ಭೂಪೇಂದ್ರ ಪಟೇಲ್ ಯಾರು? ಹಿನ್ನೆಲೆ ಏನು?

Public TV
2 Min Read
Bhupendra Patel

ಗಾಂಧಿನಗರ: ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಅಂತಿಮಗೊಳಿಸಲಾಯಿತು.

ಭೂಪೇಂದ್ರ ಪಾಟೀಲ್ ಯಾರು?
59 ವರ್ಷದ ಭೂಪೇಂದ್ರ ಪಟೇಲ್ ಪಾಟೀದಾರ್ ಸಮುದಾಯಕ್ಕೆ ಸೇರಿರುವರಾಗಿದ್ದಾರೆ. ಅಹಮದಾಬಾದ್‍ನ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ವ್ಯಾಸಂಗ ಮಾಡಿರುವ ಪಟೇಲ್ ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಇದನ್ನೂ ಓದಿ:  ಮೋದಿ ಆಪ್ತ ಭೂಪೇಂದ್ರ ಪಟೇಲ್ ಗುಜರಾತಿನ ಮುಂದಿನ ಸಿಎಂ

bhupendra patel gujarat chief minister

ಗುಜರಾತ್‍ನ ಮಾಜಿ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರ ಆಪ್ತರಾಗಿದ್ದಾರೆ. ಘಾಟ್‍ಲೋಡಿಯಾ ಕ್ಷೇತ್ರದಿಂದ 2017ರಲ್ಲಿ ಮೊದಲ ಸಾರಿ ಶಾಸಕರಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರವನ್ನು ಆನಂದಿ ಬೆನ್ ಪಟೇಲ್ ಪ್ರತಿನಿಧಿಸಿದ್ದರು. ಇದನ್ನೂ ಓದಿ:  ಗಣೇಶ ಹಬ್ಬದ ಸಂಭ್ರಮದಲ್ಲಿ ಕುಚುಕು ಗೆಳೆಯರು

ಕಳೆದ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಶಶಿಕಾಂತ್ ಪಟೇಲ್ ವಿರುದ್ಧ ಸ್ಪರ್ಧಿಸಿದ್ದ ಭೂಪೇಂದ್ರ ಪಟೇಲ್ 1 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದರು. ಭೂಪೇಂದ್ರ ಪಟೇಲ್ ಅವರು ಈ ಹಿಂದೆ ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2017ರ ವಿಧಾನಸಭೆ ಚುನಾವಣೆ ಸಮಯದಲ್ಲಿ 5 ಕೋಟಿಗೂ ಅಧಿಕ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಗುಜರಾತಿನಲ್ಲಿ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯೊಂದರಲ್ಲಿ ಭೂಪೇಂದ್ರ ಪಟೇಲ್ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯು 15 ತಿಂಗಳು ಬಾಕಿ ಇರುವಂತೆ ಬಿಜೆಪಿ ತೆಗೆದುಕೊಂಡಿರುವ ನಿರ್ಧಾರ ಸಾಕಷ್ಟು ಕುತೂಹಲ ಕೆರಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *