– ತಮಿಳುನಾಡಿನ ಸಂಸದರೊಬ್ಬರ ಪಾತ್ರದ ವದಂತಿ ಬಗ್ಗೆಯೂ ಸುದೀರ್ಘ ಪೋಸ್ಟ್‌ನಲ್ಲಿ ಉಲ್ಲೇಖ
ಚೆನ್ನೈ: ಧರ್ಮಸ್ಥಳ (Dharmasthala Case) ಮಾಸ್ಕ್ ಮ್ಯಾನ್ ಹಿಂದಿರುವವರು ಯಾರು ಎನ್ನುವುದು ಗೊತ್ತಾಗಬೇಕು ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ (Annamalai) ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅಣ್ಣಾಮಲೈ, ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಆರೋಪ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಆಧಾರರಹಿತ ಆರೋಪಗಳಿಗೆ ಕಾನೂನುಬದ್ಧತೆ ನೀಡುತ್ತಿದೆ ಆರೋಪಿಸಿದ್ದಾರೆ. ಇದನ್ನೂ ಓದಿ: ʻಬುರುಡೆ ಚಿನ್ನಯ್ಯʼನ ಬಂಡವಾಳ ಬಯಲು – ಮುಸುಕುಧಾರಿಯ ಮುಖವಾಡ ಕಳಚಿದ್ದು ಹೇಗೆ?
ಪೋಸ್ಟ್‌ನಲ್ಲೇನಿದೆ?
ಸನಾತನ ಧರ್ಮದ ಸ್ತಂಭಗಳಲ್ಲಿ ಒಂದಾದ ಧರ್ಮಸ್ಥಳ ದೇವಾಲಯವನ್ನು ಅವಹೇಳನ ಮಾಡುವ ಏಕೈಕ ಉದ್ದೇಶದಿಂದ, ಮಾಸ್ಕ್ ಮ್ಯಾನ್ ಒಂದು ತಿಂಗಳಿಗೂ ಹೆಚ್ಚು ಕಾಲ ಕರ್ನಾಟಕ ರಾಜ್ಯದ ಸಂಪೂರ್ಣ ಸರ್ಕಾರಿ ಯಂತ್ರವನ್ನು ಹಗುರವಾಗಿ ಪರಿಗಣಿಸಿದ್ದಾನೆ ಎಂಬುದು ಅತ್ಯಂತ ಬೇಸರದ ಸಂಗತಿ. ಇದು ಕೇವಲ ಒಬ್ಬ ವ್ಯಕ್ತಿ ಮಾಡಿದ ಕೃತ್ಯವಲ್ಲ, ಬದಲಾಗಿ ಇನ್ನೂ ಬಹಿರಂಗಪಡಿಸದ ದೊಡ್ಡ ಪಿತೂರಿಯಾಗಿದೆ.
