ ಸಿಂಗ್ (Rudra Pratap Singh) ಅವರ ಮಗ ಹ್ಯಾರಿ ಸಿಂಗ್ (Harry Singh) ಇಂಗ್ಲೆಂಡ್ ತಂಡದ ಪರವಾಗಿ ಕಣಕ್ಕೆ ಇಳಿದಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹ್ಯಾರಿ ಬ್ರುಕ್ ಅವರು 37ನೇ ಓವರ್‌ನಲ್ಲಿ ತಾತ್ಕಾಲಿಕವಾಗಿ ಆಟದ ಹೊರಗುಳಿದ ಪರಿಣಾಮವಾಗಿ ಅವರ ಬದಲಿಯಾಗಿ 20 ವರ್ಷದ ಹ್ಯಾರಿ ಸಿಂಗ್ ಕೆಲ ಕಾಲ ಮೈದಾನಕ್ಕೆ ಇಳಿದಿದ್ದರು. ಇದನ್ನೂ ಓದಿ: ಡೈಮಂಡ್ ಲೀಗ್ – ಎರಡನೇ ಸ್ಥಾನ ಪಡೆದ ನೀರಜ್ ಚೋಪ್ರಾ
Advertisement
Advertisement
ಯಾರು ಹ್ಯಾರಿ ಸಿಂಗ್?
ಹ್ಯಾರಿ ಸಿಂಗ್ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ರುದ್ರಪ್ರತಾಪ್ ಸಿಂಗ್ ಅವರ ಪುತ್ರರಾಗಿದ್ದಾರೆ. ಆದರೆ 2007ರ ಟಿ20 ಕ್ರಿಕೆಟ್ ತಂಡದ ಸದಸ್ಯ ರುದ್ರ ಪ್ರತಾಪ್ ಸಿಂಗ್ ಅಲ್ಲ. ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಆರ್‌ಪಿ ಸಿಂಗ್ 1986 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಏಕದಿನ ಪಂದ್ಯವಾಡಿದ್ದರು. ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿದ ಬಳಿಕ ಆರ್‌ಪಿಸಿಂಗ್ ಇಂಗ್ಲೆಂಡ್‌ನಲ್ಲಿ ನೆಲೆಸಿದರು.
Advertisement
ಹ್ಯಾರಿ ಸಿಂಗ್ ಜೂನ್ 16, 2004ರಲ್ಲಿ ಇಂಗ್ಲೆಂಡಿನ ಬ್ಲ್ಯಾಕ್‌ಬರ್ನ್‌ನಲ್ಲಿ ಜನಿಸಿದ್ದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನಲ್ಲಿ ತರಬೇತಿ ಪಡೆದಿದ್ದಾರೆ. ಇಂಗ್ಲೆಂಡಿನ ಅಂಡರ್ 19 ತಂಡದ ಸದಸ್ಯರಾಗಿದ್ದ ಇವರು 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿದು 67 ರನ್ ಹೊಡೆದಿದ್ದರು.
Advertisement
ನಾನು 4 ವರ್ಷದಿಂದ ಕ್ರಿಕೆಟ್ ಆಡುತ್ತಿದ್ದೇನೆ. 15ನೇ ವರ್ಷದಿಂದ ಆಕಾಡೆಮಿಯಲ್ಲಿ ಆಡಲು ಶುರು ಮಾಡಿದ್ದೇನೆ. ಇಲ್ಲಿವರೆಗೆ ಬರಲು ದೀರ್ಘ ಪ್ರಯಾಣ ನಡೆಸಿದ್ದೇನೆ ಎಂದು ಹ್ಯಾರಿ ಸಿಂಗ್ ಹೇಳಿದ್ದಾರೆ.