ಸಾಕಷ್ಟು ಪುರಾವೆಗಳಿಲ್ಲದೆ ವಿಶೇಷ ತನಿಖಾ ತಂಡ (SIT) ರಚಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಪ್ರಶ್ನಾರ್ಹ. ಇದು ಮೂರ್ಖತನದ ಕ್ರಮ. ಚಿನ್ನಯ್ಯ ಎಂಬಾತನ ಹೇಳಿಕೆಗಳಿಗೆ ವಿಶ್ವಾಸಾರ್ಹತೆ ನೀಡಲು ಸರ್ಕಾರ ಹತಾಶವಾಗಿದೆ. ಪ್ರಾಥಮಿಕ ಪುರಾವೆಗಳಿಲ್ಲದೆ ಮಾಸ್ಕ್ ಮ್ಯಾನ್‌ನ ಆಧಾರರಹಿತ ಆರೋಪಗಳಿಗೆ ಕಾನೂನುಬದ್ಧತೆಯನ್ನು ನೀಡಿರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೂರ್ಖತನವಾಗಿದೆ. ಹತಾಶೆಯಲ್ಲಿ, ಅದು SIT ಅನ್ನು ರಚಿಸಿತು. 13 ಸ್ಥಳಗಳಲ್ಲಿ ಉತ್ಖನನಕ್ಕೆ ಆದೇಶಿಸಿತು. ಇದನ್ನೂ ಓದಿ: ಧರ್ಮ ವಿಜಯ – ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್
It is extremely disturbing to note that one masked man took the entire government machinery of the Karnataka State for granted for over a month, with the sole aim of denigrating one of the Pillars of Sanatana Dharma, the Dharmasthala Temple. This is not just one man’s doing but a…
— K.Annamalai (@annamalai_k) August 23, 2025
13 ಸ್ಥಳಗಳಲ್ಲಿನ ಉತ್ಖನನಗಳು ಯಾವುದೇ ಮಹತ್ವದ ಆವಿಷ್ಕಾರಗಳನ್ನು ನೀಡಲು ವಿಫಲವಾಗಿವೆ. ಎರಡು ಸ್ಥಳಗಳಲ್ಲಿ ಕಂಡುಬಂದ ಅಸ್ಥಿಪಂಜರಗಳು ಪುರುಷರದ್ದಾಗಿವೆ ಎಂದು ತಿಳಿದುಬಂದಿದೆ. ಧರ್ಮಸ್ಥಳದ ವಿರುದ್ಧ ಸುಜಾತಾ ಭಟ್ ಮಾತನಾಡಿದ್ದರು. ಕೊನೆಗೆ, ಧರ್ಮಸ್ಥಳದ ವಿರುದ್ಧ ಆರೋಪಗಳನ್ನು ಮಾಡಲು ಒತ್ತಾಯಿಸಲಾಯಿತು ಎಂದು ಒಪ್ಪಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ತನಿಖೆಯ ಸಮಯದಲ್ಲಿ, ಸುಜಾತಾ ಭಟ್ ಎಂಬ ಮಹಿಳೆಯನ್ನು 2003 ರಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಸುಳ್ಳು ದೂರು ದಾಖಲಿಸುವಂತೆ ಒತ್ತಾಯಿಸಲಾಯಿತು. ನಂತರ ಮಗಳ ಇದ್ದಳೆಂಬುದು ನಕಲಿ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಕೆಲವರ ಒತ್ತಾಯಕ್ಕೆ ಮಣಿದು ಹೀಗೆಲ್ಲ ಮಾಡಿದೆ ಎಂದಿದ್ದಾರೆ.
ಈ ಮುಸುಕುಧಾರಿ ವ್ಯಕ್ತಿಯ ಬಂಧನವನ್ನು ಪ್ರಕರಣದ ಅಂತ್ಯವೆಂದು ನೋಡಲಾಗುವುದಿಲ್ಲ. ಅವನಿಗೆ ಮಾರ್ಗದರ್ಶನ ನೀಡಿದವರು ಯಾರು? ಅವನಿಗೆ ಹಣಕಾಸು ಒದಗಿಸಿದವರು ಯಾರು? ಧರ್ಮಸ್ಥಳವನ್ನು ದೂಷಿಸುವುದರಿಂದ ಯಾರಿಗೆ ಲಾಭ? ಇವು ಕರ್ನಾಟಕ ಕಾಂಗ್ರೆಸ್ ಸರ್ಕಾರವು ಅನುಕೂಲಕರವಾಗಿ ಹೂತುಹಾಕಲು ಬಯಸುವ ಪ್ರಶ್ನೆಗಳಾಗಿವೆ. ಈ ಪಿತೂರಿಯ ನಿಜವಾದ ಸೂತ್ರಧಾರಿಗಳನ್ನು ಬಹಿರಂಗಪಡಿಸಬೇಕು ಮತ್ತು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅಣ್ಣಾಮಲೈ ಒತ್ತಾಯಿಸಿದ್ದಾರೆ.